ಮೈಸೂರು-ಸಂಭ್ರಮದ ನವರಾತ್ರಿ ಉತ್ಸವಕ್ಕೆ ಇಂದು ಚಾಲನೆ ದೊರೆತಿದೆ.ಮಾತೆ ದುರ್ಗೆಯನ್ನು ಒಂಬತ್ತು ದಿನಗಳ ಕಾಲ ವಿವಿಧ ರೀತಿಯಲ್ಲಿ ಆರಾಧಿಸಿ ಬಯಸಿದ್ದನ್ನು ಪಡೆಯಲು ಜಾತಿ-ಧರ್ಮ ಎಲ್ಲವನ್ನು ಬದಿಗಿಟ್ಟು ಮಹಿಳೆಯರು ಪೂಜಾ ಕಾರ್ಯಗಳನ್ನು ಕೈಗೊಳ್ಳುತ್ತಾರೆ.
ಚಾಮುಂಡೇಶ್ವರಿಗೆ ಪ್ರತಿದಿನವೂ ವಿವಿಧ ಬಣ್ಣದ ವಸ್ತ್ರ-ವೈಡೂರ್ಯಗಳ ಮೂಲಕ ಅಲಂಕಾರ ಮಾಡಲಾಗುತ್ತದೆ.ಅದರಂತೆಯೇ ಮಹಿಳೆಯರು ನಿರ್ದಿಷ್ಟ ಬಣ್ಣದ ಉಡುಪುಗಳನ್ನು ಧರಿಸುವ ಮೂಲಕ ತಮ್ಮ ಭಕ್ತಿಯನ್ನು ತೋರ್ಪಡಿಸುತ್ತಾರೆ.
ಇಂದು ಕಾವೇರಿ ಆರೋಗ್ಯ ವಿಜ್ಞಾನ ಸಂಸ್ಥೆಯ ಮಹಿಳಾ ಸಿಬ್ಬಂದಿ ವರ್ಗ ಹಳದಿ ಬಣ್ಣದ ವಸ್ತ್ರವನ್ನು ಧರಿಸುವ ಮೂಲಕ ನವರಾತ್ರಿ ‘ಸಂಭ್ರಮವನ್ನು-ಸಂಭ್ರಮ’ದಿಂದ ಸ್ವಾಗತಿಸಿದ್ದಾರೆ.
——————–ಮಧುಕುಮಾರ್