ಮೈಸೂರು-ಅಂಬಾರಿ ಆನೆಗಳಿಗೆ ಪೂಜೆ ಸಲ್ಲಿಸುವ ಪ್ರಹ್ಲಾದ್ ರಾವ್ ರವರಿಗೆ ಜಿಲ್ಲಾ ಮಡಿವಾಳ ಸಂಘದ ವತಿಯಿಂದ ಸನ್ಮಾನ

ಮೈಸೂರು-ದಸರಾ ಆನೆಗಳಿಗೆ ಹಾಗು ಅಂಬಾರಿಗೆ ಕಳೆದ 27ವರ್ಷಗಳಿಂದ ಪೂಜಾ ಕಾರ್ಯಗಳನ್ನು ನಡೆಸಿಕೊಂಡು ಬರುತ್ತಿರುವ ಅರಮನೆಯ ಪುರೋಹಿತರಾದ ಪ್ರಹ್ಲಾದ್ ರಾವ್ ರವರಿಗೆ ಅಭಿನಂದನಾ ಸಮಾರಂಭವನ್ನು ಹಮ್ಮಿಕೊಂಡಿರುವ ಜಿಲ್ಲಾ ಮಡಿವಾಳ ಸಂಘದ ಕಾರ್ಯ ಅತ್ಯಂತ ಶ್ಲಾಘನೀಯವಾದದ್ದು ಎಂದು ಮಾಜಿ ಮೇಯರ್ ಪುರುಷೋತ್ತಮ್ ಹೇಳಿದರು.

ನಗರದ ಜಲಧರ್ಶಿನಿಯಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಮಡಿವಾಳ ಸಂಘದ ಪದಾಧಿಕಾರಿಗಳು ಇಂತಹ ಉತ್ತಮ ಕಾರ್ಯಗಳ ನಡೆಸುತ್ತ ಸಮಾಜಕ್ಕೆ ತಮ್ಮದೇ ಆದಂತಹ ಕೊಡುಗೆಗಳನ್ನು ನೀಡುತ್ತಾ ಬರುತ್ತಿದ್ದಾರೆ.ಈ ಕಾರ್ಯಕ್ರಮವು ಸಹ ಅದೇ ಸಾಲಿಗೆ ಸೇರುತ್ತದೆ.ಮುಂದಿನ ದಿನಗಳಲ್ಲೂ ನಿಮ್ಮಿಂದ ಇನ್ನಷ್ಟು ಸಮಾಜಮುಖಿ ಕಾರ್ಯಗಳ ನಾನು ನಿರೀಕ್ಷಿಸುತ್ತೇನೆಂದು ಪುರುಷೋತ್ತಮ್ ತಿಳಿಸಿದರು.

ಜಿಲ್ಲಾ  ಮಡಿವಾಳ ಸಂಘದ ಉಪಾಧ್ಯಕ್ಷರಾದ ಬಿ ಜಿ ಕೇಶವರವರು ಮಾತನಾಡಿ,ಕಳೆದ ಮೂರು ದಶಕಗಳಿಂದಲೂ ಪ್ರಹ್ಲಾದ್ ರಾವ್ ರವರು ದಸರಾ ಆನೆಗಳು ಹಾಗು ಅಂಬಾರಿಯ ಪೂಜಾ ಕಾರ್ಯವನ್ನು ನಡೆಸುತ್ತ ಬಂದಿದ್ದಾರೆ.ಮೈಸೂರು ಪರಂಪರೆ ಹಾಗು ಸಂಸ್ಕೃತಿಯನ್ನು ಬೆಳಗಿಸುವ ಕಾರ್ಯ ಇದಾಗಿದೆ.ಇಂದು ನಮ್ಮ ಸಂಘದ ವತಿಯಿಂದ ಮಾನ್ಯರನ್ನು ಸನ್ಮಾನಿಸುತ್ತಿರುವುದು ಅತ್ಯಂತ ಸಂತಸ ನೀಡಿದೆ ಎಂದರು.

ಈ ವೇಳೆ ಸನ್ಮಾನಿತರಾದ ಪ್ರಹ್ಲಾದ್ ರಾವ್ ರವರು ಮಾತನಾಡಿ ಈ ಬಾರಿಯ ದಸರಾದ ಸಂಭ್ರಮಕ್ಕೆ ಹಲವಾರು ಬಾರಿ ಅಂಬಾರಿ ಹೊತ್ತಿದ್ದ ಅರ್ಜುನನ ಸಾವು ಕೊರತೆ ತಂದಿದೆ.ಅದರ ಸ್ಮಾರಕವನ್ನು ಮೈಸೂರಿನಲ್ಲಿಯೂ ನಿರ್ಮಿಸಲು ಕ್ರಮ ಕೈಗೊಳ್ಳಬೇಕು.ಮಡಿವಾಳ ಸಂಘದ ಈ ಸನ್ಮಾನ ನನ್ನ ಸೇವೆಗೆ ಒಂದು ಹಿರಿಮೆ ಕೊಟ್ಟಂತಾಗಿದೆ.ತಾಯಿ ಚಾಮುಂಡೇಶ್ವರಿ ಸರ್ವರಿಗೂ ಸನ್ಮಾನಗಳಗಳನ್ನು ನೀಡಲಿ ಎಂದರು.

ಈ ಸನ್ಮಾನ ಸಮಾರಂಭದಲ್ಲಿ,ಮಾಜಿ ಮೂಡಾ ಅಧ್ಯಕ್ಷ ರಾಜೀವ್.,ಮೈಸೂರು ಮಹಾನಗರ ಪಾಲಿಕೆ ಮಾಜಿ ಮಹಾಪೌರರಾದ ಅನಂತು ಹಾಗೂ ಪುರುಷೋತ್ತಮ್.,ಮಾಜಿ ಅರಗು ಮತ್ತು ಬಣ್ಣದ ಕಾರ್ಖಾನೆ ಅಧ್ಯಕ್ಷರಾದ ಎಚ್ಎ ವೆಂಕಟೇಶ್,ಮಡಿವಾಳ ಜಿಲ್ಲಾ ಸಂಘದ ಅಧ್ಯಕ್ಷರಾದ ಸಿಂಗ್ರಿ ಶೆಟ್ಟರು,ಪ್ರಧಾನ ಕಾರ್ಯದರ್ಶಿ ಹನೂರು ನಾಗರಾಜು,ಉಪಾಧ್ಯಕ್ಷರಾದ ಬಿ ಜಿ ಕೇಶವ್,ಖಜಾಂಜಿ ಜಗದೀಶ್ ಕುಮಾರ್.ಪದಾಧಿಕಾರಿಗಳಾದ,ಹುಣಸೂರು ಮಹಾದೇವ.,ಕಿರಣ್ ,ಮಂಜು ಶೆಟ್ಟಿ.ಮಹೇಶ್ ,ಶ್ರೀ ರಾಮ್.,ವೆಂಕಟೇಶ್.ಹಾಜರಿದ್ದರು.

———————ಮಧುಕುಮಾರ್

Leave a Reply

Your email address will not be published. Required fields are marked *

× How can I help you?