ಮೈಸೂರು-ದಾಸ ಶ್ರೇಷ್ಠರಾದ ಕನಕದಾಸರ ಬದುಕೇ ಮಾನವ ಕುಲಕ್ಕೆ ಒಂದು ಸಂದೇಶ. ಜಾತ್ಯಾತೀತ ಮೌಲ್ಯಗಳನ್ನು ಪ್ರತಿಪಾದಿಸಿದ ಅವರನ್ನು ಯಾವುದೇ ಒಂದು ಜಾತಿಗೆ ಸೀಮಿತಗೊಳಿಸಬಾರದು ಎಂದು ಪರಮಪೂಜ್ಯ ಇಳೈ ಆಳ್ವಾರ್ ಸ್ವಾಮೀಜಿ ಹೇಳಿದರು.
ನಗರದ ವಿದ್ಯಾರಣ್ಯಪುರಂನಲ್ಲಿರುವ ಭಾರತಿ ವೃದ್ಧಾಶ್ರಮದಲ್ಲಿ ಎಸ್ ಪ್ರಕಾಶ್ ಪ್ರಿಯದರ್ಶನ್ ಸ್ನೇಹ ಬಳಗದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಭಕ್ತ ಕನಕದಾಸರ 537ನೇ ಜಯಂತಿ ಕಾರ್ಯಕ್ರಮದಲ್ಲಿ ವೃದ್ಧಾಶ್ರಮದ ಹಿರಿಯರಿಗೆ ಹಣ್ಣು ಹಂಪಲು ವಿತರಿಸಿ ಅವರು ಮಾತನಾಡಿದರು.
ಕನಕದಾಸರು ಕವಿಗಳು ಮಾತ್ರವಲ್ಲ,ಅವರೊಬ್ಬ ಸಾಹಿತ್ಯ ಮತ್ತು ಸಂಗೀತ ಲೋಕದ ಗಣಿ ಎಂದು ಅಭಿಪ್ರಾಯಪಟ್ಟರು.
ಈ ಸಂದರ್ಭದಲ್ಲಿ ವಿವಿಧ ಕ್ಷೇತ್ರದ ಸಾಧಕರಾದ ಶಾಂತಮ್ಮ (ಸಾಮಾಜಿಕ ಕ್ಷೇತ್ರ) ಬಸವರಾಜ್ (ಸಹಕಾರಿ ಕ್ಷೇತ್ರ) ಗಿರೀಶ್ (ವೈದ್ಯಕೀಯ ಕ್ಷೇತ್ರ) ವೀರಭದ್ರ ಸ್ವಾಮಿ (ಸಂಘಟನಾ ಕ್ಷೇತ್ರ)ಮಂಜೇಶ್ ಮೌರ್ಯ (ಸಾಮಾಜಿಕ ಕ್ಷೇತ್ರ)ರವರಿಗೆ ಶ್ರೀ ಕನಕ ಸೇವಾರತ್ನ ಪ್ರಶಸ್ತಿ ನೀಡಿ
ಸನ್ಮಾನಿಸಲಾಯಿತು.
ಜೆ.ಡಿ.ಎಸ್ ಕಾರ್ಯಾಧ್ಯಕ್ಷ ಎಸ್ ಪ್ರಕಾಶ್ ಪ್ರಿಯದರ್ಶನ್, ಅಲೋಕ್ ಜೈನ್, ಸುಚೇಂದ್ರ, ಮಹಾನ್ ಶ್ರೇಯಸ್, ಓಂ ದೇವ್, ಪದ್ಮಾವತಿ, ಛಾಯಾ, ಯಶ್ವಂತ್ ಕುಮಾರ್, ರಾಜೇಶ್ ಕುಮಾರ್, ಮಹೇಶ್, ಶ್ರೀಧರ್, ಅಕ್ಷಯ ಪ್ರದರ್ಶನ, ಹರ್ಷಿತ್ ಎಸ್ ನಾಗೇಶ್, ಪುನೀತ್ ಹಾಗೂ ಇನ್ನಿತರರು ಹಾಜರಿದ್ದರು.
———-—-ಮಧುಕುಮಾರ್