ಮೈಸೂರು:ತಮ್ಮ ಕೂಲಿ ಹಣದಿಂದ ಕನ್ನಡ ಪ್ರೇಮಿ ಇಳಿವಯಸ್ಸಿನ ಸೈಯದ್ ಇಸಾಕ್ ಲೈಬ್ರರಿಯೊಂದನ್ನು ಸ್ಥಾಪಿಸಿದ್ದು ನಮಗೆಲ್ಲ ತಿಳಿದ ವಿಷಯವೆ.ಇತ್ತೀಚೆಗೆ ಅವರ ವಿಡೀಯೋ ಒಂದು ವೈರಲ್ ಆಗಿದ್ದು ತೀವ್ರ ಆರ್ಥಿಕ ಸಂಕಷ್ಟದಿಂದ ಬೇಸತ್ತು ಲೈಬ್ರರಿಯನ್ನು ಮುಚ್ಚುವ ನಿರ್ಧಾರಕ್ಕೆ ಬಂದಿರುವುದನ್ನು ಅದರಲ್ಲಿ ಕಣ್ಣೀರು ಹಾಕಿಕೊಂಡು ತಿಳಿಸಿದ್ದರು.ಈ ವಿಡಿಯೋ ರಾಜ್ಯಾದಾದ್ಯಂತ ವೈರಲ್ ಆಗಿತ್ತು.
ಈ ವಿಷಯಕ್ಕೆ ಸಂಬಂಧಿಸಿದಂತೆ ಬಣಕಲ್ ಮ್ಯಾನ್ ಕೈಂಡ್ ಕ್ಲಬ್ ಸದಸ್ಯ ಸಾಜಿದ್ ಪತ್ರಿಕಾ ಹೇಳಿಕೆಯೊಂದನ್ನು ಬಿಡುಗಡೆಗೊಳಿಸಿದ್ದು,ಎಲ್ಲ ಕನ್ನಡ ಮನಸ್ಸುಗಳು,ಸಂಘ ಸಂಸ್ಥೆಗಳು ಕನ್ನಡ ಪ್ರೇಮಿ ಸೈಯದ್ ಇಸಾಕ್ ರ ಕನಸ್ಸಿನ ಕೂಸಾದ ಲೈಬ್ರರಿಯನ್ನು ಉಳಿಸಲು ಆರ್ಥಿಕ ಸಹಾಯವನ್ನು ನೀಡಲು ಮನವಿ ಮಾಡಿಕೊಂಡಿದ್ದಾರೆ.
ಕನ್ನಡ ನುಡಿ-ಕನ್ನಡ ನೆಲವನ್ನು ಕಾಯುವ ಭಾಷಾ ಪ್ರೇಮಿಗಳ ಕೊರತೆಯಿರುವ ಪ್ರಸ್ತುತದಲ್ಲಿ ಸೈಯದ್ ಇಸಾಕ್ ರಂತಹ ಹಿರಿಯ ಜೀವದ ಕನ್ನಡ ಲೈಬ್ರರಿಯನ್ನು ಉಳಿಸುವ ಕೆಲಸವನ್ನು ನಾವೆಲ್ಲರೂ ಸೇರಿ ಮಾಡೋಣ ಎಂದು ಸಾಜಿದ್ ತಿಳಿಸಿದ್ದಾರೆ.
ಮ್ಯಾನ್ ಕೈಂಡ್ ಕ್ಲಬ್ ನಿಂದ ಒಂದಷ್ಟು ಸಹಾಯಗಳನ್ನು ಈಗಾಗಲೇ ಮಾಡಲಾಗಿದ್ದು ಹೆಚ್ಚಿನ ಹಣಕಾಸಿನ ನೆರವಿನ ಅಗತ್ಯವಿರುವ ಕಾರಣ ನಾವೆಲ್ಲರೂ ಕೈಜೋಡಿಸಿ ಲೈಬ್ರರಿಯನ್ನು ಉಳಿಸುವ ಕೆಲಸವನ್ನು ಮಾಡೋಣ ಎಂದು ಕರೆ ನೀಡಿದ್ದಾರೆ.
ವಿವರ…
14ವರ್ಷಗಳಿಂದ ಸೈಯದ್ ಇಸಾಕ್ ತಾವು ಕೂಲಿ ಮಾಡಿ ಕನ್ನಡ ಗ್ರಂಥಾಲಯವನ್ನು ಮೈಸೂರಿನಲ್ಲಿ ನೆಡೆಸುತ್ತಿದ್ದರು.ಕೆಲ ವರ್ಷಗಳ ಹಿಂದೆ ಗ್ರಂಥಾಲಯ ಬೆಂಕಿಗೆ ಅಹುತಿಯಾದಾಗ ಬಾರಿ ಸುದ್ದಿಯಾಗಿ ಸರಕಾರ ಎಲ್ಲಾ ರೀತಿಯ ನೆರವು ನೀಡುವುದಾಗಿ ಘೋಷಿಸಿತ್ತು.ಆದರೆ ದಾನಿಗಳ ನೆರವು ಬಿಟ್ಟರೆ ಸರಕಾರದಿಂದ ಯಾವುದೇ ರೀತಿಯ ಸೌಲಭ್ಯ ಇಲ್ಲಿಯವರೆಗೂ ಗ್ರಂಥಾಲಯಕ್ಕೆ ದೊರೆಯಲಿಲ್ಲ.
ಅನಾರೋಗ್ಯ ಹಾಗೂ ಆದಾಯ ಇಲ್ಲದೆ ಅದನ್ನು ನಿರ್ವಹಿಸಲು ಇದೀಗ ಇಸಾಕ್ ಅವರಿಗೆ ಸಂಕಷ್ಟ ಎದುರಾಗಿದೆ. ಕಳೆದ ಮೂರು ತಿಂಗಳಿಂದ ಕರೆಂಟ್ ಬಿಲ್ ಕಟ್ಟಲು ಸಹ ಸಾಧ್ಯವಾಗುತ್ತಿಲ್ಲ ಇದರಿಂದ ಯಾವಾಗ ವಿದ್ಯುತ್ ಸಂಪರ್ಕ ಕಡಿತ ಮಾಡುತ್ತಾರೋ ಗೊತ್ತಿಲ್ಲ.ಪತ್ರಿಕೆಗಳನ್ನು ತರಿಸಲು ಕೂಡ ಆಗಿತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಸೈಯದ್ ಇಸಾಕ್ ಅವರು ಕೂಲಿ ಕೆಲಸಕ್ಕೆ ಹೋದಾಗ.ಅವರ ಪತ್ನಿ ನೋಡಿ ಕೊಳ್ಳುತ್ತಿದ್ದರು ಅವರ ಪತ್ನಿ ಅನಾರೋಗ್ಯಕ್ಕೆ ತುತ್ತಾದ ಕಾರಣ ಇವರಿಗೆ ಹಣಕಾಸು ತೊಂದರೆ ಉಂಟಾಗಿದೆ ಸಾರ್ವಜನಿಕರ ಅನುಕೂಲಕ್ಕಾಗಿ ಸ್ಥಾಪಿಸಿದ ಗ್ರಂಥಾಲಯವನ್ನು ಮುನ್ನಡೆಸಲು ದಾನಿಗಳು ನೆರವು ನೀಡಿದರೆ ಮುನ್ನಡೆಸಲು ಸಾಧ್ಯವಾಗುತ್ತದೆ ಎಂದು ಮ್ಯಾನ್ ಕೈಂಡ್ ಕ್ಲಬ್ ಸದಸ್ಯ ಸಾಜಿದ್ ಮನವಿ ಮಾಡಿದ್ದಾರೆ.
ನೆರವು ನೀಡಲು ಇಚ್ಛೆಸುವವರು
A/c no12446100001512
IFC cod/PKGBOO12511
Karnataka gramin bank
Rajiv nagar branch
Phone pay ೯೯೦೧೨೬೬೪೮೭
———-ಸೂರಿ ಬಣಕಲ್