ಮೈಸೂರು:ಶಾರದಾ ವಿಲಾಸ ಕಾನೂನು ಕಾಲೇಜು ಮೈಸೂರು,ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಮತ್ತು ವಕೀಲರ ಸಂಘ ಮೈಸೂರು ಸಂಯುಕ್ತಾಶ್ರಯದಲ್ಲಿ ಶಾರದಾ ವಿಲಾಸ ಕಾನೂನು ಕಾಲೇಜಿನ ಎಂ.ವೆಂಕಟಕೃಷ್ಣಯ್ಯ ಆಡಿಟೋರಿಯಂನಲ್ಲಿ ಮಂಗಳವಾರ ಸಂವಿಧಾನ ದಿನಾಚರಣೆ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ದಿನೇಶ್, ಮೈಸೂರು ವಕೀಲರ ಸಂಘದ ಅಧ್ಯಕ್ಷ ಲೋಕೇಶ್, ಶಾರದಾ ವಿಲಾಸ ಕಾನೂನು ಕಾಲೇಜಿನ ಡೀನ್ ಎ.ಎಂ.ಬೊಳ್ಳಮ್ಮ, ಪ್ರಾಂಶುಪಾಲ ಬಿ.ಪಿ.ಮಹೇಶ್ ಹಾಗೂ ಗಣ್ಯರು ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಭಾನುಪ್ರಕಾಶ್ ಅವರ ನಿರ್ದೇಶನದಲ್ಲಿ ಭಾರತ ಭಾಗ್ಯವಿಧಾತ ಎಂಬ ನಾಟಕವನ್ನು ಪ್ರದರ್ಶಿಸಿಲಾಯಿತು.
ಅಂಬೇಡ್ಕರ್ ಪಾತ್ರದಲ್ಲಿ ಮನೋಜ್, ಸೂತ್ರಧಾರರಾಗಿ ರಾಮಕೃಷ್ಣ ಮುರುಡಗಳ್ಳಿ, ಕಾಳಿಂಗರಾಯ, ಲವಕುಮಾರ್, ಸಹಾಯಕ ಪಾತ್ರದಲ್ಲಿ ಅಭಿನಯಿಸಿದ ಭಾಸ್ಕರ್, ಪ್ರಸನ್ನ, ಕೀರ್ತನ, ಮಧುಕಲೆ, ಪ್ರಮೋದ್ ಅವರಿಂದ ನಾಟಕ ಅದ್ಭುತವಾಗಿ ಮೂಡಿಬಂದು ಪ್ರೇಕ್ಷಕರ ಮನಸೂರೆಗೊಳ್ಳುವಲ್ಲಿ ಯಶಸ್ವಿಯಾಯಿತು.
———–—–ಶಿವು ಕೋಟೆ