ಮೈಸೂರು-ಎಲ್ಲರನ್ನೂ ಒಗ್ಗೂಡಿಸಿ ಸೌಹಾರ್ದ ಮತ್ತು ಆರೋಗ್ಯಕರ ಸಮಾಜ ನಿರ್ಮಾಣ ಮಾಡಲು ದಸರಾ ಮಹೋತ್ಸವ ಸಹಕಾರಿಯಾಗಲಿದೆ.ಆ ಮೂಲಕ ಈ ನೆಲದ ಸಂಸ್ಕೃತಿ ಹಾಗೂ ಬದುಕಿನ ಸಂದೇಶವನ್ನು ಎಲ್ಲರಿಗೂ ತಲು ಪಿಸುವುದೇ ಈ ಉತ್ಸವದ ಉದ್ದೇಶವಾಗಿದೆ ಎಂದು ರಾಜ್ಯ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಉಪಾಧ್ಯಕ್ಷರಾದ ಡಾ. ಬಿ. ಪುಷ್ಪ ಅಮರನಾಥ್ ಹೇಳಿದರು.
ಶ್ರೀ ದುರ್ಗಾ ಫೌಂಡೇಶನ್ ಹಾಗೂ ಡಾಕ್ಟರ್ ಎಂ ಶಾಂತ ರಾಮಕೃಷ್ಣ ಅಭಿಮಾನಿ ಬಳಗದ ವತಿಯಿಂದ ಹಮ್ಮಿಕೊಳಲಾಗಿದ್ದ ಮಾವುತ ಹಾಗೂ ಕಾವಾಡಿಗ ಕುಟುಂಬದ ಮಹಿಳೆಯರಿಗ ಬಾಗಿನ ವಿತರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ದಸರಾ ಗಜಪಡೆಗಳೊಂದಿಗೆ ಆಗಮಿಸಿರುವ ಮಾವುತ ಮತ್ತು ಕಾವಡಿಗಳ ಕುಟುಂಬದ ಮಹಿಳೆಯರಿಗೆ ಅರಮನೆ ಆವರಣದಲ್ಲಿ ಅರಿಶಿನ ಕುಂಕುಮ,ವೀಳ್ಯದೆಲೆ,ಬಾಳೆಹಣ್ಣು,ತೆಂಗಿನಕಾಯಿ,ಸೀರೆ ವಿತರಿಸುವ ಮೂಲಕ ಬಾಗಿನ ನೀಡುತ್ತಿರುವ ಶ್ರೀ ದುರ್ಗಾ ಫೌಂಡೇಶನ್ ಹಾಗೂ ಡಾಕ್ಟರ್ ಎಂ ಶಾಂತ ರಾಮಕೃಷ್ಣ ಅಭಿಮಾನಿ ಬಳಗ ಸದಸ್ಯರುಗಳ ಈ ಮಹತ್ ಕಾರ್ಯವನ್ನು ನಾನು ಅಭಿನಂದಿಸುತ್ತೇನೆ ಎಂದರು.
ನಂತರ ಮಾತನಾಡಿದ ಶ್ರೀ ದುರ್ಗಾ ಫೌಂಡೇಶನ್ ಅಧ್ಯಕ್ಷರಾದ ರೇಖಾ ಶ್ರೀನಿವಾಸ್, ನವರಾತ್ರಿಯ ಮೂಲಕ ಪ್ರಕೃತಿಗೆ ನಮಿಸಿ,ಪ್ರಕೃತಿಯ ಶಕ್ತಿ ತಾಯಿ ದುರ್ಗಾಮಾತೆಯನ್ನು ಸರ್ವ ಸ್ತ್ರೀಯರಲ್ಲೂ ಕಾಣುವುದೇ ನವರಾತ್ರಿ.ಈ ಕಾರಣಕ್ಕಾಗಿ ನಾವುಗಳು ಮಾವುತರ ಹಾಗು ಕಾವಾಡಿಗರ ಕುಟುಂಬದವರಿಗೆ ಬಾಗಿನ ನೀಡುವ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದೇವೆ ಎಂದರು.
ವಿಭಾಗದ ಡಿ ಸಿ ಎಫ್ ಡಾಕ್ಟರ್ ಐ ಬಿ ಪ್ರಭುಗೌಡ, ಸಮಾಜ ಸೇವಕರಾದ ಡಾಕ್ಟರ್ ಎಂ ಶಾಂತ ರಾಮಕೃಷ್ಣ, ಜೀವದಾರ ರಕ್ತ ನಿಧಿ ಕೇಂದ್ರದ ನಿರ್ದೇಶಕ ಗಿರೀಶ್,ನಾಗಮಣಿ ಜೆ, ದರ್ಶನ್,ರೇಣುಕಾ ಹೊರಕೇರಿ,ಸವಿತಾ ಘಾಟ್ಕೆ,ಸಂತೋಷ್ ಕಿರಾಳು, ಶಾರದಾ, ಹಾಗೂ ಇನ್ನಿತರರು ಹಾಜರಿದ್ದರು.
———————————--ಮಧುಕುಮಾರ್