ಮೈಸೂರು-ನಗರದ ಕುಂಪುನಗರದ ಪ್ರಸನ್ನ ಶಿವಲಿಂಗೇಶ್ವರ ಸ್ವಾಮಿ ದೇವಾಲಯದ ಮುಂದೆ ಹೆಚ್.ವಿ ರಾಜೀವ್ ಸ್ನೇಹ ಬಳಗದ ಆರ್ ಕುಮಾರ್ ನೇತೃತ್ವದಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ಕೂಡ ಸಾವಿರಾರು ತುಳಸಿ ಮತ್ತು ಬೆಟ್ಟದನಲ್ಲಿ ಕಾಯಿ ಗಿಡಗಳನ್ನು ಸಾರ್ವಜನಿಕರಿಗೆ ವಿತರಿಸಲಾಯಿತು.
ಇದೇ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ರೈತ ಮಹಿಳೆ ಗವ್ಯಸಿದ್ದರ್ ಸ್ವರೂಪಿಣಿ ಮಾತನಾಡಿ “ತುಳಸಿ ಹಬ್ಬದ ಪ್ರಯುಕ್ತ ತುಳಸಿ ಹಾಗು ಬೆಟ್ಟದ ನೆಲ್ಲಿಕಾಯಿಯನ್ನು ಹಂಚುವುದು ನಿಜಕ್ಕೂ ಒಳ್ಳೆಯ ವಿಚಾರ.ಇದರಿಂದ ಜನರಲ್ಲಿ ಧಾರ್ಮಿಕತೆಯು ಬೆಳೆಯುತ್ತದೆ.ಜೊತೆಗೆ ಪರಿಸರದ ಸಂರಕ್ಷಣೆಯು ಆಗುತ್ತದೆ .ಈ ಕಾರ್ಯ ಮಾಡುತ್ತಿರುವ ಸ್ನೇಹ ಬಳಗಕ್ಕೆ ನನ್ನ ಧನ್ಯವಾದಗಳನ್ನು ಅರ್ಪಿಸುತ್ತೇನೆ ಎಂದರು.
ಹುಡ್ಕೋ ಕುಮಾರ್, ದೇವಾಲಯದ ಅಧ್ಯಕ್ಷ ಜೆ. ಆರ್. ಶ್ರೀ ರಂಗಯ್ಯ. ಬಿ.ಪಿ ಪುಟ್ಟಸ್ವಾಮಿ( ಗೌರವಾಧ್ಯಕ್ಷರು) ಎಲ್. ಲೋಕೇಶ್. (ಪೂರ್ಣಪ್ರಜ್ಞ ಶಾಲೆ) ಸೈಲೆಂದರ್ (ಉಪಾಧ್ಯಕ್ಷರು) ಅರವಿಂದ ಉಪಾಧ್ಯಕ್ಷರು. ಎಸ್.ಪಿ. ತ್ಯಾಗರಾಜ್( ಖಜಾಂಜಿ) ಬಿ. ಶ್ರೀಕಾಂತ್ ಕಾರ್ಯದರ್ಶಿ ಹಾಗೂ ರೇವಣ್ಣ. ಮತ್ತಿತರ ಪದಾಧಿಕಾರಿಗಳು ಉಪಸ್ಥಿತರಿದ್ದರು.