ಮೈಸೂರು:ದಲಿತರು ಮಂತ್ರಿಗಳಾಗುವುದನ್ನು ಸಹಿಸದ ಬಿಜೆಪಿಗರು ಪ್ರಿಯಾಂಕಾ ಖರ್ಗೆ ಅವರನ್ನು ಇದೆ ಕಾರಣಕ್ಕೆ ಕುರ್ಚಿಯಿಂದ ಇಳಿಸಬೇಕೆಂದು ಹವಣಿಸುತ್ತಿದ್ದು ಅರ್ಥವಿಲ್ಲದ ವಿವಾದಗಳನ್ನು ಅವರ ತಲೆಗೆ ಕಟ್ಟಿ ಕೆಟ್ಟ ಹೆಸರು ತರಲು ಮುಂದಾಗಿದ್ದರೆಂದು ಕಾಂಗ್ರೆಸ್ ವಕ್ತಾರ ಎಸ್.ರಾಜೇಶ್ ಆಕ್ರೋಶ ಹೊರಹಾಕಿದರು.
ಮೈಸೂರಿನ ಪತ್ರಕರ್ತರ ಭವನದಲ್ಲಿ ಪತ್ರಿಕಾಘೋಷ್ಠಿ ನಡೆಸಿ ಮಾತನಾಡಿದ ಅವರು,ಗುತ್ತಿಗೆದಾರ ಸಚಿನ್ ಆತ್ಮಹತ್ಯೆ ಪ್ರಕರಣದಲ್ಲಿ ಪ್ರಿಯಾಂಕ ಖರ್ಗೆ ಕೈವಾಡ ಇಲ್ಲ.ಗುತ್ತಿಗೆದಾರ ಸಚಿನ್‌ಗೆ ಯಾವುದೇ ರೀತಿಯ ಕಿರುಕುಳವನ್ನು ಸಹ ನೀಡಿಲ್ಲ.ಬಿ.ಜೆ.ಪಿ.ಯವರು ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ ಎಂದರು.
ದಿವಂಗತ ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ರವರ ನಂತರ ಬೆಂಗಳೂರಿನಲ್ಲಿ ಹಲವಾರು ಐ.ಟಿ, ಬಿ.ಟಿ ಕಂಪನಿಗಳು ತಳವೂರಿ ನಿಲ್ಲುವಂತೆ ಮಾಡಿರುವ ಪ್ರಿಯಾಂಕಾ ಖರ್ಗೆ,ವಿಧಾನಸಭಾ ಕಲಾಪಗಳಲ್ಲಿ ಸಕ್ರಿಯವಾಗಿ ಭಾಗವಹಿಸಿ ವಿರೋಧಪಕ್ಷಗಳ ಠೀಕೆಗಳಿಗೆ ಸಮರ್ಥವಾಗಿ ಉತ್ತರಿಸುತ್ತಿದ್ದಾರೆ.ಇದನ್ನು ಸಹಿಸದ ವಿರೋಧ ಪಕ್ಷಗಳು ಹೇಗಾದರೂ ಮಾಡಿ ಒಬ್ಬ ಸಮರ್ಥ ದಲಿತ ಮಂತ್ರಿಯನ್ನು ಹೊಸಕಿ ಹಾಕಬೇಕು ಎಂದು ಸಂಚು ಮಾಡುತ್ತಿದ್ದು ಅದು ಕೇವಲ ಅವರ ಹಗಲು ಕನಸಾಗಿ ಉಳಿಯಲಿದೆ ಎಂದರು.
ಗುತ್ತಿಗೆದಾರ ಸಚಿನ್ ಡೆತ್ ನೋಟ್‌ನಲ್ಲಿ ಪ್ರಿಯಾಂಕ ಖರ್ಗೆ ರವರ ಹೆಸರನ್ನು ಉಲ್ಲೇಖಿಸಿಲ್ಲ. ಪ್ರಿಯಾಂಕ ಖರ್ಗೆ ರವರ ವಿರುದ್ಧ ಯಾವುದೇ ಸಾಕ್ಷಿಗಳು ಇಲ್ಲ. ಬಿ.ಜೆ.ಪಿಯವರು ಮೊದಲಿನಿಂದಲೂ ಪ್ರಿಯಾಂಕ ಖರ್ಗೆ ವಿರುದ್ಧ ಹೋರಾಟ ಮಾಡುತ್ತಾ ಬಂದಿದ್ದಾರೆ. ಪ್ರಿಯಾಂಕ ಖರ್ಗೆ ಒಬ್ಬ ಯುವ ದಲಿತ ಶಾಸಕರಾಗಿ ಮಂತ್ರಿಯಾಗಿ ದಲಿತ ನಾಯಕನಾಗಿ ಬೆಳೆಯುತ್ತಿರು ವುದನ್ನು ಕಂಡು ಸಹಿಸದ ಮನುವಾದಿ ಬಿ.ಜೆ.ಪಿ.ನಾಯಕರು ಅವರನ್ನು ರಾಜಕೀಯವಾಗಿ ಮುಗಿಸಲು ಷಡ್ಯಂತ್ರ ನಡೆಸುತ್ತಿದ್ದಾರೆ ಎಂದರು.
ಕಾಂಗ್ರೆಸ್ ಎಸ್.ಸಿ. ಘಟಕದ ಕಾರ್ಯದರ್ಶಿ ಕುಕ್ಕರಹಳ್ಳಿ ನಂಜುಂಡಸ್ವಾಮಿ, ಕಾರ್ಯದರ್ಶಿ ಶಿವಶಂಕರ್ ಕೆ.ಎಸ್.ಆರ್.ಟಿ.ಸಿ,ರಾಜ್ಯ ಸಂಶೋಧಕರ ಸಂಘದ ಅಧ್ಯಕ್ಷರಾದ ಮರಿದೇವಯ್ಯ, ಓಂಕಾರ್ ರವಿ, ಸಾಹುಕಾರ್ ಚನ್ನಯ್ಯ ಕಾರ್ಯದರ್ಶಿ ಎಸ್.ಎ.ರಹೀಮ್, ಮೈಸೂರು ಜಿಲ್ಲಾ ಮಡಿವಾಳ ಸಂಘದ ಉಪಾಧ್ಯಕ್ಷರಾದ ಕೇಶವ, ಕಾಂಗ್ರೆಸ್ ಮುಖಂಡ ಶ್ರೀನಿವಾಸ್, ಸೇವಾದಳದ ಅಧ್ಯಕ್ಷರುಗಳಾದ ಕಮ್ರನ್ ಪಾಷ, ಮೋಹನ್ ಕುಮಾರ್ ಹಾಗೂ ಇನ್ನಿತರರು ಉಪಸ್ಥಿತರಿದ್ದರು.
————-ಮಧುಕುಮಾರ್