ಮೈಸೂರು-ಜಿಲ್ಲಾ ಪೊಲೀಸ್ ಘಟಕದ ವಾರ್ಷಿಕ ಕ್ರೀಡಾಕೂಟ 2024 ರ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ದಕ್ಷಿಣ ವಲಯದ ಡಿ.ಐ.ಜಿ.ಪಿ ಡಾ.ಬೋರಲಿಂಗಯ್ಯರವರು ಪಾಲ್ಗೊಂಡು ಅಧಿಕಾರಿಗಳಿಗೆ ಹಾಗೂ ವಿಜೇತ ತಂಡಗಳಿಗೆ ಮತ್ತು ಕ್ರೀಡಾಪಟುಗಳಿಗೆ ಪ್ರಶಸ್ತಿ ವಿತರಣೆ ಮಾಡಿದರು.
ಜಿಲ್ಲಾ ಪೊಲೀಸ್ ಅಧೀಕ್ಷಕರಾದ ವಿಷ್ಣುವರ್ಧನ್ ,ಅಪರ ಪೊಲೀಸ್ ಅಧೀಕ್ಷಕರಾದ ನಾಗೇಶ್ ಎಲ್ ರವರು ಉಪಸ್ಥಿತರಿದ್ದರು.
ಪುರುಷರ ವಿಭಾಗದ ಚಾಂಪಿಯನ್ ಆಗಿ ಡಿ.ಎ.ಆರ್ ನ ರಘುನಂದನ್ ,ಮಹಿಳೆಯರ ವಿಭಾಗದ ಚಾಂಪಿಯನ್ ಆಗಿ ಬೈಲಕುಪ್ಪೆ ಪೊಲೀಸ್ ಠಾಣೆಯ ಕುಮಾರಿ,ಅಶ್ವಿತ ಎಸ್ ಪ್ರಶಸ್ತಿ ಮುಡಿಗೇರಿಸಿಕೊಂಡರು.
ಚಾಂಪಿಯನ್ ತಂಡವಾಗಿ ಜಿಲ್ಲಾ ಸಶಸ್ತ್ರ ಮೀಸಲು ಪಡೆ ಪ್ರಶಸ್ತಿ ಪಡೆಯಿತು.
———ಮಧುಕುಮಾರ್