ಮೈಸೂರು:ಸ್ವಯಂ ಪ್ರೇರಣೆಯಿಂದ ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೆ ರಕ್ತದಾನ ಮಾಡುವುದು ಅತ್ಯಂತ
ಪವಿತ್ರ ಕಾರ್ಯವಾಗಿದೆ.ಒಬ್ಬನ ರಕ್ತದಾನದಿಂದ ಮೂವರು ರೋಗಿಗಳಿಗೆ ಜೀವದಾನ ಮಾಡುವ ಅವಕಾಶವಿದೆ. ರಕ್ತದಾನ ಮಾಡುವುದು ಪ್ರತಿಯೊಬ್ಬ ಆರೋಗ್ಯವಂತ ವ್ಯಕ್ತಿಯ ಕರ್ತವ್ಯವಾಗಲಿ ಎಂದು ಜೀವದಾರ ರಕ್ತ ನಿಧಿ ಕೇಂದ್ರದ ನಿರ್ದೇಶಕ ಗಿರೀಶ್ ಹೇಳಿದರು
ನಗರದ ಕೃಷ್ಣಮೂರ್ತಿ ಪುರಂನಲ್ಲಿರುವ ಎಂ ಎಂ ಕೆ,ಶ್ರೀ ಧರ್ಮಸ್ಥಳ ಮಂಜುನಾಥ ಮಹಿಳಾ ಮಹಾವಿದ್ಯಾಲಯ, ರಾಷ್ಟ್ರೀಯ ಸೇವಾ ಯೋಜನೆ ಹಾಗೂ ಜೀವದಾರ ರಕ್ತ ನಿಧಿ ಕೇಂದ್ರ ಗಳ ವತಿಯಿಂದ ರಾಷ್ಟ್ರೀಯ ಸ್ವಯಂ ಪ್ರೇರಿತ ರಕ್ತದಾನ ದಿನಾಚರಣೆ ಅಂಗವಾಗಿ ನಡೆದ ಶಿಭಿರದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಇಂದು 50 ಕ್ಕೂ ಹೆಚ್ಚು ವಿದ್ಯಾರ್ಥಿನಿಯರು ಸ್ವಯಂ ಪ್ರೇರಿತ ರಕ್ತದಾನ ಮಾಡಿದರು.ಅವರಿಗೆ ರಕ್ತದಾನದ ಮಹತ್ವದ ಅರಿವಿದೆ.ಸರಿಯಾದ ಸಮಯಕ್ಕೆ ರಕ್ತ ಸಿಗದ ಕಾರಣ ಪ್ರತಿನಿತ್ಯ ಹತ್ತಾರು ಜನ ಪ್ರಾಣ ಕಳೆದುಕೊಳ್ಳುತ್ತಾರೆ.ಅಂತಹ ಜೀವಗಳ ಉಳಿಸಿದ ಕೀರ್ತಿ ವಿದ್ಯಾರ್ಥಿಗಳಿಗೆ ಸಲ್ಲುತ್ತದೆ.ಇವರ ಹಾಗೆಯೇ ಆರೋಗ್ಯವಂತ ವಿದ್ಯಾರ್ಥಿಗಳು ರಕ್ತದಾನ ಮಾಡುವಂತೆ ಗಿರೀಶ್ ಮನವಿ ಮಾಡಿಕೊಂಡರು.
ರಕ್ತದಾನ ಮಾಡುವುದರಿಂದ ಯಾವುದೇ ಸಮಸ್ಯೆ ಉಂಟಾಗುವುದಿಲ್ಲ.ಯುವಕರು ಸ್ವಯಂ ಪ್ರೇರಣೆಯಿಂದ ರಕ್ತದಾನ ಮಾಡಲು ಮುಂದೆ ಬರಬೇಕು ಎಂದು ಹೇಳಿದರು
ರಕ್ತದಾನ ಮಾಡಿದರೆ ಆಗುವ ಉಪಯೋಗಗಳ ಬಗ್ಗೆ ಹಾಗೂ ರಕ್ತದಾನದ ಜಾಗೃತಿಯನ್ನು ವಿದ್ಯಾರ್ಥಿನಿಯರಿಗೆ
ಡಾ. ಜಯಂತ್ ಎಂ.ಎಸ್ ರವರು ತಿಳಿಸಿದರು
ಡಾಕ್ಟರ್ ಜಯಂತಿ ಎಂ. ಎಸ್, ಉಪ ಪ್ರಾಂಶುಪಾಲರು ಸುಕೃತ್. ಕೆ, ಕಾಲೇಜಿನ ಎನ್ ಎಸ್ ಎಸ್ ಅಧಿಕಾರಿ ಅನಿತಾ ಪಿ ಜಯರಾಮ್, ಜಿಲ್ಲಾ ಮೇಲ್ವಿಚಾರಕರು ಸವಿತಾ,ಸದಸ್ಯರಾದ ಪ್ರತಿಮಾ,ಭಾರ್ಗವಿ,ವಾಣಿ ,ಸಂಧ್ಯಾ, ಅರುಣ್ ಕುಮಾರ್, ಹಾಗೂ ಕಾಲೇಜಿನ ಶಿಕ್ಷಕ ವೃಂದ ಹಾಜರಿದ್ದರು.
———————–-ಮಧುಕುಮಾರ್