ಮೈಸೂರು:-ಕಾಫಿ ಬೆಳೆಗಾರರು ಯಾವಾಗಲು ಸಂತೃಪ್ತರಾಗಿರಬೇಕು-ಏರಿಳಿತಗಳಿಗೆ ಬೆಳೆಗಾರರು ದೃತಿಗೆಡಬಾರದು-ಡಾ.ಶ್ರೀ ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾ ಸ್ವಾಮೀಜಿ

ಮೈಸೂರು :-ಮನೆಗೆ ಯಾರೆ ಅತಿಥಿಗಳು ಬಂದರು ಮೊದಲು ಕಾಫಿ ಕುಡಿಯುತ್ತೀರಾ.?ಎಂದು ಕೇಳುವ ಮೂಲಕ ಸ್ವಾಗತ ಪಾನೀಯವಾಗಿಯು ಕಾಫಿ ಮಹತ್ವವನ್ನು ಪಡೆದುಕೊಂಡಿದೆ.ಮಲೆನಾಡ ಕಾಫಿ ಬೆಳೆಗಾರರು ಯಾವಾಗಲು ಸಂತೃಪ್ತರಾಗಿರಬೇಕು.ಬೆಲೆಗಳಲ್ಲಿ ಏರಿಳಿತಗಳಿಗೆ ಬೆಳೆಗಾರರು ದೃತಿಗೆಡಬಾರದು ಎಂದು ಸುತ್ತೂರು ಮಠದ ಪರಮಪೂಜ್ಯ ಜಗದ್ಗುರು ಡಾ.ಶ್ರೀ ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾ ಸ್ವಾಮೀಜಿ ತಿಳಿಸಿದರು.

ಕರ್ನಾಟಕ ಬೆಳೆಗಾರರ ಒಕ್ಕೂಟ ಹಾಗೂ ಹಾಸನ ಜಿಲ್ಲಾ ಪ್ಲಾಂಟರ್ಸ್ ಸಂಘ (ರಿ ) ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಅಂತಾರಾಷ್ಟ್ರೀಯ ಕಾಫಿ ದಿನಾಚರಣೆಯನ್ನು ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಆಚರಿಸಲಾಯಿತು.

ಕಾರ್ಯಕ್ರಮವನ್ನು ಸುತ್ತೂರು ಮಠದ ಪರಮಪೂಜ್ಯ ಜಗದ್ಗುರು ಡಾ.ಶ್ರೀ ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾ ಸ್ವಾಮೀಜಿಯವರು ಹುರಿದ ಕಾಫಿ ಬೀಜವನ್ನು ಪುಡಿ ಮಾಡುವುದರೊಂದಿಗೆ ಉದ್ಘಾಟನೆ ಮಾಡಿ ಆಶೀರ್ವಚನ ನೀಡುತ್ತಾ,ಮೈಸೂರು ಅರಸರು ಲೋಕಕಲ್ಯಾಣಕ್ಕಾಗಿ ಅನೇಕ ಅಭಿವೃದ್ಧಿ ಕೆಲಸಗಳನ್ನು ಅರಸುತ್ತಿಗೆಯಲ್ಲಿ ಮಾಡಿದವರು.ಮೈಸೂರು ಒಡೆಯವರು ನಾಡಿಗೆ ಮಾಡದೆ ಇರುವರು ಅಭಿವೃದ್ಧಿ ಕೆಲಸ ಇಲ್ಲ.ಇಂತಹ ಪವಿತ್ರ ಸನ್ನಿದಿಯಲ್ಲಿ ಅಂತಾರಾಷ್ಟ್ರೀಯ ಕಾಫಿ ದಿನಾಚರಣೆಯ ಮಾಡುತಿರುವುದು ಹೆಮ್ಮೆಯ ವಿಚಾರ ಎಂದರು.

ಕಾಫಿ ಎಂಬುದು ಉತ್ತೇಜನಕಾರಿ ಎಂಬುದಾಗಿ ಕೆಲವು ದೇಶಗಳು ಕಾಫಿಯನ್ನು ನಿಷೇದ ಮಾಡಿದ್ದವು. ನಂತರ ದಿನಗಳಲ್ಲಿ ಸಂಶೋಧನೆಯಿಂದ ಕಾಫಿ ಕುಡಿಯುವುದರಿಂದ ಆರೋಗ್ಯಕ್ಕೆ ಒಳ್ಳೆಯದು ಎನ್ನುವ ಉದ್ದೇಶದಿಂದ ಹೇರಿದ ನಿಷೇಧವನ್ನು ಹಿಂಪಡೆದು ಕೊಂಡವು.ಕಾಫಿ ಬಗ್ಗೆ ಇನ್ನಷ್ಟು ಸಂಶೋಧನೆಗಳು ನೆಡೆಯಬೇಕು. ಹಾಲು ಮಿಶ್ರಿತವಲ್ಲದ ಕಾಫಿ ಕುಡಿಯುವ ಮೂಲಕ ಅರೋಗ್ಯ ಕಾಪಾಡಿಕೊಳ್ಳಬೇಕು.ಜಗತ್ತಿನ ಹೆಚ್ಚು ರಫ್ತು ಮಾಡುವುದರಲ್ಲಿ 6 ನೇ ಸ್ಥಾನ ಕಾಫಿಗೆ ಇದೆ.ಇದರಲ್ಲಿ ಹಾಸನ ಕಾಫಿ ಬೆಳೆಗಾರರು ಕೂಡ ಪಾಲುದಾರರಿದ್ದಾರೆ ಎಂಬುದೆ ಖುಷಿಯ ವಿಚಾರ. ಮುಂದಿನ ದಿನಗಳಲ್ಲಿ ಕಾಫಿ ಬೆಳೆಗಾರರಿಗೆ ಒಳ್ಳೆಯದಾಗಲಿ ಎಂದು ಆಶೀರ್ವದಿಸಿದರು.

ಮೈಸೂರು ಆದಿಚುಂಚನಗಿರಿ ಮಠದ ಕಾರ್ಯದರ್ಶಿಗಳಾದ ಸೋಮೇಶ್ವರನಾಥ ಸ್ವಾಮೀಜಿ ಆಶೀರ್ವಚನ ನೀಡುತ್ತಾ ” ನಾವು ಪ್ರತಿನಿತ್ಯ ಕಾಫಿ ಸೇವನೆಯಿಂದ ದೇಹ ಹಾಗೂ ಮನಸ್ಸನ್ನು ದೃಢವಾಗಿ ಇಟ್ಟು ಕೊಳ್ಳೋಣ. ಕಾಫಿ ಎಂಬುದು ಮನುಷ್ಯನಿಗೆ ಬೆಳಗ್ಗೆ ಎದ್ದ ತಕ್ಷಣ ನೆನಪು ಬರುವಂಥದ್ದು .ಇದು ಮನುಷ್ಯನಿಗೆ ಶಕ್ತಿ ಹಾಗೂ ಉಲ್ಲಾಸ ನಿಡುವ ಸಸ್ಯ ಜನ್ಯ. ಮನುಷ್ಯನಿಗೆ ರೋಗವನ್ನು ದೂರ ಮಾಡುವಲ್ಲಿ ಮುಖ್ಯ ಪಾತ್ರ ವಹಿಸುತ್ತದೆ ಎಂದರೆ ತಪ್ಪಾಗುವುದಿಲ್ಲ ಎಂದರು.

ಶಾಸಕರಾದ ಸಿಮೆಂಟ್ ಮಂಜುನಾಥ್ ಮಾತನಾಡಿ, ಒಂದು ಕಡೆ ಹವಾಮಾನ ಬದಲಾವಣೆಗಳಿಂದ ಮತ್ತೊಂದು ಕಡೆ ಕಾಡಾನೆಗಳಿಂದ ಕಾಫಿ ಬೆಳೆಗಾರರು ಹೆಚ್ಚು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಇದರ ಬಗ್ಗೆ ಸರ್ಕಾರದ ಗಮನ ಸೆಳೆಯುವ ಕೆಲಸವನ್ನು ಮಾಡಿದ್ದರು ಕೂಡ ಬೆಳೆಗಾರರಿಗೆ ಸ್ಪಂದಿಸುವ ಕೆಲಸವಾಗಿಲ್ಲ.ದೇಶದ ರಫ್ತಿನಲ್ಲಿ 12 ರಿಂದ 13 ಸಾವಿರ ಕೋಟಿಯನ್ನು ಈ ಕಾಫಿ ಉದ್ಯಮ ದೇಶಕ್ಕೆ ಕೊಡುತ್ತಾ ಬಂದಿದ್ದರು ಕೂಡ ಇದುವರೆಗೂ ಯಾವ ಸರ್ಕಾರವೂ ಕೂಡ ಈ ಕಾಫಿ ಬೆಳೆಗಾರರ ಸಮಸ್ಯೆಗೆ ಸ್ಪಂದಿಸುವ ಕೆಲಸವನ್ನು ಮಾಡದೇ ಇರುವುದು ವಿಪರ್ಯಾಸವೇ ಸರಿ.ಈ ಭಾಗದ ರೈತರಿಗೆ ತೊಂದರೆ ಕೊಡುವ ಯಾವ ಕಾನೂನನ್ನು ನಾವು ಒಪ್ಪುವುದಿಲ್ಲ. ಈ ಭಾಗದ ಜನರಿಗೆ ಪರಿಸರವನ್ನು ಉಳಿಸುವುದು ಹಾಗೂ ಕಾಡನ್ನು ಬೆಳೆಸುವುದು ಯಾರು ಹೇಳಿಕೊಡಬೇಕಾಗಿಲ್ಲ. ಅಷ್ಟರಮಟ್ಟಿಗೆ ಪರಿಸರವನ್ನು ಪ್ರೀತಿಸಿ ಅದರೊಂದಿಗೆ ಬದುಕು ಕಟ್ಟಿಕೊಂಡಿದ್ದಾರೆ.ಪರಿಸರವನ್ನು ಉಳಿಸುವರಿಗೆ ಸರ್ಕಾರದಿಂದ ತೊಂದರೆ ಹೆಚ್ಚು.ಕಾಫಿಯನ್ನು ಈ ಭಾಗದ ಬೆಳೆಗಾರರು ಕೇವಲ ಉದ್ಯಮ ಅಲ್ಲದೆ ಪ್ರೀತಿಯಿಂದ ಬೆಳೆಯುತ್ತಿದ್ದಾರೆ. ಬೆಳೆಗಾರರ ವಿದ್ಯುತ್ ಬಿಲ್ಲಿನ ಬಡ್ಡಿಯನ್ನು ಮನ್ನಾ ಮಾಡಬೇಕು ಎಂದು ಸರ್ಕಾರವನ್ನು ನಾನು ಒತ್ತಾಯಿಸುತ್ತೇನೆ.ಹೆಚ್ಚು ಕಾಫೀ ಬೆಳೆಗಾರರು ಇರುವ ಕ್ಷೇತ್ರದಿಂದ ಶಾಸಕನಾಗಿರುವುದು ನನಗೆ ಹೆಮ್ಮೆಯಿದೆ ಎಂದರು.

ಮಡಿಕೇರಿ ವಿಧಾನಸಭಾ ಕ್ಷೇತ್ರ ಶಾಸಕರಾದ ಡಾ. ಮಂಥರ್ ಗೌಡ ಮಾತನಾಡುತ್ತಾ “ತಿಂಗಳ ಸಂಬಳಕ್ಕೆ ಹಳ್ಳಿ ಬಿಟ್ಟು ನಗರಗಳಿಗೆ ಹೋಗುವರು ವಾಪಸು ಬಂದು ಕಾಫಿ ಕೃಷಿಯಲ್ಲಿ ತೊಡಗಿಸಿಕೊಳ್ಳುವ ಪರಿಸ್ಥಿತಿ ಇಂದು ಬಂದಿದೆ . ಪ್ರಸ್ತುತ ಕಾಫಿ ಬೆಳೆಗಾರರು ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದ್ದು , ಎಲ್ಲ ಬೆಳೆಗಾರರು ಒಟ್ಟಾಗಿ ಸಮಸ್ಯೆ ಪರಿಹಾರಕ್ಕೆ ನಿಂತರೆ ಕಂಡಿತಾ ಒಳ್ಳೆಯದಾಗುತ್ತದೆ.ನನಗೆ ಕೃಷಿಯಲ್ಲಿ ಸಿಗುವ ಖುಷಿ ರಾಜಕೀಯದಲ್ಲಿ ಸಿಗುವುದಿಲ್ಲ ಎಂದರು

ಕರ್ನಾಟಕ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಉಪಾಧ್ಯಕ್ಷರಾದ ಡಾ. ಪುಷ್ಪ ಅಮರನಾಥ್ ಮಾತನಾಡುತ್ತಾ “ನನ್ನ ದಿನಚರಿ ಶುರು ಮಾಡುವುದೇ ಕಾಫಿಯಿಂದ .ನಾನು ಕಾಫಿ ಪ್ರಿಯಳು. ಹಾಗಾಗಿ ನಾನು ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದೇನೆ.ಮುಖ್ಯಮಂತ್ರಿ ಸಿದ್ದರಾಮಯ್ಯ ಕೂಡ ಕಾಫಿ ಪ್ರಿಯರು. ಜೀವವಿಮೆ ಅಡಿಯಲ್ಲಿ ಕಾಫಿ ಸೇರಿಸಬೇಕು ಎಂಬ ಬೇಡಿಕೆ ಹಾಸನ ಜಿಲ್ಲಾ ಪ್ಲಾಂಟರ್ ಸಂಘದ್ದು, ಇದನ್ನು ಸರ್ಕಾರದ ಮಟ್ಟದಲ್ಲಿ ತಿಳಿಸುವ ಕೆಲಸವನ್ನು ಮಾಡಲಾಗುವುದು ಎಂದು ಭರವಸೆ ನೀಡಿದರು.

ಕಾರ್ಯಕ್ರಮದಲ್ಲಿ ಮಲೆನಾಡ ವಾದ್ಯ ಹಾಗೂ ಮಲೆನಾಡ ಸುಗ್ಗಿಕುಣಿತ ನೋಡುಗರನ್ನು ಮನರಂಜಿಸಿದವು.

ಹೆಚ್ಚಿನ ಸಂಖ್ಯೆಯಲ್ಲಿ ಬೆಳೆಗಾರರು ಪಾಲ್ಗೊಂಡು ಅತ್ಯಂತ ಸಂಭ್ರಮ ಸಡಗರದಿಂದ ಅರ್ಥಪೂರ್ಣವಾಗಿ ಹತ್ತನೇ ಅಂತರಾಷ್ಟ್ರೀಯ ಕಾಫಿ ದಿನಾಚರಣೆಯನ್ನು ಆಚರಿಸಿದರು.

ವೇದಿಕೆಯಲ್ಲಿ ಹಾಸನ ಜಿಲ್ಲಾ ಪ್ಲಾಂಟರ್ಸ್ ಸಂಘದ ಅಧ್ಯಕ್ಷರಾದ ಎ. ಎಸ್. ಪರಮೇಶ್, ಭಾರತೀಯ ಕಾಫಿ ಮಂಡಳಿ ಅಧ್ಯಕ್ಷರಾದ ಎಂ. ಜೆ ದಿನೇಶ್, ಕರ್ನಾಟಕ ಗೋವರ್ಸ್ ಪೆಡರೇಶನ್ (ರಿ ) ಅಧ್ಯಕ್ಷರಾದ ಹೆಚ್. ಟಿ ಮೋಹನ್ ಕುಮಾರ್, ಮೈಸೂರು ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ಶಿವರಾಜ್,ಭಾರತೀಯ ಕಾಫಿ ಮಂಡಳಿ ಸದಸ್ಯರಾದ ಏನ್. ಬಿ ಉದಯ್ ಕುಮಾರ್ ಇತರರು ಇದ್ದರು.

——————–-ರಕ್ಷಿತ್ ಎಸ ಕೆ

Leave a Reply

Your email address will not be published. Required fields are marked *

× How can I help you?