ಮೈಸೂರು-ನಮ್ಮ ಪರಂಪರೆ ಮತ್ತು ಸಂಸ್ಕೃತಿಯ ಉಳಿವಿಗಾಗಿ ಹೋರಾಡುವ ಸಂದರ್ಭ ಎದುರಾಗಿದೆ-ಕೆ ರಘುರಾಮ್ ವಾಜಪೇಯಿ

ಮೈಸೂರು-ನಮ್ಮ ಪರಂಪರೆ ಮತ್ತು ಸಂಸ್ಕೃತಿಯ ಉಳಿವಿಗಾಗಿ ಹೋರಾಡುವ ಸಂದರ್ಭ ಎದುರಾಗಿದೆ.ಪ್ರತಿಯೊಬ್ಬರು ಅದಕ್ಕಾಗಿ ಶ್ರಮಿಸಬೇಕು.ನಮ್ಮ ಸಂಪ್ರದಾಯ ಮತ್ತು ಧಾರ್ಮಿಕತೆಯ ರಕ್ಷಣೆಗಾಗಿ ಪ್ರತಿಯೊಬ್ಬ ಹಿಂದುಗಳು ಒಗ್ಗಟ್ಟಾಗಿ ಕಲೆತು ಮುಂದಿನ ಪೀಳಿಗೆಗೆ ಸಂರಕ್ಷಿಸಬೇಕು ಎಂದು ಕೆ ರಘುರಾಮ್ ವಾಜಪೇಯಿ ಕರೆ ನೀಡಿದರು.

ಅವರು ನಗರದ ರಾಮಾನುಜ ರಸ್ತೆಯಲ್ಲಿರುವ ನಮೋ ಯೋಗ ಭವನದಲ್ಲಿ ಶ್ರೀ ದುರ್ಗಾ ಫೌಂಡೇಶನ್ ಟ್ರಸ್ಟ್ ಆಯೋಜಿಸಿದ್ದ ‘ಮನೆ ಮನೆ ಗೊಂಬೆ ಕೂರಿಸುವ ಸ್ಪರ್ಧೆ’ ಕಾರ್ಯಕ್ರಮದಲ್ಲಿ ಭಾಗವಹಿಸಿ ವಿಜೇತರಾದ ಗ್ರಹಿಣಿಯರಿಗೆ ಬಹುಮಾನ ವಿತರಿಸಿ ಮಾತನಾಡಿದರು.

ಮೈಸೂರು ನಗರ ಮತ್ತು ಜಿಲ್ಲಾ ಬ್ರಾಹ್ಮಣ ಸಂಘದ ಅಧ್ಯಕ್ಷರಾದ ಡಿ ಟಿ ಪ್ರಕಾಶ್ ಮಾತನಾಡಿ, ನವರಾತ್ರಿಯು ಮೈಸೂರು ಪರಂಪರೆಯಲ್ಲಿ ಅತ್ಯಂತ ಪವಿತ್ರವಾದದ್ದು ದಸರಾ ಗೊಂಬೆ ಪ್ರದರ್ಶನ ಅದಕ್ಕೆ ಅತ್ಯಂತ ಮಹತ್ವವಿದೆ .ಪಟ್ಟದ ಗೊಂಬೆಗಳನ್ನು ಲಕ್ಷ್ಮಿನಾರಾಯಣ ಸ್ವರೂಪದಲ್ಲಿ ಪೂಜಿಸಿ ಪುರಾಣ ಪುಣ್ಯಕಥೆಗಳನ್ನು ಗೊಂಬೆಗಳ ಮೂಲಕ ರೂಪಕವಾಗಿ ಪ್ರಚುರಪಡಿಸಿ ಅದನ್ನು ಮುಂದಿನ ಪೀಳಿಗೆಗೆ ಪರಿಚಯಿಸುವುದೇ ಇದರ ಮೂಲ ಉದ್ದೇಶ. ಮನೆ-ಮನೆಗಳಲ್ಲಿ ಗೊಂಬೆಗಳ ಕೂರಿಸುವ ಮೂಲಕ ಗೃಹಿಣಿಯರು ನಮ್ಮ ಪರಂಪರೆಯನ್ನು ಉಳಿಸಿ ಬೆಳೆಸುತ್ತಿದ್ದಾರೆ ಎಂದು ಹರ್ಷ ವ್ಯಕ್ತಪಡಿಸಿದರು.

ಕಾಂಗ್ರೆಸ್ ಮುಖಂಡರಾದ ಎನ್ ಎಂ ನವೀನ್ ಕುಮಾರ್ ಮಾತನಾಡಿ, ಇಂತಹ ಸ್ಪರ್ಧೆಗಳು ನಮ್ಮ ಸಂಸ್ಕಾರ ಸಂಸ್ಕೃತಿ ಹಾಗೂ ಮೈಸೂರಿನ ಹಿರಿಮೆ ಹೆಚ್ಚಿಸುವಲ್ಲಿ ಪಾತ್ರ ವಹಿಸುತ್ತವೆ ಎಂದರು.

80ಕ್ಕೂ ಹೆಚ್ಚು ಸ್ಪರ್ಧಿಗಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದರೆಂದು ಶ್ರೀ ದುರ್ಗಾ ಫೌಂಡೇಶನ್ ಟ್ರಸ್ಟ್ ನ ಅಧ್ಯಕ್ಷರಾದ ರೇಖಾ ಶ್ರೀನಿವಾಸ್ ತಿಳಿಸಿದರು.

ಜೀವದಾರ ರಕ್ತ ನಿಧಿ ಕೇಂದ್ರದ ನಿರ್ದೇಶಕ ಗಿರೀಶ್,ಎನ್ ಐ ಇ ಕಾಲೇಜಿನ ಪ್ರೊಫೆಸರ್ ಡಾಕ್ಟರ್ ಸಿ ಕೆ ವನಮಾಲ,ಅಂಬಾಭವಾನಿ ಸಮಾಜ ಮಹಿಳಾ ಅಧ್ಯಕ್ಷರಾದ ಸವಿತಾ ಘಾಟ್ಕೆ , ಗ್ರಾಜಿಯೇಟ್ ಕೋ ಆಪರೇಟಿವ್ ಬ್ಯಾಂಕ್ ನ ನಿರ್ದೇಶಕರಾದ ವರಲಕ್ಷ್ಮಿ ಅಜಯ್, ಚಕ್ರಪಾಣಿ, ಮಹಾನ್ ಶ್ರೇಯಸ್, ಜಯಶ್ರೀ ಶಿವರಾಂ, ಹಾಗೂ ಇನ್ನಿತರರು ಹಾಜರಿದ್ದರು.

——————-——ಮಧುಕುಮಾರ್

Leave a Reply

Your email address will not be published. Required fields are marked *

× How can I help you?