ಮೈಸೂರು-ಡಾ ವಿಷ್ಣುವರ್ಧನ್ ಸಮಾಜವನ್ನು ಆರೋಗ್ಯಕರ ಚಿಂತನೆಗೆ ಹಚ್ಚುವಂತಹ ಸಿನಿಮಾಗಳಲ್ಲಿ ನಟಿಸುತ್ತಿದ್ದರು-ಮೇರು ನಟನ ಆದರ್ಶಮಯ ಜೀವನ ಮಾದರಿಯಾದದ್ದು-ಡಾ.ರೇಖಾ ಅರುಣ್

ಮೈಸೂರು:ಅಭಿಮಾನಿಗಳ ಅಚ್ಚುಮೆಚ್ಚಿನ ನಟ ಡಾ.ವಿಷ್ಣುವರ್ಧನ್.ಮೇರು ನಟನ ಆದರ್ಶಮಯ ಜೀವನ ಮಾದರಿಯಾಗಿದ್ದು,ಸದಾಕಾಲವೂ ಸ್ಥಿತ ಪ್ರಜ್ಞೆ ಹೊಂದಿದ್ದ ಅವರು,ಸಮಾಜವನ್ನು ಆರೋಗ್ಯಕರ ಚಿಂತನೆಗೆ ಹಚ್ಚುವಂತಹ ಸಿನಿಮಾಗಳಲ್ಲಿ ನಟಿಸುತ್ತಿದ್ದರು ಎಂದು ಸ್ತ್ರೀ ರೋಗ ತಜ್ಞೆ ಡಾ.ರೇಖಾ ಅರುಣ್ ಹೇಳಿದರು.

ಪುರಭವನದಲ್ಲಿ ಸಾಹಸಸಿಂಹ ಡಾಕ್ಟರ್ ವಿಷ್ಣುವರ್ಧನ್ ರವರ 74 ನೇ ವರ್ಷದ ಜನ್ಮದಿನದ ಅಂಗವಾಗಿ ಶ್ರೀ ಗಣೇಶ ಮ್ಯೂಸಿಕಲ್ ಗ್ರೂಪ್ಸ್ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಡಾಕ್ಟರ್ ವಿಷ್ಣುವರ್ಧನ್ ಅಭಿನಯದ ಗೀತೆಗಳ ಕರೋಕೆ ಗಾಯನ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಅಭಿಮಾನಿಗಳ ಅಚ್ಚುಮೆಚ್ಚಿನ ನಟರಾಗಿದ್ದ ಡಾ.ವಿಷ್ಣುವರ್ಧನ್ ರ ಜೀವನ ಶೈಲಿ ಮಾದರಿಯಾಗಿದ್ದು,ಸದಾಕಾಲವೂ ಸ್ಥಿತ ಪ್ರಜ್ಞೆ ಹೊಂದಿದ್ದ ಅವರು,ಸಮಾಜವನ್ನು ಆರೋಗ್ಯಕರ ಚಿಂತನೆಗೆ ಹಚ್ಚುವಂತಹ ಸಿನಿಮಾಗಳಲ್ಲಿ ನಟಿಸುತ್ತಿದ್ದರು.ಕನ್ನಡದ ಬಗೆಗೆ ವಿಶೇಷ ಪ್ರೀತಿ ಹೊಂದಿದ್ದರು.ಕಳಂಕರಹಿತರಾಗಿ ಬಾಳಿದ ವಿಷ್ಣು ಅವರು ಯುವ ಸಮುದಾಯದ ಬಗ್ಗೆ ಹೆಚ್ಚು ಒಲವು ಬೆಳೆಸಿಕೊಂಡಿದ್ದರು ಎಂದರು.

ಸಂಗೀತ ಕಾರ್ಯಕ್ರಮದ ಬಗ್ಗೆ ಮಾತನಾಡಿದ ಡಾ ರೇಖಾ ಅರುಣ್ ಮಾನಸಿಕ ಸಮಸ್ಯೆಗಳಿಂದ ಮುಕ್ತವಾಗಬೇಕಿದ್ದರೆ ಸಾಹಿತ್ಯ ಸಂಗೀತದ ಅಭಿರುಚಿ ಬೆಳೆಸಿಕೊಳ್ಳಬೇಕು ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಮೇಲುಕೋಟೆ ವಂಗಿಪುರ ಮಠದ ಇಳೈ ಆಳ್ವಾರ್ ಸ್ವಾಮೀಜಿ
ಕನ್ನಡ ನಾಡು–ನುಡಿ ಬಗೆಗೆ ಅಪಾರ ಕಳಕಳಿ ಹೊಂದಿದ್ದ ಡಾ.ವಿಷ್ಣುವರ್ಧನ್ ಅವರು ಕನ್ನಡ ಚಿತ್ರರಂಗ ಕಂಡ ಶ್ರೇಷ್ಠ ಕಲಾವಿದ ಎಂದು ಶ್ಲಾಘಿಸಿದರು.ಯುವಜನರಲ್ಲಿ ಭಾಷಾಭಿಮಾನ ಮತ್ತು ದೇಶಾಭಿಮಾನ ಮೂಡಿಸುವಂತಹ ಸದಭಿರುಚಿ ಚಿತ್ರಗಳಲ್ಲಿ ನಟಿಸಿ ಜನಮನ್ನಣೆ ಗಳಿಸಿದ್ದ ಅವರ ಜೀವನ ಕಿರಿಯ ನಟರಿಗೆ ಮಾದರಿ ಎಂದರು.

ಹೃದಯ ತಜ್ಞರು ಡಾ. ಮಂಜುನಾಥ್,ಖ್ಯಾತ ಮನೋಶಾಸ್ತ್ರಜ್ಞರಾದ ಡಾ|| ರೇಖಾ ಮನಃಶಾಂತಿ,ಕೆ.ಎಂ.ಪಿ.ಕೆ ಚಾರಿಟೇಬಲ್ ಟ್ರಸ್ಟ್ ನ ಅಧ್ಯಕ್ಷ ವಿಕ್ರಂ ಅಯ್ಯಂಗಾರ್ ,ಶ್ರೀ ಗಣೇಶ ಮ್ಯೂಸಿಕಲ್ ಗ್ರೂಪ್ಸ್ ಸಂಸ್ಥಾಪಕರಾದ ಎ ಕಾಂತರಾಜು,ಗಾಯಕರಾದ ಬಿ ನವೀನ್ ಕುಮಾರ್,ಜಯಲಕ್ಷ್ಮಿ ನಾಯ್ಡು, ಲಕ್ಷ್ಮಿ, ಗುರುರಾಜ್, ಹಾಗೂ ಇನ್ನಿತರರು ಹಾಜರಿದ್ದರು.

————————-–ಮಧುಕುಮಾರ್

Leave a Reply

Your email address will not be published. Required fields are marked *

× How can I help you?