ಮೈಸೂರು-ಬಿ.ಜೆ.ಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಹುಟ್ಟುಹಬ್ಬ-ಗಿಡಗಳನ್ನು ನೆಡುವ ಮೂಲಕ ಅರ್ಥಪೂರ್ಣ ಆಚರಣೆ

ಮೈಸೂರು-ಬಿ.ಜೆ.ಪಿ ರಾಜ್ಯಾಧ್ಯಕ್ಷರಾದ ಬಿ.ವೈ ವಿಜಯೇಂದ್ರ ರವರ ಹುಟ್ಟುಹಬ್ಬದ ಅಂಗವಾಗಿ ಮೈಸೂರು ನಗರದ ಹಿಂದುಳಿದ ವರ್ಗಗಳ ಮೋರ್ಚಾವತಿಯಿಂದ ಕೆ ಸಿ ಬಡಾವಣೆಯಲ್ಲಿರುವ ಉದ್ಯಾನವನದಲ್ಲಿ ನೂರಾರು ಗಿಡಗಳನ್ನು ನೆಡಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ರಾಜ್ಯ ಹಿಂದುಳಿದ ವರ್ಗಗಳ ಮೊರ್ಚಾದ ಅಧ್ಯಕ್ಷರಾದ ರಘು ಕೌಟಿಲ್ಯ,ಬಿ.ವೈ.ವಿಜಯೇಂದ್ರ ರವರ ಸಾಮಾಜಿಕ ಕಳಕಳಿಯ ಆಧಾರದ ಮೇಲೆ ಅವರ ಹುಟ್ಟುಹಬ್ಬದ ಸಂದರ್ಭದಲ್ಲಿ ಹಣ್ಣಿನ ಗಿಡಗಳನ್ನು ನೆಡಲಾಗಿದೆ.ರಾಜ್ಯದಾದ್ಯಂತ ಸರಿಸುಮಾರು 60 ಸಾವಿರ ಗಿಡಗಳನ್ನು ನೆಡುವ ಉದ್ದೇಶವಿದೆ.ಈ ಮೂಲಕ ವಿಶ್ವದ ಬಲಿಷ್ಠ ರಾಜಕೀಯ ಪಕ್ಷವೊಂದರ ರಾಜ್ಯ ಸಾರಥಿಯ ಹುಟ್ಟುಹಬ್ಬವನ್ನು ಬಹಳ ಅರ್ಥಪೂರ್ಣವಾಗಿ ಆಚರಿಸಲಾಗುತ್ತಿದೆ ಎಂದರು.

ಬಿಜೆಪಿಯ ಕಟ್ಟಾಳು ಬಿ ಎಸ್ ಯಡಯೂರಪ್ಪನವರ ಹಾದಿಯಲ್ಲಿಯೇ ನಡೆಯುತ್ತಿರುವ ಬಿ ವೈ ವಿಜಯೇಂದ್ರರಿಗೆ ತಾಯಿ ಚಾಮುಂಡೇಶ್ವರಿ ಹೆಚ್ಚಿನ ಆಯುರಾರೋಗ್ಯ ನೀಡಿ ಹರಸಲಿ ಎಂದು ರಘು ಕೌಟಿಲ್ಯ ಪ್ರಾರ್ಥಿಸಿದರು.

ನಗರ ಅಧ್ಯಕ್ಷರಾದ ಮೈ.ಪು.ರಾಜೇಶ್, ಕೆ.ಆರ್ ಕ್ಷೇತ್ರದ ಅಧ್ಯಕ್ಷರಾದ,ರಘು ಅರಸ್, ಹರೀಶ್, ನಗರ ಪ್ರಧಾನಕಾರ್ಯದರ್ಶಿ ಗಿರಿಧರ್,ಉಪಾಧ್ಯಕ್ಷ ಜೋಗಿಮಂಜು, ಮಾಜಿನಗರ ಪಾಲಿಕೆ ಸದಸ್ಯರಾದ ಛಾಯಾದೇವಿ, ಕೆ ಜೆ ರಮೇಶ್,ಬಾಬಣ್ಣಪ್ರಸನ್ನ, ಪ್ರಧಾನ ಕಾರ್ಯದರ್ಶಿಗಳಾದ ಉಪೇಂದ್ರ, ಗಿರೀಶ್,ಸತೀಶ್, ಗೋಕುಲ್ ಗೋವರ್ಧನ್, ಹರೀಶ್, ಚಂದ್ರು, ನಂದಾ ಸಿಂಗ್, ರವಿಶಂಕರ್, ಕೃಷ್ಣ, ಜಗದೀಶ್ ಮುಂತಾದವರು ಇದ್ದರು.

—————–-ಮಧುಕುಮಾರ್

Leave a Reply

Your email address will not be published. Required fields are marked *

× How can I help you?