ಮೈಸೂರು-ನಾಗವಾಲ ಗ್ರಾ.ಪಂ ವ್ಯಾಪ್ತಿಯ ಹುಯಿಲಾಳು ಗ್ರಾಮದ ಸೂರಪ್ಪನ ಕೆರೆಯನ್ನು ರಕ್ಷಿಸಲು ಗ್ರಾಮಸ್ಥರ ಒತ್ತಾಯ-ಮನವಿ ಕೊಟ್ಟರು ಕ್ರಮ ಕೈಗೊಳ್ಳದ ಅಧಿಕಾರಿಗಳು ಆಕ್ರೋಶ

ಮೈಸೂರು;ಹುಯಿಲಾಳು ಗ್ರಾಮದ ಲೋಕೇಶ್ ಅರ್ಚಕ ಎಂಬುವರು ಸೂರಪ್ಪನ ಕೆರೆಯನ್ನು ಒತ್ತುವರಿ ಮಾಡಿಕೊಂಡು ಜೆಸಿಬಿ ಮೂಲಕ ಕೆರೆ ಏರಿಯನ್ನು ಬಗೆದಿರುವುದರಿಂದ ನೀರು ತುಂಬಿದಾಗ ಕೆರೆ ಒಡೆದು ಕೋಟ್ಯಾಂತರ ರೂಪಾಯಿಗಳ ಬೆಳೆ ನಷ್ಟವಾದರೆ ಯಾರು ಹೊಣೆಗಾರರಾಗುತ್ತಾರೆ ಎಂದು ಗ್ರಾಮಸ್ಥರು ಪ್ರಶ್ನಿಸಿದ್ದಾರೆ.

ಇದು ಆಕ್ರಮವಾಗಿ ಮಾಡುತ್ತಿರುವ ಕಾನೂನು ಬಾಹಿರ ಚಟುವಟಿಕೆಯಾಗಿದೆ.ಇಲ್ಲಿ ಹೇಳುವರು ಕೇಳುವರು ಯಾರಿಲ್ಲ ಗ್ರಾಮಸ್ಥರು ತಡೆದಿದ್ದರೂ ತಮ್ಮ ಕಾರ್ಯವನ್ನು ಮಾಡುತ್ತಿದ್ದಾರೆ.ಪಿಡಿಓ,ತಹಸಿಲ್ದಾರವರಿಗೆ,ಪೊಲೀಸ್ ಠಾಣೆಗೆ ಅಕ್ರಮ ಚಟುವಟಿಕೆಯನ್ನು ತಡೆಯುವಂತೆ ಮನವಿ ಸಲ್ಲಿಸಿದ್ದರು ಇಲ್ಲಿವರೆಗೆ ಯಾರು ಕ್ರಮ ಕೈಗೊಳ್ಳಲುಮುಂದೆ ಬಂದಿಲ್ಲ.

ಜಿಲ್ಲಾ ಆಡಳಿತವು ಮುಂದೆ ಬಂದು ಅಕ್ರಮವಾಗಿ ಒತ್ತುವರಿ ಮಾಡಿಕೊಳ್ಳುತ್ತಿರುವ ಚಟುವಟಿಕೆಯನ್ನು ನಿಲ್ಲಿಸಿ ಸೂರಪ್ಪನ ಕೆರೆಯನ್ನು ಉಳಿಸಿಕೊಡಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

Leave a Reply

Your email address will not be published. Required fields are marked *

× How can I help you?