ಮೈಸೂರು-ಸಚಿವ ಜಮೀರ್ ರಿಂದ ನಿಂದನೆ-ಸಚಿವ ಸ್ಥಾನದಿಂದ ವಜಾಗೊಳಿಸಿ ಹುಚ್ಚಾಸ್ಪತ್ರೆಗೆ ಸೇರಿಸಿ ಎಂದ ಒಕ್ಕಲಿಗರ ಸಂಘ

ಮೈಸೂರು-ಮಾಜಿ ಸಿ ಎಂ ಹಾಲಿ ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ ಯವರನ್ನು ಕರಿಯ ಹಾಗು ನಿಮ್ಮ ಕುಟುಂಬವನ್ನು ಮುಸಲ್ಮಾನರು ಖರೀದಿಸುವ ತಾಕತ್ತನ್ನು ಹೊಂದಿದ್ದಾರೆ ಎಂದು ಚನ್ನಪಟ್ಟಣ ಉಪಚುನಾವಣಾ ಪ್ರಚಾರ ಸಭೆಯಲ್ಲಿ ನಿಂದಿಸಿರುವ ಶಾಸಕ ಜಮೀರ್ ಅಹಮ್ಮದ್ ಅವರು ತಕ್ಷಣ ರಾಜೀನಾಮೆ ನೀಡಬೇಕು ಎಂದು ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕ ಸಿ ಜಿ ಗಂಗಾಧರ್ ಆಗ್ರಹಿಸಿದರು.

ಪತ್ರಿಕಾಘೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು,ಹೆಚ್ ಡಿ ಕುಮಾರಸ್ವಾಮಿ ಯವರಿಗೆ ಅತ್ಯಂತ ಕೀಳಾಗಿ ನಿಂದಿಸಿರುವುದು ಕೇವಲ ವ್ಯಕ್ತಿಗತವಲ್ಲದೆ ಜಾತಿನಿಂದನೆಯಾಗಿದೆ.ಪುಡಿ ರೌಡಿಯ ರೀತಿ ವರ್ತಿಸುತ್ತಿರುವ ಜಮೀರ್ ಅಹಮ್ಮದ್ ವಿರುದ್ದ ಜನಾಂಗೀಯ ನಿಂದನೆ, ಜಾತಿ ನಿಂದನೆ ಅಡಿ ದೂರು ದಾಖಲಿಸಿ ಬಂಧಿಸಬೇಕೆಂದು ಅವರು ಸರಕಾರವನ್ನು ಒತ್ತಾಯಿಸಿದರು.

ಮುಸ್ಲಿಂ ಸಮುದಾಯದಲ್ಲಿ ಕರಿಯರಿಲ್ಲವೇ ಅವರನ್ನು ನೀವು ನಿಂದಿಸಿದಂತೆ ಆಗುವುದಿಲ್ಲವೇ ಮತ್ತು ನಮ್ಮ ಭಾರತ ದೇಶದಲ್ಲಿ ಯಾವ ಜನಾಂಗದಲ್ಲಿ ಕಪ್ಪು ಬಣ್ಣದ ಚರ್ಮವುಳ್ಳ ಜನರಿಲ್ಲ ಹೇಳಿ ಎಂದು ಪ್ರಶ್ನಿಸಿದ ಅವರು, ಜಮೀರ್ ರವರು ಸಂವಿಧಾನದ ಮೇಲೆ ಪ್ರಮಾಣ ಮಾಡಿ ಎಲ್ಲರನ್ನು ಸಮಾನ ವಾಗಿ ಕಾಣುತ್ತೇನೆಂದು ಪ್ರಮಾಣವಚ ಸ್ವೀಕರಿಸಿದ್ದು,ಸದ್ಯ ಅವರ ವರ್ತನೆ ಅತ್ಯಂತ ಅಪಾಯಕಾರಿ ಬೆಳವಣಿಗೆ.ಇದು ಮನುಷ್ಯ ಕುಲವನ್ನೇ ಕೀಳಾಗಿ ಕಾಣುವುದಾಗಿದ್ದು, ಸಂವಿಧಾನ ಬಾಹಿರ ಕೃತ್ಯವಾಗಿದೆ.ಈ ಕೂಡಲೇ ಅವರು ರಾಜೀನಾಮೆ ನೀಡಬೇಕು ಎಂದರು.

ಮೈಸೂರು ಜಿಲ್ಲಾ ಅಧ್ಯಕ್ಷ ಮರಿಸ್ವಾಮಿ ಮಾತನಾಡಿ,ಸಚಿವ ಜಮೀರ್ ಅಹಮದ್ ಖಾನ್ ಅತ್ಯಂತ ಲಘುವಾಗಿ ಮತ್ತು ಪ್ರಚೋದನಕಾರಿಯಾಗಿ ಮಾತನಾಡುವುದು ಇದು ಮೊದಲೇನಲ್ಲ.ಇದನ್ನು ಗಂಭೀರವಾಗಿ ಪರಿಗಣಿಸಿ ಸಮಾಜದ ಸ್ವಾಸ್ಥ್ಯ ಹಾಳು ಗೆಡುವುತ್ತಿರುವ ಆತನಿಂದ ಸಿ ಎಂ ರಾಜೀನಾಮೆ ಪಡೆದು ಸಮಾಜಕ್ಕೆ ಸಂದೇಶವೊಂದನ್ನು ರವಾನಿಸಬೇಕೆಂದರು.

ತೇಜೇಶ್ ಲೋಕೇಶ್ ಗೌಡ ಮಾತನಾಡಿ, ಒಕ್ಕಲಿಗರು ಜಗತ್ತಿಗೆ ಅನ್ನ ನೀಡುವವರು. ಎಚ್ ಡಿ ದೇವೇಗೌಡರು ನಮ್ಮ ಸಮುದಾಯದ ಅಸ್ಮಿತೆ, ಹಿರಿಯ ಮುತ್ಸದಿಗಳು.ಅವರ ಗರಡಿಯಲ್ಲೇ ಪಳಗಿ, ಅವರ ಗೇಟ್ ಅನ್ನು ಕಾದು, ಅವರ ಮನೆ ಬಾಗಿಲನ್ನು ಕಾದು ಶಾಸಕನಾಗಿ, ಸಚಿವನಾಗಿ ದೇವೇಗೌಡರ ಬಗ್ಗೆ ಹಗುರವಾಗಿ ಮಾತನಾಡಿರುವುದು ಅತ್ಯಂತ ಖಂಡನೀಯ.ಮುಸ್ಲಿಮರು ಒಂದೊಂದು ರೂಪಾಯಿ ಹಾಕಿ ದೇವೇಗೌಡರ ಕುಟುಂಬವನ್ನು ಖರೀದಿ ಮಾಡುತ್ತೇನೆ ಎಂದಿರುವುದು ದುರಹಂಕಾರದ ಪರಮಾವಧಿ.ರಾಜಕೀಯ ಲಾಭಕ್ಕಾಗಿ ಪ್ರತಿ ಬಾರಿ ನಮ್ಮ ಒಕ್ಕಲಿಗ ಸಮುದಾಯದ ಬಗ್ಗೆ ಅವಹೇಳನಕಾರಿ ಮಾತುಗಳನಾಡುತ್ತಿರುವ ಜಮೀರ್ ಅಹ್ಮದ್ ನ ಮೇಲೆ ವರ್ಣಭೇದದ ಆಧಾರದ ಮೇಲೆ ಸರ್ಕಾರ ಸುಮೋಟೋ ಕೇಸನ್ನು ದಾಖಲಿಸಬೇಕು ಹಾಗೂ ಸಚಿವ ಸ್ಥಾನದಿಂದ ವಜಾ ಮಾಡಿ, ಒಳ್ಳೆಯ ಹುಚ್ಚಾಸ್ಪತ್ರೆಗೆ ಸೇರಿಸಿ ಚಿಕಿತ್ಸೆಯನ್ನು ಕೊಡಿಸಬೇಕು ಎಂದು ಮನವಿ ಮಾಡಿದರು.

ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಒಕ್ಕಲಿಗರ ಸಂಘದ ಉಪಾಧ್ಯಕ್ಷ ರವಿ, ನಗರ ಪಾಲಿಕೆ ಸದಸ್ಯೆ ಪ್ರೇಮ ಶಂಕರೇಗೌಡ ಹಾಗೂ ಪ್ರತಾಪ್ ಉಪಸ್ಥಿತರಿದ್ದರು.

—–—ಮಧುಕುಮಾರ್

Leave a Reply

Your email address will not be published. Required fields are marked *

× How can I help you?