ಮೈಸೂರು:ಕ್ಷೇತ್ರದಲ್ಲಿ ನಡೆಯುತ್ತಿರುವ ವಿವಿಧ ಕಾಮಗಾರಿಗಳ ಪರಿಶೀ ಲಿಸಿದ ಶಾಸಕ ಟಿ.ಎಸ್.ಶ್ರೀವತ್ಸ-ಹರಿಶ್ಚಂದ್ರಘಾಟ್ ನಲ್ಲಿ 1.05 ಕೋಟಿ ರೂ.ವೆಚ್ಚದ ಕಾಮಗಾರಿಗೆ ಚಾಲನೆ

ಮೈಸೂರು:ಕೆ.ಆರ್.ವಿಧಾನಸಭಾ ಕ್ಷೇತ್ರದ ಶಾಸಕರಾದ ಟಿ.ಎಸ್.ಶ್ರೀವತ್ಸ ಅವರು ಗುರುವಾರ ಹಲವೆಡೆ ಸಂಚರಿಸಿ, ವಿವಿಧ ಕಾಮಗಾರಿಗಳ ಸ್ಥಿತಿ-ಗತಿಯ ಬಗ್ಗೆ ಪರಿಶೀಲನೆ ನಡೆಸಿದರು.

ಮೊದಲಿಗೆ ಹರಿಶ್ಚಂದ್ರಘಾಟ್ ಸ್ಮಶಾನಕ್ಕೆ ಭೇಟಿ ನೀಡಿ 1.05 ಕೋಟಿ ರೂ.ವೆಚ್ಚದ ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡಿದರು.ಬಳಿಕ ಮಳೆ ಬಂದರೇ ನೀರು ನಿಂತು ಸಮಸ್ಯೆ ಉಂಟಾಗುತ್ತದೆ ಎಂಬ ದೂರಿಗೆ ಸ್ಪಂದಿಸಿ,ಪರಿಶೀಲನೆ ನಡೆಸಿದ ಶಾಸಕರು,ಸಮಸ್ಯೆ ಪರಿಹಾರಕ್ಕೆ ಸಂಬಂಧಿಸಿದಂತೆ ಕೂಡಲೇ ಕಾಮಗಾರಿ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸ್ಥಳದಲ್ಲೇ ಸೂಚನೆ ನೀಡಿದರು.

ತದನಂತರ ಸ್ಮಶಾನದ ಆವರಣದಲ್ಲಿ ಸುಮಾರು 95 ಲಕ್ಷ ರೂ.ವೆಚ್ಚದಲ್ಲಿ ನಿರ್ಮಾಣಗೊಳ್ಳುತ್ತಿರುವ ಬಯೋಗ್ಯಾಸ್ ಉತ್ಪಾದನೆಯ ಕಾಮಗಾರಿಯನ್ನು ಸಹ ಪರಿಶೀಲಿಸಿ, ಅಗತ್ಯ ಮಾಹಿತಿ ಪಡೆದುಕೊಂಡು ಕಾಮಗಾರಿಯನ್ನು ಪೂರ್ಣಗೊಳಿಸುವಂತೆ ಆದೇಶಿಸಿದರು.

ಪಿಂಜರಾಪೋಲ್ ರಸ್ತೆಯಲ್ಲಿ ಸಂಚರಿಸಿದ ಶಾಸಕರು,ಈ ಮಾರ್ಗದಲ್ಲಿ ಮಳೆ ನೀರು ಮುಂದಕ್ಕೆ ಹರಿಯದೇ ತೊಂದರೆಯಾಗಿದೆ ಎಂಬ ಸಮಸ್ಯೆಯನ್ನು ಆಲಿಸಿ, ಪರಿಶೀಲನೆ ನಡೆಸಿದ ವೇಳೆ ಮಾರ್ಗ ಮಧ್ಯದಲ್ಲಿ ಕೌಂಪೌಂಡ್ ಒಂದನ್ನು ನಿರ್ಮಾಣ ಮಾಡಿರುವುದರಿಂದ ಈ ಸಮಸ್ಯೆ ಉದ್ಭವಿಸಿದೆ ಎಂಬುದನ್ನು ಕಣ್ಣಾರೆ ಕಂಡರು.ಬಳಿಕ ಸ್ಥಳದಲ್ಲಿದ್ದ ಅಧಿಕಾರಿಗಳಿಗೆ ಈ ಕುರಿತು ನಿರ್ದೇಶನ ನೀಡಿ, ಮಳೆ ನೀರು ಸರಾಗವಾಗಿ ಹರಿಯಲು ಕೂಡಲೇ ಕ್ರಮ ಕೈಗೊಳ್ಳಬೇಕೆಂದು ಸಹ ಸೂಚಿಸಿದರು.

——–——-ಮಧುಕುಮಾರ್

Leave a Reply

Your email address will not be published. Required fields are marked *

× How can I help you?