ಮೈಸೂರು-ಜ.5 ಕ್ಕೆ’ಸಂವಿಧಾನವನ್ನು ಬದಲಾಯಿಸಿದ್ದು ಯಾರು’?ವಿಚಾರ ಗೋಷ್ಠಿ-ಪ್ರಚಾರ ವಾಹನಕ್ಕೆ ಚಾಲನೆ

ಮೈಸೂರು-ಸಿಟಿಜನ್ ಫಾರ್ ಸೋಶಿಯಲ್ ಜಸ್ಟಿಸ್ ವತಿಯಿಂದ ಜ.5ನೇ ತಾರೀಕು ಭಾನುವಾರ ದಂದು ನಗರದ ಜೆ ಕೆ ಮೈದಾನದ ಸಭಾಂಗಣದಲ್ಲಿ ಸಂವಿಧಾನ ಬದಲಾಯಿಸಿದವರು ಯಾರು?ಎಂಬ ಪುಸ್ತಕದ ಕುರಿತು ನಡೆಯಲಿರುವ ಗೋಷ್ಠಿ ಕಾರ್ಯಕ್ರಮದ ಪ್ರಚಾರ ವಾಹನಕ್ಕೆ ಚಾಲನೆ ನೀಡಲಾಯಿತು.

ಈ ಕಾರ್ಯಕ್ರಮದಲ್ಲಿ ದಿಕ್ಸೂಚಿ ಭಾಷಣವನ್ನು ಮಾಡಲು ಬಿಹಾರದ ರಾಜ್ಯಪಾಲರಾದ ಆರಿಫ್ ಮೊಹಮ್ಮದ್ ಖಾನ್ ಹಾಗೂ ಮಾಜಿ ಉಪಮುಖ್ಯಮಂತ್ರಿಗಳಾದ ಗೋವಿಂದ ಕಾರಜೋಳ ಹಾಗೂ ಸಂಸದರಾದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್, ಕೃಷ್ಣರಾಜ ಕ್ಷೇತ್ರದ ಶಾಸಕರಾದ ಟಿ. ಎಸ್. ಶ್ರೀವತ್ಸರ,ಪುಸ್ತಕ ಲೇಖಕರಾದ ವಿಕಾಸ್ ಪುತ್ತೂರು ಹಾಗು ಪ್ರಭಾವಿ ನಾಯಕರುಗಳು ಭಾಗವಹಿಸಲಿದ್ದಾರೆ.

ನಮ್ಮ ದೇಶದಲ್ಲಿ ಸಂವಿಧಾನ ಭಕ್ತಿಯಿಂದ ನೋಡುವಂತಹ ಶ್ರೇಷ್ಠವಾದ ಗ್ರಂಥ.ಆದರೆ ಇತ್ತೀಚಿಗೆ ಕಾಂಗ್ರಸ್ ಪಕ್ಷ ಅದರ ಶ್ರೇಷ್ಠತೆಯನ್ನೇ ಹಾಳುಮಾಡುವ ರೀತಿಯಲ್ಲಿ ಸಂವಿಧಾನವನ್ನು ಚುನಾವಣಾ ಸರಕಾಗಿ ಉಪಯೋಗಿಸುತ್ತಿದೆ.ಸಂವಿಧಾನದ ಮೂಲ ಆಶಯಕ್ಕೆ ಧಕ್ಕೆವುಂಟು ಮಾಡಿದ ಕಾಂಗ್ರೇಸ್ ಈಗ ಅದನ್ನು ಮುಚ್ಚಿಹಾಕಲು ಮತ್ತೊಬ್ಬರಿಂದ ಸಂವಿಧಾನಕ್ಕೆ ಧಕ್ಕೆಯಾಗಲಿದೆ ಎನ್ನುವ ಸುಳ್ಳು ಆತಂಕವನ್ನು ಸಮಾಜದಲ್ಲಿ ನಿರ್ಮಾಣ ಮಾಡುತ್ತಿದೆ. ಇಂತಹ ಸುಳ್ಳುಗಳ ನಡುವೆ ನಿಜವಾಗಿಯೂ ಸಂವಿಧಾನವನ್ನು ಬದಲಾಯಿಸಿದವರು ಯಾರು ಎಂದು ತಿಳಿದುಕೊಳ್ಳುವ ಅನಿವಾರ್ಯತೆ ಸೃಷ್ಟಿಯಾಗಿದೆ. ಹಾಗಾಗಿ ಈ ಕಾರ್ಯಕ್ರಮಕ್ಕೆ ಎಲ್ಲರೂ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಬೇಕೆಂದು ಕಾರ್ಯಕರ್ತರು ಕರೆನೀಡಿದರು.

ಈ ಸಂಧರ್ಭದಲ್ಲಿ ಮೈಸೂರು ನಗರ ಬಿಜೆಪಿ ಉಪಾಧ್ಯಕ್ಷ ಜೋಗಿ ಮಂಜು, ಕೆ.ಆರ್ ಕ್ಷೇತ್ರದ .ಯುವ ಮೋರ್ಚಾ ಅಧ್ಯಕ್ಷ ಕೆ.ಎಂ.ನಿಶಾಂತ್, ಪ್ರಧಾನ ಕಾರ್ಯದರ್ಶಿ ಅಕ್ಷಯ್, ಮುಖಂಡರು ಗಳಾದ ಅಜಯ್ ಶಾಸ್ತ್ರಿ, ವರುಣ್, ಪ್ರಶೀಕ್, ರವಿಕುಮಾರ್, ಶ್ರೇಯಸ್ ಮಹಾನ್, ಸಾಯಿಕುಮಾರ್, ರಂಜನ್, ಮಿತುನ್ ಹಾಗು ಇನ್ನಿತರರು ಇದ್ದರು.

——-—-ಮಧುಕುಮಾರ್

Leave a Reply

Your email address will not be published. Required fields are marked *

× How can I help you?