ಮೈಸೂರು-ನಗರದ ಹುಣಸೂರು ರಸ್ತೆಯಲ್ಲಿರುವ ಮುಲಕನಾಡು ಸಭಾ ಭವನದಲ್ಲಿ ನ.೨೪ರಂದು ಭಾನುವಾರ ಸಂಜೆ ೪ ಗಂಟೆಗೆ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಹಾಸ್ಯ ಕಲಾವಿದರು,ಸಾಹಿತಿಗಳೂ ಆದ ಎಂ.ಎಸ್.ನರಸಿoಹಮೂರ್ತಿ ಕಾರ್ಯಕ್ರಮ ನಡೆಸಿಕೊಡಲಿದ್ದು, ಕಾರ್ಯಕ್ರಮದ ಅಧ್ಯಕ್ಷತೆಯನ್ನು ನಾಡೋಜ ಡಾ.ಟಿ.ವಿ.ವೆಂಕಟಾಚಲ ಶಾಸ್ತ್ರೀ ವಹಿಸಲಿದ್ದಾರೆ.
ಕಾರ್ಯಕ್ರಮದಲ್ಲಿ ಸಭಾದ ಅಧ್ಯಕ್ಷ ಗುರುಮೂರ್ತಿ, ಗೌರವ ಕಾರ್ಯದರ್ಶಿ ನಟರಾಜ್, ಕಾರ್ಯದರ್ಶಿ ಎಂ.ಡಿ.ಶ್ರೀದತ್ತ ಹಾಗೂ ಸಭಾದ ಪದಾಧಿಕಾರಿಗಳು ಭಾಗವಹಿಸಲಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.