ಮೈಸೂರು-ನಾಡ ಹಬ್ಬ ದಸರಾ ಯಶಸ್ವಿ ಹಿನ್ನೆಲೆಯಲ್ಲಿ ಪೌರಕಾರ್ಮಿ ಕರಿಗೆ ಸಮವಸ್ತ್ರ ಸಿಹಿ ವಿತರಣೆ-ಪೌರ ಕಾರ್ಮಿಕರ ಶ್ರಮದ ಅರಿವಿರಲಿ :ಹರೀಶ್ ಗೌಡ

ಮೈಸೂರು-ಪೌರ ಕಾರ್ಮಿಕರು ಸೂರ್ಯೋದಯ ಆಗುವಷ್ಟರಲ್ಲೇ ಕೆಲಸ ಶುರು ಮಾಡುತ್ತಾರೆ. ನಗರದ ಕೊಳೆಯನ್ನು ಸ್ವಚ್ಛ ಮಾಡುತ್ತಾರೆ. ಕಸವನ್ನು ಎಸೆಯುವ ಮೊದಲು, ಸ್ವಚ್ಛತೆಗೆ ಪೌರ ಕಾರ್ಮಿಕರ ಶ್ರಮವನ್ನು ನಾವೆಲ್ಲರೂ ಅರ್ಥ ಮಾಡಿಕೊಳ್ಳಬೇಕು. ಅವರು ನಗರದ ಆರೋಗ್ಯ ರಕ್ಷಕರು’ ಎಂದು ಶಾಸಕ ಹರೀಶ್ ಗೌಡ ಹೇಳಿದರು.

ನಗರದ ದೇವರಾಜ ಮೊಹಲ್ಲಾ ಬಿಡಾರ ಕೃಷ್ಣಪ್ಪ ರಸ್ತೆಯಲ್ಲಿರುವ ಉದ್ಯಾನವನದಲ್ಲಿ ದಸರಾ ಯಶಸ್ವಿಗೊಳಿಸಿದ ಹಿನ್ನೆಲೆಯಲ್ಲಿ ವಾರ್ಡ್ ನಂಬರ್ 23ರ ಸ್ವಚ್ಛತಾ ಸೇನಾನಿ ಗಳಾದ ಪೌರಕಾರ್ಮಿಕರಿಗೆ ಹಾಗೂ ಒಳಚರಂಡಿ ವಿಭಾಗದ ಕಾರ್ಮಿಕರು ಹಾಗೂ ನೀರು ಸರಬರಾಜು ಅವರ ಕಾರ್ಮಿಕ ಸಿಬ್ಬಂದಿಗಳಿಗೆ ಸಮವಸ್ತ್ರ ಹಾಗೂ ಸಿಹಿ ವಿತರಿಸಿ ಅಭಿನಂದನೆ ಸಲ್ಲಿಸಿ ಅವರು ಮಾತನಾಡಿದರು.

ಪೌರಕಾರ್ಮಿಕರು ಪ್ರತಿ ವರ್ಷದಂತೆ ಈ ವರ್ಷವೂ ಸಹ ದಸರಾ ಸಂದರ್ಭದಲ್ಲಿ ನಗರವನ್ನು ಸ್ವಚ್ಛತೆಗೊಳಿಸುವ ಮೂಲಕ ಮೈಸೂರಿನ ಸೌಂದರ್ಯವನ್ನು ಹೆಚ್ಚಿಸುವ ಮೂಲಕ ಹಿರಿಮೆ ತಂದಿದ್ದಾರೆ.

ಬೆಳಿಗ್ಗೆ ಸ್ವಚ್ಛ ಮಾಡಿದ್ದರೂ ಸಂಜೆಯಷ್ಟರಲ್ಲಿ ಮತ್ತಷ್ಟೇ ಕಸ ತುಂಬಿರುತ್ತದೆ. ಸ್ವಚ್ಛತೆಯ ಬಗ್ಗೆ ನಾಗರಿಕರಲ್ಲಿ ಇನ್ನಷ್ಟು ಅರಿವು ಬೆಳೆಯಬೇಕು. ನಗರ ಸ್ವಚ್ಛವಾಗುವುದರ ಜೊತೆಗೇ ನಮ್ಮ ವಿಚಾರಗಳಲ್ಲೂ ಬದಲಾವಣೆ ತಂದುಕೊಳ್ಳಬೇಕು. ಸ್ವಚ್ಛತೆ ಕಾಪಾಡುವಲ್ಲಿ ನಾವೇನು ಮಾಡಿದ್ದೇವೆ ಎಂದು ಪರಾಮರ್ಶೆ ಮಾಡಿಕೊಳ್ಳಬೇಕು’ ಎಂದರು.

ಈ ಸಂದರ್ಭದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷರಾದ ವಿನಯ್, ಕಾಂಗ್ರೆಸ್ ಮುಖಂಡರುಗಳಾದ ರಾಜೀವ್ ನವೀನ್, ಆನಂದ್,ಜ್ಞಾನೇಶ್ ರವಿಚಂದ್ರ, ಮಂಜುಳಾ, ಶಾಂತ ಮಂಗಳ ,ಲೀಲಾ, ಪವನ್, ನಂಜುಂಡಿ, ಹರೀಶ್ ಗೌಡ, ಈರೇಗೌಡ, ಗುರುರಾಜ್, ನಿತಿನ್, ಪ್ರಜ್ವಲ್, ಹರ್ಷ, ಮಂಜುನಾಥ್, ಎಸ್ ಎನ್ ರಾಜೇಶ್, ಉಪಸ್ಥಿತರಿದ್ದರು.

——————–-ಮಧುಕುಮಾರ್

Leave a Reply

Your email address will not be published. Required fields are marked *

× How can I help you?