ಮೈಸೂರು-ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಮೂರನೇ ವರ್ಷದ ಸವಿನೆನಪು-ಇದೇ ಭಾನುವಾರದಂದು ಚಿತ್ರಕಲಾ ಸ್ಪರ್ಧೆ

ಮೈಸೂರು-ಪವರ್ ಸ್ಟಾರ್ ಪುನೀತ್ ರಾಜಕುಮಾರ್ ರವರ ನೆನಪಿನಲ್ಲಿ ಮಕ್ಕಳಲ್ಲಿ ಪರಿಸರದ ಅರಿವು ಮೂಡಿಸುವ ಸಲುವಾಗಿ ಗಂಧಧಗುಡಿ ಚಿತ್ರಕಲಾ ಸ್ಪರ್ಧೆ ಯನ್ನು ಹಮ್ಮಿಕೊಳ್ಳಲಾಗಿದ್ದು ಅದರಲ್ಲಿ ಪ್ರತಿ ಶಾಲೆಯ ಮಕ್ಕಳು ಭಾಗವಹಿಸುವಂತೆ ಕರ್ನಾಟಕ ವಸ್ತುಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷ ಅಯೂಬ್ ಖಾನ್ ಕರೆ ನೀಡಿದರು.

ಇಂದು ತಮ್ಮ ಕಚೇರಿಯಲ್ಲಿ ದಸರಾ ಸಾಂಸ್ಕೃತಿಕ ಹಾಗೂ ಮಹಿಳಾ ಮತ್ತು ಮಕ್ಕಳ ಉಪಸ ಮಿತಿ, ಕರ್ನಾಟಕ ರತ್ನ ಅಪ್ಪು ಅಭಿಮಾನಿಗಳ ಬಳಗದ ವತಿಯಿಂದ ಆಯೋಜಿಸಲಾಗಿರುವ ಚಿತ್ರಕಲಾ ಸ್ಪರ್ಧೆಯ ಪೋಸ್ಟರ್ ಬಿಡುಗಡೆಗೊಳಿಸಿ ಅವರು ಮಾತನಾಡಿದರು.

ಕನ್ನಡ ಚಿತ್ರರಂಗದ ನಟಸಾರ್ವಭೌಮ ವರನಟ ಡಾ.ರಾಜಕುಮಾರ್ ರವರ ಪ್ರತಿಯೊಂದು ಚಿತ್ರವೂ ಸಮಾಜಕ್ಕೆ ಉತ್ತಮ ಸಂದೇಶ ನೀಡುತ್ತಿದ್ದವು.ಕುಟುಂಬ ಪ್ರಧಾನವಾದ ಚಿತ್ರಗಳಾಗಿದ್ದವು.ಅವರಂತೆಯೇ ಅವರ ಸುಪುತ್ರ ಪವರ್ ಸ್ಟಾರ್ ಕರ್ನಾಟಕ ರತ್ನ ಪುನೀತ್ ರಾಜಕುಮಾರ್ ರವರ ನಟನೆಯ ಚಿತ್ರಗಳು ಸಹ ಸಮಾಜಕ್ಕೆ ಸಂದೇಶ ಸಾರುವ ಚಿತ್ರಗಳಾಗಿದ್ದವು.ಅವರ ಅಕಾಲಿಕ ಮರಣ ಚಿತ್ರರಂಗಕ್ಕೆ ಹಾಗು ರಾಜ್ಯಕ್ಕೆ ತುಂಬಲಾರದ ನಷ್ಟವನ್ನು ಉಂಟು ಮಾಡಿದೆ.

ಅವರ ಸವಿ ನೆನಪಿನಲ್ಲಿ ಆಯೋಜಿಸಿರುವ ಚಿತ್ರ ರಚನಾ ಸ್ಪರ್ಧೆ ಶ್ಲಾಘನೀಯವಾದದ್ದು ಎಂದರು.

ಪವರ್ ಸ್ಟಾರ್ ಪುನೀತ್ ರಾಜಕುಮಾರ್ ರವರ ಮೂರನೇ ವರ್ಷದ ನೆನಪಿನಲ್ಲಿ ಗಂಧಧಗುಡಿ ಚಿತ್ರಕಲಾ ಸ್ಪರ್ಧೆಯನ್ನ 27 ರ ಭಾನುವಾರ ಬೆಳಗ್ಗೆ 10:30ರಿಂದ ಮಧ್ಯಾಹ್ನ 1:00 ಗಂಟೆಯವರೆಗೆ ಮೈಸೂರು ದಸರಾ ವಸ್ತುಪ್ರದರ್ಶನದ ಪಿ. ಕಾಳಿಂಗರಾವ್ ಗಾನಮಂಟಪದಲ್ಲಿ ಹಮ್ಮಿಕೊಳ್ಳಲಾಗಿದೆ.ಪ್ರವೇಶ ಉಚಿತವಾಗಿದೆ ಎಂದು ದಸರಾ ಸಾಂಸ್ಕೃತಿಕ ಸಮಿತಿ ಅಧ್ಯಕ್ಷ ರಘುರಾಜೇ ಅರಸ್ ಮಾಹಿತಿ ನೀಡಿದರು.

ವಿಭಾಗಗಳು-

8 ವರ್ಷ ದಿಂದ 12ವರ್ಷ, 12 ವರ್ಷ ದಿಂದ 18 ವರ್ಷ, 18 ವರ್ಷದಿಂದ ಮೇಲ್ಪಟ್ಟವರು.

ಚಿತ್ರಕಲಾ ಸ್ಫರ್ಧೆಯ ವಿಷಯ:-

ಪರಿಸರ ಬೆಟ್ಟಗುಡ್ಡಗಳು, ನದಿ,ಕೆರೆ, ವನ್ಯಜೀವಿಗಳು ಅಭಯಾರಣ್ಯ, ಜಲಪಾತ, ನಿಸರ್ಗಕ್ಕೆ ಸಂಬಂಧಿಸಿದ್ದಾಗಿರಬೇಕು.

ಮೂರೂ ವಿಭಾಗದಲ್ಲೂ ಮೊದಲನೇ,ದ್ವಿತೀಯ ಹಾಗೂ ತೃತೀಯ ಆಕರ್ಷಕ ಬಹುಮಾನಗಳನ್ನು ನೀಡಲಾಗುವುದು.ಹಾಗೆಯೇ ಸ್ಪರ್ಧಿಸಿದ ಎಲ್ಲಾ ಸ್ಪರ್ಧಾಳುಗಳಿಗೆ ಪ್ರಮಾಣ ಪತ್ರ ನೀಡಲಾಗುತ್ತದೆ.

ಆಸಕ್ತ ಸ್ಪರ್ಧಾಳುಗಳು ಸ್ಥಳದಲ್ಲೆ ನೋಂದಾಯಿಸಿಕೊಳ್ಳಬಹುದು.

ಸೂಚನೆಗಳು

1 ಪ್ರವೇಶ ಉಚಿತ ,2 ಚಿತ್ರ ರಚನೆಗೆ ಅಗತ್ಯವಿರುವ ಕಾರ್ಡ್ಬೋರ್ಡ್ ಮಾತ್ರ ನೀಡಲಾಗುವುದು.
3 ಕಲರ್ಸ್, ವಾಟರ್ ಪೇಟಿಂಗ್ ಸೇರಿದಂತೆ ಅವಶ್ಯಕ ಪದಾರ್ಥಗಳನ್ನು ಸಂಬಂಧಿಸಿದ ಪರಿಕರಗಳನ್ನು ಸ್ಪರ್ಧಿಗಳೇ ತರಬೇಕು.

ಹೆಚ್ಚಿನ ವಿವರಗಳಿಗೆ ಆಸಕ್ತರು 9880358761 / 9880752727 ಸಂಪರ್ಕಿಸಬಹುದು ಎಂದರು.

ಮಹಿಳಾ ಮತ್ತು ಮಕ್ಕಳ ಉಪಸಮಿತಿ ಅಧ್ಯಕ್ಷೆ ಶಾರದಾ ಸಂಪತ್, ಶೌಕತ್ ಅಲಿಖಾನ್, ಲತಾ ರಂಗನಾಥ್, ಜಗದೀಶ್, ಗಿರೀಶ್, ಜಪ್ರುಲ್ಲಾ, ಶಾಂತ, ಕಮಲಮ್ಮ,‌ ಸರ್ದಾರ್ ಶರೀಫ್, ಸಯ್ಯದ್ ಫಾರುಕ್, ನಿರೂಪಕ ಅಜಯ್ ಶಾಸ್ತ್ರಿ, ಇನ್ನಿತರರು ಇದ್ದರು.

——ಮಧುಕುಮಾರ್

Leave a Reply

Your email address will not be published. Required fields are marked *

× How can I help you?