
ಮೈಸೂರು-ಮೈಸೂರಿನ ಮತ್ತು ಸುತ್ತಮುತ್ತಲಿನ ಸದಭಿರುಚಿಯ,ಸಹೃದಯ ರಂಗಾಸಕ್ತರಿಗಾಗಿ ನಟನವು ವಾರಾಂತ್ಯ ರಂಗ ಪ್ರದರ್ಶನಗಳನ್ನು ನಡೆಸುತ್ತಿದ್ದು, ತನ್ನ ಚಟುವಟಿಕೆಯ ಭಾಗವಾಗಿ, ಇದೇ ಜನವರಿ 19ರಂದು ಮಧ್ಯಾಹ್ನ 03ಕ್ಕೆ ಹಾಗೂ ಸಂಜೆ 06.30ಕ್ಕೆ ಸರಿಯಾಗಿ ರಾಮಕೃಷ್ಣ ನಗರದಲ್ಲಿರುವ ನಟನ ರಂಗಶಾಲೆಯಲ್ಲಿ, ವಾಸ್ಪ್ ಥಿಯೇಟರ್ ಬೆಂಗಳೂರು ಅಭಿನಯಿಸುವ ಹಾಸ್ಯ ನಾಟಕ ‘ನೀನಾನಾದ್ರೆ ನಾನೀನೇನಾ’ ಪ್ರದರ್ಶನಗೊಳ್ಳಲಿದೆ.
ನಾಟಕದ ರಚನೆ ಎಸ್.ಸುರೇಂದ್ರನಾಥ್ ಹಾಗೂ ನಿರ್ದೇಶನ ವಿನಯ್ ಶಾಸ್ತ್ರೀ ಅವರದ್ದು.
ನಾಟಕದ ಕುರಿತು:
ಶೇಕ್ಸ್ಪಿಯರ್‌ರ ‘ಕಾಮಿಡಿ ಆಫ್ ಏರರ್ಸ್’ ನಾಟಕದಿಂದ ಸ್ಪೂರ್ತಿಗೊoಡು ಎಸ್.ಸುರೇಂದ್ರನಾಥ್‌ರವರು ಬರೆದಿರುವ ನಾಟಕ ಇದಾಗಿದೆ. ನಿಮ್ಮೆಲ್ಲರನ್ನು ನಗುವಿನ ಏಳು ಸುತ್ತಿನ ಕೋಟೆಗೆ ಕರೆದೊಯ್ಯುವ ಈ ನಾಟಕ, ಪ್ರತಿಯೊಂದು ಸುತ್ತಿನಲ್ಲೂ ಹಾಸ್ಯದ ರಸದೌತಣ ಉಣಬಡಿಸುತ್ತದೆ. ಮಗನ ಹುಡುಕಾಟದಲ್ಲಿ ಮಾತು ಮರೆತ ಜೊತೆಗಾರನೊಂದಿಗೆ ಗಾನಾಬಜಾನ ನಡೆಸುವ ತಂದೆ, ಹೆಂಡತಿಯ ಪ್ರೀತಿಯನ್ನು ಗೆಲ್ಲಲು ಶತಪ್ರಯತ್ನ ಪಡುವ ಗಂಡ, ಕಥೆ-ಕಾದಂಬರಿಯನ್ನೇ ಜೀವನದ ಕೈಪಿಡಿಯಾಗಿಸಿಕೊಂಡಿರುವ ಮುಗ್ಧ, ಗಂಡನ ಹುಡುಕಾಟದಲ್ಲೂ ಹಸಿವು ಮರೆಯದ ಹೆಂಡತಿ, ಅಕ್ಕನಿಗೆ ಬುದ್ಧಿ ಹೇಳುವ ಸಾಧನೆಯಲ್ಲಿ ಸದಾ ಸೋಲುವ ತಂಗಿ, ಯಜಮಾನನಿಗೆ ಸೋದರನಿಗಿಂತಲೂ ಮಿಗಿಲಾಗಿ ಜೊತೆಯಲ್ಲಿದ್ದು, ಸದಾ ಪ್ರೇಯಸಿಯ ನೆನೆವ ಭಂಟ, ಯಾರಿಗೆ ಏನು ಕೊಡಬೇಕೋ ಅದನ್ನು ಸರಿಯಾದ ಸಮಯಕ್ಕೆ ಕೊಡದ ವ್ಯಾಪಾರಿ, ಕಿವಿಗೆ ಮಾತನ್ನು ತೆಗೆದುಕೊಳ್ಳವುದ ನಿಲ್ಲಿಸಿದ ಅಂಬಿಗನೊoದಿಗೆ ತೆಪ್ಪದಲ್ಲಿ ತಬ್ಬಿಕೊಂಡು ತೆವಳುತ್ತಿರುವ ನಾವಿಕ, ಇವರ ಜಗಳ-ಜಂಜಾಟ,ಸoದೇಹ-ಸoವೇದನೆ, ಹುಡುಕಾಟ-ಹಾರಾಟಗಳು ಬೆಲ್ಲದ ಹೂರಣವಾಗಿ ನಿಮ್ಮ ಬಾಯಿಗೆ ನಗೆಯ ಸಿಹಿ ಹೋಳಿಗೆ ಉಣಬಡಿಸುವುದರಲ್ಲಿ ಸಂದೇಹವಿಲ್ಲ.

ರoಗಾಸಕ್ತರಿಗೆ ಆತ್ಮೀಯ ಸ್ವಾಗತ.ಮಾಹಿತಿಗಾಗಿ 7259537777, 9480468327, 9845595505 ಸಂಪರ್ಕಿಸಿ.
ಮೈಸೂರಿನ ನಟನ ರಂಗಶಾಲೆಯು ಕಳೆದ ಅನೇಕ ವರ್ಷಗಳಿಂದ ಕಲಾಮಾಧ್ಯಮದಲ್ಲಿ ಕ್ರಿಯಾಶೀಲವಾಗಿದ್ದು ರಂಗಭೂಮಿಯಲ್ಲಿ ತನ್ನದೇ ಆದ ವಿಶಿಷ್ಟ ಛಾಪನ್ನು ಮೂಡಿಸಿದೆ.ರಂಗಭೂಮಿಯ ಅಧ್ಯಯನ, ಪ್ರಾತ್ಯಕ್ಷಿಕೆ, ಪ್ರಯೋಗ ಹಾಗೂ ಪ್ರದರ್ಶನಗಳ ಮೂಲಕ ಶ್ರೇಷ್ಠತೆಯನ್ನು ಸಾಧಿಸುವುದರತ್ತ ನಟನ ಸತತವಾಗಿ ಪ್ರಯತ್ನ ನಡೆಸುತ್ತಾ ಬಂದಿದ್ದು, ಮೈಸೂರಿನಲ್ಲಿ ನೆಲೆಗೊಂಡಿದ್ದರೂ ಭಾರತದಾದ್ಯಂತ ರಂಗಯಾತ್ರೆಗಳನ್ನು,ರoಗ ತರಬೇತಿ ಶಿಬಿರಗಳನ್ನು ನಡೆಸುವುದರ ಮೂಲಕ ತನ್ನ ವ್ಯಾಪ್ತಿಯನ್ನು ವಿಸ್ತರಿಸಿಕೊಂಡಿದೆ.