ಮೈಸೂರು-ನಗರದ ಅರಮನೆ ಕೋಟೆ ಆಂಜನೇಯಸ್ವಾಮಿ ದೇವಸ್ಥಾನದ ಅರಮನೆ ಬಲರಾಮ ದ್ವಾರದಲ್ಲಿಂದು ಓವರ್‌ಲ್ಯಾಂಡ್ ಅಸೋಸಿಯೇಷನ್ ಆಫ್ ಇಂಡಿಯಾ ವತಿಯಿoದ ಅಲೆಮಾರಿ ಸಮಾವೇಶಕ್ಕೆ ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಸಂಸದರಾದ ಯದುವೀರ್ ಕೃಷ್ಣದತ್ತ ಚಾಮರಾಜ ಒಡಯರ್ ಅವರು ಚಾಲನೆ ನೀಡಿದರು.
ನಂತರ ಮಾತನಾಡಿ,ದೇಶದ ವಿವಿಧ ರಾಜ್ಯಗಳಿಂದ ಆಗಮಿಸಿರುವ ಪರಿಸರ ಪ್ರೇಮಿಗಳು ಇಂದು ಅಲೆಮಾರಿ ಸಮಾವೇಶವನ್ನು ಆಚರಿಸುತ್ತಿರುವುದು ತುಂಬಾ ಸoತೋಷದ ವಿಷಯ. ಪರಿಸರ ಸಂರಕ್ಷಣೆ ಮಾಡುವುದು ನಮ್ಮೆಲ್ಲರ ಜವಾಬ್ದಾರಿ. ಮುಂದಿನ ತಲೆಮಾರುಗಳಿಗೆ ನಾವೇನಾದರೂ ಬಿಟ್ಟು ಹೋಗುವ ಆಸ್ತಿ ಇದ್ದರೆ ಅದು ಪರಿಸರ ಮಾತ್ರ. ಉತ್ತಮ ಪರಿಸರ ಉತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಹಾಯವಾಗುತ್ತದೆ. ಆದ್ದರಿಂದ ಪರಿಸರವನ್ನು ರಕ್ಷಿಸಿ, ಕಾಪಾಡುವಲ್ಲಿ ಇಂದಿನ ಯುವ ಜನಾಂಗದ ಜವಾಬ್ದಾರಿಯಾಗಿದೆ ಅಭಿಪ್ರಾಯಿಸಿದರು.
ಈ ಸಮಾವೇಶದಲ್ಲಿ ದೇಶದ 24 ರಾಜ್ಯಗಳಿಂದ ತಮ್ಮ ತಮ್ಮ ವಾಹನಗಳಲ್ಲಿ ಭಾಷೆ, ಧರ್ಮ, ಬೇಧ ಮರೆತು ಎಲ್ಲರೂ ಒಗ್ಗಟ್ಟಾಗಿ ಕೂಡಿ, ಪರಿಸರ ಸಂರಕ್ಷಣೆಯಲ್ಲಿ ಕಾಳಜಿ ತೋರುತ್ತಿರುವುದು ಅತ್ಯಂತ ಶ್ಲಾಘನೀಯ ವಿಚಾರ.ಬಹಳ ಮುಖ್ಯವಾಗಿ ಪ್ಲಾಸ್ಟಿಕ್ ಮುಕ್ತ ಸಮಾಜ ನಿರ್ಮಾಣ ಮಾಡುವಲ್ಲಿ ಯುವ ಜನಾಂಗದ ಪಾತ್ರ ಬಹಳ ಮಹತ್ವದ್ದು ಎಂದರು.
ಓವರ್‌ಲ್ಯಾಂಡ್ ಅಸೋಸಿಯೇಷನ್‌ನ ರವೀನ್ ಬಿ.ವಿ. ಅವರು ಮಾತನಾಡಿ, ಕಾಡಿನ ಸುತ್ತಮುತ್ತ ವಾಸವಿರುವ ಗುಡ್ಡಗಾಡು ಮತ್ತು ಅಲೆಮಾರಿ ಜನಾಂಗಕ್ಕೆ ಆರೋಗ್ಯ ತಪಾಸಣೆ, ಉಚಿತ ಆಹಾರ ಧಾನ್ಯಗಳ ವಿತರಣೆ, ಹೊದಿಕೆ ಹಾಗೂ ದಿನನಿತ್ಯ ಉಪಯೋಗಕ್ಕೆ ಬೇಕಾಗಿರುವ ಅಗತ್ಯ ಸಾಮಗ್ರಿಗಳನ್ನು ಒದಗಿಸುವುದು ಮತ್ತು ಮಹಿಳೆಯರಲ್ಲಿ ಜಾಗೃತಿಯನ್ನು ಮೂಡಿಸಿ, ಶಿಕ್ಷಣದ ಅರಿವನ್ನು ಉಂಟು ಮಾಡುವುದು ಪ್ರಮುಖವಾಗಿದೆ.
ಪರಿಸರ ನಮಗೆ ಬದುಕಲು ಅವಕಾಶ ಮಾಡಿಕೊಟ್ಟಿದೆ. ಅದನ್ನು ಉಳಿಸಿ, ಬೆಳೆಸುವಲ್ಲಿ ನಾವು ಮುಂದಾಗಬೇಕು.ಈ ಸಮಾವೇಶದ ಮುಖ್ಯ ಧ್ಯೇಯ ವಾಹನದಲ್ಲಿಯೇ ದಿನದ ಬಹುತೇಕ ಸಮಯವನ್ನು ಕಳೆದು, ಪರಿಸರಕ್ಕೆ ಧಕ್ಕೆಯಾಗದಂತೆ ಅರಿವು ಮೂಡಿಸುವ ವಿಭಿನ್ನ ಪ್ರಯತ್ನವಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಓವರ್‌ಲ್ಯಾಂಡ್ ಅಸೋಸಿಯೇಷನ್‌ನ ಉಪಾಧ್ಯಕ್ಷರಾದ ಸತ್ಯಜಿತ್ ಸರ್ಕಾರ್, ರವೀನ್ ಬಿ.ವಿ., ಸಂಘಟಕ ರೋಹಿತ್, ಶ್ರೀಮತಿ ಮೀನಾಕ್ಷಿ, ಹಿಮಾಚಲ ಪ್ರದೇಶದಿಂದ ಆಗಮಿಸಿದ್ದ ಜಗಮೋಹನ್‌ಸೇಥಿ, ಶ್ರೀಮತಿ ಇಂದುಸೇಥಿ ಹಾಗೂ ಸಮಾವೇಶದಲ್ಲಿ ಪಾಲ್ಗೊಳ್ಳುವ ಪದಾಧಿಕಾರಿಗಳು ಉಪಸ್ಥಿತರಿದ್ದರು.
—————-ಅಶ್ವಿನಿ