ಮೈಸೂರು-ಸಮಾಜದ ರಕ್ಷಣೆ ಮತ್ತು ಸಮುದಾಯದ ಸಂಘಟನೆಗಾಗಿ ತ್ರಿಮಥಸ್ಥ ವಿಪ್ರರ ಒಗ್ಗಟ್ಟಿನ ಪ್ರದರ್ಶನ ಅವಶ್ಯಕವಿದೆ-ಅಶೋಕ ಹಾರನಹಳ್ಳಿ

ಮೈಸೂರು-ಸಮಾಜದ ರಕ್ಷಣೆ ಮತ್ತು ಸಮುದಾಯದ ಸಂಘಟನೆಗಾಗಿ ತ್ರಿಮಥಸ್ಥ ವಿಪ್ರರ ಒಗ್ಗಟ್ಟಿನ ಪ್ರದರ್ಶನ ಅವಶ್ಯಕವಿದೆ ಎಂದು ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ರಾಜ್ಯ ಅಧ್ಯಕ್ಷರಾದ ಅಶೋಕ ಹಾರನಹಳ್ಳಿ ಹೇಳಿದರು.

ನಗರದ ಕೃಷ್ಣಮೂರ್ತಿಪುರಂನಲ್ಲಿರುವ ಶ್ರೀರಾಮ ಮಂದಿರದಲ್ಲಿ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಹಾಗೂ ಮೈಸೂರು ನಗರ ಹಾಗೂ ಜಿಲ್ಲಾ ಬ್ರಾಹ್ಮಣ ಸಂಘದ ವತಿಯಿಂದ ಸುವರ್ಣ ಸಂಭ್ರಮ ಹಾಗೂ ಜನವರಿ 18,19 ನೇ ತಾರೀಕು ಹಮ್ಮಿಕೊಳ್ಳಲಾಗಿರುವ 11ನೇ ರಾಜ್ಯಮಟ್ಟದ ವಿಪ್ರ ಬೃಹತ್ ಸಮ್ಮೇಳನದ ಪೂರ್ವಭಾವಿ ಸಭೆ ಉದ್ದೇಶಿಸಿ ಮಾತನಾಡಿದ ಅವರು,ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ನಡೆಯಲಿರುವ ರಾಜ್ಯಮಟ್ಟದ ವಿಪ್ರ ಸಮಾವೇಶಕ್ಕೆ ರಾಜ್ಯದ ವಿವಿಧ ಜಿಲ್ಲೆಗಳಿಂದ ಲಕ್ಷಾಂತರ ವಿಪ್ರರು ಸೇರಲಿದ್ದಾರೆ.ಸಮಾವೇಶದಲ್ಲಿ ವಿವಿಧ ಗೋಷ್ಠಿಗಳನ್ನ ಆಯೋಜಿಸಿದ್ದು ಸಾಕಷ್ಟು ಚರ್ಚೆಗಳು ನಡೆಯಲಿವೆ ಅವನ್ನ ನಿರ್ಣಯಿಸಿ ಸರ್ಕಾರದ ಗಮನಕ್ಕೆ ತರಲಾಗುವುದು.ವಿಧಾನಸೌದಕ್ಕೆ ವಿಪ್ರರ ಕೂಗು ತಲುಪಲಿದೆ,ಮಠಾಧಿಪತಿಗಳು ಮಂತ್ರಿಗಳು ಜನಪ್ರತಿನಿಧಿಗಳು ಉದ್ಯಮಿಗಳು ಕಲಾವಿದರು ಸಹ ಮೆರಗು ನೀಡಲು ಭಾಗವಹಿಸಲಿದ್ದಾರೆ ಎಂದರು.

ಶಾಸಕರಾದ ಟಿ ಎಸ್ ಶ್ರೀವತ್ಸ ರವರು ಮಾತನಾಡಿ ವಿಪ್ರ ಸಮುದಾಯದ ಸಂಘಟನೆಯ ವಿವಿಧ ಕ್ಷೇತ್ರದ ಪ್ರತಿಭೆಗಳನ್ನ ಗುರುತಿಸಲಾಗುವುದು.ರಾಜ್ಯ ಸರ್ಕಾರದಿಂದ ಬ್ರಾಹ್ಮಣ ಸಮುದಾಯಕ್ಕೆ ಸವಲತ್ತು ಆಗ್ರಹಿಸಿ ಸಮಾವೇಶದ ಮೂಲಕ ಗಮನ ಸೆಳೆಯಲಾಗುವುದು ಎಂದು ತಿಳಿಸಿದರು.

ಮೈಸೂರು ನಗರ ಮತ್ತು ಜಿಲ್ಲಾ ಬ್ರಾಹ್ಮಣ ಸಂಘದ ಅಧ್ಯಕ್ಷರಾದ ಡಿ ಟಿ ಪ್ರಕಾಶ್ ಮಾತನಾಡಿ, ಬೆಂಗಳೂರಿನ ವಿಪ್ರ ಸಮಾವೇಶಕ್ಕೆ ಮೈಸೂರಿನಿಂದ 5ಸಾವಿರ ವಿಪ್ರರು ಭಾಗವಹಿಸುವ ನಿರೀಕ್ಷೆಯಿದೆ.ಆರ್ಥಿಕವಾಗಿ ಹಿಂದುಳಿದ ಬ್ರಾಹ್ಮಣರಿಗೆ ಸರ್ಕಾರಿ ಸವಲತ್ತು ಕೊಡಿಸಲು ಕೇಂದ್ರ ರಾಜ್ಯ ಸರ್ಕಾರಕ್ಕೆ ಆಗ್ರಹಿಸಲಾಗುವುದು.ಶಿಕ್ಷಣ ಉದ್ಯೋಗ ಅರೋಗ್ಯ ಸಹಕಾರಿ ಸಾಂಸ್ಕೃತಿಕ ಕ್ಷೇತ್ರದಲ್ಲಿ ಯುವ ಪೀಳಿಗೆಯನ್ನ ಕರೆ ತರಲು ಸಮಾವೇಶ ಆಯೋಸಲಾಗಿದೆ ಎಂದರು. ಸಮಾವೇಶಕ್ಕೆ ನಾವೆಲ್ಲರೂ ತನು ಮನ ಧನ ದಿಂದ ಸಹಕರಿಸೋಣ ವಿಪ್ರರ ಶಕ್ತಿ ಪ್ರದರ್ಶಿಸೋಣ
ಎಂದು ಕರೆ ನೀಡಿದರು

ಇದೇ ಸಂದರ್ಭದಲ್ಲಿ ಧಾರ್ಮಿಕ ಮುಖಂಡರಾದ ಭಾನುಪ್ರಕಾಶ್ ಶರ್ಮ, ಹೊಯ್ಸಳ ಕರ್ನಾಟಕ ಸಂಘದ ಅಧ್ಯಕ್ಷರಾದ ಕೆ ಆರ್ ಸತ್ಯನಾರಾಯಣ್, ಗ್ರಾಮಾಂತರ ಅಧ್ಯಕ್ಷರಾದ ಗೋಪಾಲ್ ರಾವ್, ಹೋಟೆಲ್ ಮಾಲೀಕರ ಸಂಘದ ರಾಜ್ಯ ಉಪಾಧ್ಯಕ್ಷ ರವಿಶಾಸ್ತ್ರಿ, ಬಿಜೆಪಿ ಮುಖಂಡರಾದ ಮೈ ವಿ ರವಿಶಂಕರ್, ಹಿರಿಯ ಸಾಹಿತಿಗಳಾದ ಪುಷ್ಪ ಅಯ್ಯಂಗಾರ್, ಮಾಜಿನಗರ ಪಾಲಿಕಾ ಸದಸ್ಯರಾದ ಸೌಭಾಗ್ಯ ಮೂರ್ತಿ, ಎಂ ಡಿ ಪಾರ್ಥಸಾರಥಿ ಮೈಸೂರು ಜಿಲ್ಲಾ ಬ್ರಾಹ್ಮಣ ಯುವ ವೇದಿಕೆ ಪ್ರಧಾನ ಕಾರ್ಯದರ್ಶಿ ವಿಕ್ರಂ ಅಯ್ಯಂಗಾರ್, ಎಂ ಆರ್ ಬಾಲಕೃಷ್ಣ, ಸಂಘಟನಾ ಕಾರ್ಯದರ್ಶಿ ಅಜಯ್ ಶಾಸ್ತ್ರಿ, ರಾಕೇಶ್ ಭಟ್, ಕೆ ಎಂ ನಿಶಾಂತ್, ಎಂ ಆರ್ ಬಾಲಕೃಷ್ಣ,ಕಡಕೋಳ ಜಗದೀಶ್, ಮಂಜು ಸಿ ಶಂಕರ್, ಸುಚೇಂದ್ರ, ಜಯಸಿಂಹ, ಚಕ್ರಪಾಣಿ, ರಂಗನಾಥ್, ಮಹೇಶ್ , ಲತಾ ಬಾಲಕೃಷ್ಣ, ಜ್ಯೋತಿ, ಹಾಗೂ ಇನ್ನಿತರ ಬ್ರಾಹ್ಮಣ ಸಂಘದ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಹಾಜರಿದ್ದರು.

—————-ಮಧುಕುಮಾರ್

Leave a Reply

Your email address will not be published. Required fields are marked *

× How can I help you?