ಮೈಸೂರಿನ ಮತ್ತು ಸುತ್ತಮುತ್ತಲಿನ ಸದಭಿರುಚಿಯ,ಸಹೃದಯ ರಂಗಾಸಕ್ತರಿಗಾಗಿ ನಟನವು ವಾರಾಂತ್ಯ ರಂಗ ಪ್ರದರ್ಶನಗಳನ್ನು ನಡೆಸುತ್ತಿದ್ದು, ಇದೇ ಜನವರಿ 12ರಂದು ರಾಮಕೃಷ್ಣ ನಗರದಲ್ಲಿರುವ ನಟನ ರಂಗಶಾಲೆಯಲ್ಲಿ ಸಂಜೆ 06.30ಕ್ಕೆ ಸರಿಯಾಗಿ ರಂಗಗೋಕುಲ ಬೆಂಗಳೂರು ಅಭಿನಯಿಸುವ ನಾಟಕ ‘ಯಾರು ಈ ಕೀಚಕ’ ನಾಟಕವು ಪ್ರದರ್ಶನಗೊಳ್ಳಲಿದೆ.
ನಾಟಕದ ರಚನೆ ಕಾ.ಲಾ.ವಿಶ್ವನಾಥ ಹಾಗೂ ನಿರ್ದೇಶನ ಕೃಷ್ಣ ಕಶ್ಯಪ್ ಅವರದ್ದು.
ನಾಟಕದ ಕುರಿತು:ಇದರಲ್ಲಿ ಪಾತ್ರೋದ್ಧರಣ ಪ್ರಕ್ರಿಯೆ ಮತ್ತು ಶೃಂಗಾರ – ವೀರರಸ ಸಂಗಮವಿದೆ. ಗುರುಕುಲದ ಸಹಪಾಠಿಗಳಾದ ಕೀಚಕ, ಭೀಮ, ಜರಾಸಂಧ, ದುರ್ಯೋಧನರ ಬಾಲ್ಯದ ತುಂಟಾಟ, ಸ್ನೇಹದ ಕೀಟಲೆಗಳ ರಸದೂಟವಿದೆ. ಪ್ರೇಕ್ಷಕರೇ ವ್ಯಕ್ತಿತ್ವದ ನಿರ್ಣಾಯಕರು.
ರಂಗಾಸಕ್ತರಿಗೆ ಆತ್ಮೀಯ ಸ್ವಾಗತ.ಮಾಹಿತಿಗಾಗಿ 7259537777, 9480468327, 9845595505ಸಂಪರ್ಕಿಸಿ.
ಮಂಡ್ಯರಮೇಶ್ ಅವರ ನಟನ ರಂಗಶಾಲೆಯು ಕಳೆದ ಅನೇಕ ವರ್ಷಗಳಿಂದ ಕಲಾಮಾಧ್ಯಮದಲ್ಲಿ ಕ್ರಿಯಾಶೀಲವಾಗಿದ್ದು ರಂಗಭೂ ಮಿಯಲ್ಲಿ ತನ್ನದೇ ಆದ ವಿಶಿಷ್ಟ ಛಾಪನ್ನು ಮೂಡಿಸಿದೆ.ರಂಗಭೂಮಿಯ ಅಧ್ಯಯನ, ಪ್ರಾತ್ಯಕ್ಷಿಕೆ, ಪ್ರಯೋಗ ಹಾಗೂ ಪ್ರದರ್ಶನಗಳ ಮೂಲಕ ಶ್ರೇಷ್ಠತೆಯನ್ನು ಸಾಧಿಸುವುದರತ್ತ ನಟನ ಸತತವಾಗಿ ಪ್ರಯತ್ನ ನಡೆಸುತ್ತಾ ಬಂದಿದ್ದು, ಮೈಸೂರಿನಲ್ಲಿ ನೆಲೆಗೊಂಡಿದ್ದರೂ ಭಾರತದಾದ್ಯಂತ ರಂಗಯಾತ್ರೆಗಳನ್ನು,ರoಗ ತರಬೇತಿ ಶಿಬಿರಗಳನ್ನು ನಡೆಸುವುದರ ಮೂಲಕ ತನ್ನ ವ್ಯಾಪ್ತಿಯನ್ನು ವಿಸ್ತರಿಸಿಕೊಂಡಿದೆ.