
ಮೈಸೂರು-ದೇಶದ ಮಾಜಿ ಪ್ರಧಾನ ಮಂತ್ರಿಗಳಾದ ಶ್ರೀ ಅಟಲ್ ಬಿಹಾರಿ ವಾಜಪೇಯಿ ರವರ 100 ನೇ ವರ್ಷದ ಹುಟ್ಟು ಹಬ್ಬದ ಅಂಗವಾಗಿ ವಾರ್ಡ್ ನಂಬರ್ 51ರ ಸಂಸ್ಕೃತ ಪಾಠಶಾಲೆಯ ಭೂತ್ ಗಳಲ್ಲಿ ಇರುವ ಕಾರ್ಯಕರ್ತರೊಂದಿಗೆ ಸೇರಿ ಪೌರಕಾರ್ಮಿಕರಿಂದ ಸಸಿ ನೆಡೆಸುವ ಮೂಲಕ ವಿಶೇಷವಾಗಿ ಆಚರಿಸಲಾಯಿತು.

ಈ ಭಾಗದ ನಾಲ್ಕು ಭೂತ್ ಗಳಲ್ಲಿ ಕೆಲಸ ನಿರ್ವಹಿಸುವ ಪೌರಕಾರ್ಮಿಕರಲ್ಲಿ ಮಹಿಳಾ ಪೌರಕಾರ್ಮಿಕರಿಗೆ ಸೀರೆ,ಪುರುಷ ಪೌರಕಾರ್ಮಿಕರಿಗೆ ಷರ್ಟು ವಿತರಿಸಿ ಸಿಹಿ ಹಂಚುವ ಮೂಲಕ ಶಾಸಕರಾದ ಟಿ.ಎಸ್ ಶ್ರೀವತ್ಸರವರು ಗಿಡನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಕ್ಷೇತ್ರದ ಅಧ್ಯಕ್ಷರಾದ ಗೋಪಾಲ್ ರಾಜೇ ಅರಸ್, ಪ್ರಧಾನ ಕಾರ್ಯದರ್ಶಿ ಜಯಶಂಕರ್,ಎನ್ ಪ್ರದೀಪ್ ಕುಮಾರ್, ರಘುನಂದನ್, ಕಿಶೋರ್, ವಿ ರವಿ,ಭೂತ್ ಅಧ್ಯಕ್ಷರಾದ ವೆಂಕಟೇಶ್,ದೀಪಕ್,ನಟರಾಜ್,ಸಾಯಿ ಕುಮಾರ್,ವಾರ್ಡಿನ ಪ್ರಮುಖರಾದ ಸುರೇಶ್ ರವಿಕುಮಾರ್,ವಿನಯ್ ಚಂದ್ರು ಮುಂತಾದವರು ಇದ್ದರು.
—–———ಮಧುಕುಮಾರ್