ಮೈಸೂರು:ಒಳ ಮೀಸಲಾತಿ ಸಮೀಕ್ಷೆ ಅವೈಜ್ಞಾನಿಕ-ಪುನರ್ ಪರಿಶೀಲಿಸಿ ಒಳ ಮೀಸಲಾತಿ ಜಾರಿಗೆ ‘ಪರಿಶಿಷ್ಟರ ಒಳ ಮೀಸಲಾತಿ ಜಾಗೃತಿ ಸಮಿತಿ’ಸಭೆಯಲ್ಲಿ ಆಗ್ರಹ

ಮೈಸೂರು:ಹಿಂದಿನ ಸರ್ಕಾರ ನಡೆಸಿರುವ ಒಳ ಮೀಸಲಾತಿ ಸಮೀಕ್ಷೆ ಅವೈಜ್ಞಾನಿಕವಾಗಿದ್ದು, ಇದನ್ನು ಪುನರ್ ಪರಿಶೀಲನೆ ನಡೆಸಿ ಹೊಸ ಒಳ ಮೀಸಲಾತಿ ನೀತಿಯನ್ನು ಜಾರಿಗೆ ತರಬೇಕು ಎಂದು ಸರಕಾರವನ್ನು ಆಗ್ರಹಿಸಿ ಪರಿಶಿಷ್ಟರ ಒಳ ಮೀಸಲಾತಿ ಜಾಗೃತಿ ಸಮಿತಿ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು.

ನಗರದ ಜೆ.ಎಲ್.ಬಿ ರಸ್ತೆಯ ರೋಟರಿ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ದಲಿತ ಮುಖಂಡರು ಆದ ವೈದ್ಯ ಡಾ.ನವೀನ್ ಮಾತನಾಡಿ, ಆದಿ ಆಂಧ್ರ, ಆದಿ ಕರ್ನಾಟಕ, ಆದಿ ದ್ರಾವಿಡ ಸಮುದಾಯಗಳಿಗೆ ಮೀಸಲಾತಿ ನೀಡುವ ವೇಳೆ ಬಲಗೈ ಮತ್ತು ಎಡಗೈ ಜಾತಿಯ ಗುಂಪುಗಳ ವರ್ಗೀಕರಣದಲ್ಲಿ ತೊಡಕುಗಳಿವೆ. ಹೀಗಾಗಿ ಹೊಸದಾಗಿ ಜಾತಿ ಗಣತಿ ಮಾಡಿ ತೊಡಕುಗಳನ್ನು ನಿವಾರಿಸಿ ಸರ್ವೋಚ್ಚ ನ್ಯಾಯಾಲಯದ ಆದೇಶದ ಪ್ರಕಾರ ಅಂಕಿ -ಅಂಶ ಗಳನ್ನು ಕಲೆ ಹಾಕಿ ಒಳ ಮೀಸಲಾತಿ ವರ್ಗಿಕರಣ ಮಾಡಬೇಕಿದೆ ಎಂದರು.

ಅಕ್ಟೋಬರ್ 19ರಂದು ನಡೆಯುವ ರಾಜ್ಯ ಮಟ್ಟದ ಕಾರ್ಯಗಾರದಲ್ಲಿ ಎರಡು ಸಮುದಾಯಗಳ ಮುಖಂಡರು ಪಾಲ್ಗೊಂಡು ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು. ಒಳ ಮೀಸಲಾತಿ ಜಾರಿಗೆ ಪಟ್ಟು ಹಿಡಿಯಬೇಕು ಎಂದು ಅವರು ಮನವಿ ಮಾಡಿಕೊಂಡರು.

ಈ ಸಂದರ್ಭದಲ್ಲಿ ಮಾಜಿ ಮೇಯರ್ ಪುರುಷೋತ್ತಮ್, ಹಾಗೂ ಕರ್ನಾಟಕ ಲೋಕಸೇವಾ ಆಯೋಗದ ಮಾಜಿ ಸದಸ್ಯ ದಾಸಯ್ಯ ವಿಚಾರ ಮಂಡಿಸಿದರು.

ದಲಿತ ಮುಖಂಡ ಎಚ್.ಆರ್ ಸುರೇಶ್ ಕುಮಾರ್ ವೇದಿಕೆಯಲ್ಲಿದ್ದರು.

ಈಶ್ವರ್ ಚಕ್ಕಡಿ ಕಾರ್ಯಕ್ರಮವನ್ನು ನಿರೂಪಿಸಿದರು.

——————–ಮಧುಕುಮಾರ್

Leave a Reply

Your email address will not be published. Required fields are marked *

× How can I help you?