ಮೈಸೂರು-‘ನಟನ’ವಾರಾಂತ್ಯ ರಂಗ ಪ್ರದರ್ಶನ-ಡಿ.29ರಂದು ಸoಜೆ 06.30ಕ್ಕೆ ಹಾಸ್ಯ ನಾಟಕ ‘ಕೈಲಾಸಂಸಾರ’

ಮೈಸೂರಿನ ಮತ್ತು ಸುತ್ತಮುತ್ತಲಿನ ಸದಭಿರುಚಿಯ,ಸಹೃದಯ ರಂಗಾಸಕ್ತರಿಗಾಗಿ ನಟನವು ವಾರಾಂತ್ಯ ರಂಗ ಪ್ರದರ್ಶನಗಳನ್ನು ನಡೆಸುತ್ತಿದ್ದು, ಇದೇ ಡಿಸೆಂಬರ್ 29ರಂದು ಸoಜೆ 06.30ಕ್ಕೆ ಸರಿಯಾಗಿ ರಾಮಕೃಷ್ಣ ನಗರದಲ್ಲಿರುವ ನಟನ ರಂಗಶಾಲೆಯಲ್ಲಿ ಸುವ್ವಿ ಅರ್ಪಿಸುವ ಹಾಸ್ಯ ನಾಟಕ ‘ಕೈಲಾಸಂಸಾರ’,ಕೈಲಾಸo ಬದುಕು ಬರಹಗಳ ಸಮೀಕ್ಷೆ ಪ್ರದರ್ಶನಗೊಳ್ಳಲಿದೆ.

ನಾಟಕದ ರಂಗಪಠ್ಯ ಮತ್ತು ನಿರ್ದೆಶನ ಸುಂದರ್ ವೀಣಾ ಅವರದ್ದು.ಆಧುನಿಕ ಕನ್ನಡ ರಂಗಭೂಮಿಯ ಆಧ್ಯರಲ್ಲಿ ಕೈಲಾಸಂ ಹೆಸರು ಚಿರಸ್ಥಾಯಿ. ಅವರ ಬದುಕು ಬರಹಗಳ ಸಾರವನ್ನು ನಗುತ್ತಲೇ ಗ್ರಹಿಸುವ ಒಂದು ವಿಶಿಷ್ಟ ಪ್ರಯತ್ನ ಈ ನವೀನ ಪ್ರಯೋಗ. ರಂಗಭೂಮಿ-ಕಿರುತೆರೆ-ಹಿರಿತೆರೆಗಳ ಸುಂದರ್ ವೀಣಾ,ವೀಣಾ ಸುಂದರ್ ಜೊತೆಯಾಗಿ ನಿಮ್ಮನ್ನು ರಂಜಿಸಲಿದ್ದಾರೆ. ನಿರ್ಮಾಪಕಿ, ನಟಿ,ನಿರ್ದೇಶಕಿ ಶ್ರುತಿ ನಾಯ್ಡು ಅವರು ಈ ಪ್ರಯೋಗವನ್ನು ಆಯೋಜಿಸಿದ್ದಾರೆ.

ರಂಗಾಸಕ್ತರಿಗೆ ಆತ್ಮೀಯ ಸ್ವಾಗತ.ಮಾಹಿತಿಗಾಗಿ 7259537777, 9480468327, 9845595505 ಸಂಪರ್ಕಿಸಬಹುದಾಗಿದೆ.

ಮoಡ್ಯರಮೇಶ್ ಅವರ ನಟನ ರಂಗಶಾಲೆಯು ಕಳೆದ ಅನೇಕ ವರ್ಷಗಳಿಂದ ಕಲಾಮಾಧ್ಯಮದಲ್ಲಿ ಕ್ರಿಯಾಶೀಲವಾಗಿದ್ದು
ರಂಗಭೂಮಿಯಲ್ಲಿ ತನ್ನದೇ ಆದ ವಿಶಿಷ್ಟ ಛಾಪನ್ನು ಮೂಡಿಸಿದೆ.ರಂಗಭೂಮಿಯ ಅಧ್ಯಯನ, ಪ್ರಾತ್ಯಕ್ಷಿಕೆ, ಪ್ರಯೋಗ ಹಾಗೂ ಪ್ರದರ್ಶನಗಳ ಮೂಲಕ ಶ್ರೇಷ್ಠತೆಯನ್ನು ಸಾಧಿಸುವುದರತ್ತ ನಟನ ಸತತವಾಗಿ ಪ್ರಯತ್ನ ನಡೆಸುತ್ತಾ ಬಂದಿದ್ದು, ಮೈಸೂರಿನಲ್ಲಿ ನೆಲೆಗೊಂಡಿದ್ದರೂ ಭಾರತದಾದ್ಯಂತ ರಂಗಯಾತ್ರೆಗಳನ್ನು, ರoಗ ತರಬೇತಿ ಶಿಬಿರಗಳನ್ನು ನಡೆಸುವುದರ ಮೂಲಕ ತನ್ನ ವ್ಯಾಪ್ತಿಯನ್ನು ವಿಸ್ತರಿಸಿಕೊಂಡಿದೆ.

Leave a Reply

Your email address will not be published. Required fields are marked *

× How can I help you?