ಮೈಸೂರು-ವಿದೇಶಿ ಪ್ರವಾಸಿಗರ ಅರಮನೆ ವೀಕ್ಷಣೆ ಶುಲ್ಕವನ್ನು 100 ರೊಪಾಯಿಗಳಿಂದ 1000ರೂಪಾಯಿಗಳಿಗೆ ದಿಢೀರ್ ಏರಿಕೆ ಮಾಡಿರುವ ಮೈಸೂರು ಅರಮನೆ ಮಂಡಳಿಯ ನಡೆಯನ್ನು ಮೈಸೂರು ಟ್ರಾವೆಲ್ಸ್ ಅಸೋಸಿಯೇಶನ್ ಅಧ್ಯಕ್ಷ ಬಿ.ಎಸ್.ಪ್ರಶಾಂತ್ ಖಂಡಿಸಿದ್ದಾರೆ.
ಈ ಸಂಬಂಧ ಪತ್ರಿಕಾ ಹೇಳಿಕೆಯೊಂದನ್ನು ಬಿಡುಗಡೆಗೊಳಿಸಿರುವ ಅವರು,ಟ್ರಾವೆಲ್ ಏಜನ್ಸಿ ಗಳು ತಿಂಗಳುಗಳ ಮೊದಲೇ ವಿದೇಶಿಗರಿಂದ ಅಡ್ವಾನ್ಸ್ ಬುಕಿಂಗ್ ಮಾಡಿಕೊಂಡಿರುತ್ತವೆ. ಬುಕಿಂಗ್ ಮಾಡಿಕೊಂಡ ಸಮಯದಲ್ಲಿ 100 ರೂಪಾಯಿಗಳಷ್ಟಿದ್ದ ಶುಲ್ಕವನ್ನು ದಿಢೀರ್ ಎಂದು ಯಾವುದೇ ಮಾಹಿತಿಯನ್ನು ನೀಡದೆ 1000 ರೂಪಾಯಿಗಳಿಗೆ ಏರಿಕೆ ಮಾಡಿರುವುದರಿಂದ ನಮಗೆ ತೀವ್ರ ತೊಂದರೆಯಾಗಲಿದೆ.
ಟಿಕೆಟ್ ದರವನ್ನು ಏರಿಸುವ ಮಾಹಿತಿಯನ್ನು ಕನಿಷ್ಠ ಪಕ್ಷ 6 ತಿಂಗಳ ಮುಂದಾದರು ನೀಡಬೇಕಿತ್ತು.ಈಗ ನಾವುಗಳು ವಿದೇಶಿ ಪ್ರವಾಸಿಗಳಿಂದ ಹೆಚ್ಚುವರಿ ಹಣವನ್ನು ಕೇಳಿ ಪಡೆಯಲು ಸಾಧ್ಯವಿಲ್ಲ.ಈ ಕಾರಣಕ್ಕೆ ಎಲ್ಲ ಟ್ರಾವೆಲ್ಸ್ ಏಜೆನ್ಸಿ ಗಳಿಗೂ ತೀವ್ರ ಆರ್ಥಿಕ ನಷ್ಟ ಉಂಟಾಗುತ್ತದೆ.ಮೊದಲೇ ಸಂಕಷ್ಟದಲ್ಲಿರುವ ನಾವುಗಳು ಇನ್ನು ಸಂಕಷ್ಟಕ್ಕೆ ಸಿಲುಕಿಕೊಳ್ಳುವ ಪರಿಸ್ಥಿತಿ ಬಂದೊದಗಿದೆ.
ಆದಕಾರಣ ಅರಮನೆ ಆಡಳಿತ ಮಂಡಳಿ ತಮ್ಮ ನಿರ್ಧಾರವನ್ನು ಮರು ಪರಿಶೀಲನೆ ನಡೆಸಿ ಶುಲ್ಕ ಏರಿಕೆಯನ್ನು ಮುಂದಕ್ಕೆ ಹಾಕಬೇಕು ಎಂದು ಬಿ.ಎಸ್.ಪ್ರಶಾಂತ್ ಒತ್ತಾಯಿಸಿದ್ದಾರೆ.
——————ಮಧುಕುಮಾರ್