ಮೈಸೂರು:ದಾನಿಗಳ ಕೊಡುಗೆಗಳ ಸದುಪಯೋಗ ಪಡಿಸಿಕೊಂಡು ಶೈಕ್ಷಣಿಕ ಪ್ರಗತಿಯಲ್ಲಿ ಗುರಿ‌ ಸಾಧಿಸಿ ವಿದ್ಯಾರ್ಥಿಗಳಿಗೆ ಉಪನಿರ್ದೇಶಕ ಜವರೇಗೌಡ ಸಲಹೆ

ಮೈಸೂರು:ಶಾಲೆ ಬೆಳವಣಿಗೆಗೆ ಕೊಡುಗೈ ದಾನಿಗಳು ಮುಂದೆ ಬರುತ್ತಿದ್ದಾರೆ‌.‌ ಅದರ ಸದುಪಯೋಗ ಪಡಿಸಿಕೊಂಡು ಶಾಲಾ ಮಕ್ಕಳು ಶೈಕ್ಷಣಿಕ ಪ್ರಗತಿಯಲ್ಲಿ ಗುರಿ‌ ಸಾಧಿಸಿ ಉತ್ತಮ ಸಾಧನೆ ಮಾಡಿ ಎಂದು ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕ ಜವರೇಗೌಡ ಹೇಳಿದರು.

ತಾಲ್ಲೂಕಿನ ರಮ್ಮನಹಳ್ಳಿ ಪಟ್ಟಣ ಪಂಚಾಯಿತಿಯ ಹಂಚ್ಯಾ ಸರ್ಕಾರಿ ಪ್ರೌಢಶಾಲೆಯಲ್ಲಿ ಸರ್ಕಾರಿ ಶಾಲೆಯ ಮಕ್ಕಳಿಗೆ ಸಾಮೂಹಿಕ ಶೌಚಾಲಯ ನೂತನ ಕೊಠಡಿಗಳು ಹಾಗೂ ಕುಡಿಯುವ ನೀರಿನ ನಲ್ಲಿಗಳ ಪುನರ್ ನವೀಕರಣ ಉದ್ಘಾಟನೆ ಹಾಗೂ ಶೈಕ್ಷಣಿಕ, ಆರೋಗ್ಯಕರ ಸಾಮಗ್ರಿಗಳ ವಿತರಣೆ ಮಾಡಿ ಅವರು ಮಾತನಾಡಿದರು.

ಇತ್ತೀಚಿನ ದಿನಗಳಲ್ಲಿ ಶಾಲೆಗಳ ಅಭಿವೃದ್ಧಿಗೆ ದಾನಿಗಳ ಕೊರತೆ ಎದುರಾಗುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ ಆರ್ ಎಲ್ ಎಚ್ ಪಿ ನೇತೃತ್ವದಲ್ಲಿ ಕ್ಲೂಬರ್ ಲೂಬ್ರಿಕೇಷನ್ ಪ್ರೈ ಲಿ. ಸದರಿ ಶಾಲೆಗಳ ಅಭಿವೃದ್ಧಿಗೆ ಶ್ರಮಿಸುತ್ತಿರುವುದು ಶ್ಲಾಘನೀಯ ಕಾರ್ಯ ಎಂದು ಸ್ಮರಿಸಿ,ಮುಂದಿನ ಸಾಲಿನಲ್ಲಿ ಮತ್ತಷ್ಟು ಶಾಲೆಗಳನ್ನು ದತ್ತು ಪಡೆದು ಅಭಿವೃದ್ಧಿ ಪಡೆಸುವಂತೆ ಕೋರಿದರು.

ಗ್ರಾಮೀಣ ಶಿಕ್ಷಣ ಮತ್ತು ಆರೋಗ್ಯ ಸಂಸ್ಥೆ ನಿರ್ದೇಶಕಿ ಸರಸ್ವತಿ ಪ್ರಾಸ್ತಾವಿಕವಾಗಿ ಮಾತನಾಡಿ, 101 ಗ್ರಂಥಾಲಯಗಳ ಕೊಡುಗೆ ನೀಡಿದ್ದು, ಶೌಚಾಲಯ ಸೇರಿ ನಾನಾ ಸೌಲಭ್ಯಗಳನ್ನು ಮೈಸೂರು, ಮಂಡ್ಯ ಭಾಗಗಳಲ್ಲಿ ವ್ಯವಸ್ಥೆ ಕಲ್ಪಿಸಲಾಗಿದೆ. ಕಳೆದ 6 ವರ್ಷಗಳಿಂದ ಹಂಚ್ಯಾ ಸರ್ಕಾರಿ ಶಾಲೆ ಅಭಿವೃದ್ಧಿ ಮಾಡುತ್ತಿದ್ದೇವೆ.ಇದರೊಟ್ಟಿಗೆ ಅಂಬೇಡ್ಕರ್, ನಿಂಗರಾಜಕಟ್ಟೆ ಶಾಲೆಗಳಲ್ಲಿಯೂ ಅಭಿವೃದ್ಧಿ ಕೆಲಸ ಮಾಡುತ್ತಿದ್ದೇವೆ. ಡಿಜಿಟಲ್ ಹಾಗೂ ಕಂಪ್ಯೂಟರ್ ಗಣನೀಕರಣ ಕೇಂದ್ರವನ್ನು ತೆರೆಯಲಾಗಿದೆ.

ಕುಡಿಯುವ ನೀರಿನ ಸೌಲಭ್ಯ, ಸೈನ್ಸ್ ತಿಳಿಸಿಕೊಡುವ ಚಿತ್ರೀಕರಣ ಮಾಡಲಾಗಿದೆ. 450 ಕ್ಕಿಂತ ಹೆಚ್ಚು ಮಕ್ಕಳು ಕಲಿಕೆಯಲ್ಲಿದ್ದಾರೆ. ಇಂತಹವರ ಅಭಿವೃದ್ಧಿಗೆ ನಿರಂತರ ಕೆಲಸ ಮಾಡುತ್ತಿದ್ದೇ ವೆಂದು ತಿಳಿಸಿದರು.

ಶಾಲಾ ಶಿಕ್ಷಣ ಇಲಾಖೆ ನಿರ್ದೇಶಕ ( ಆಡಳಿತ) ನಾಗರಾಜಯ್ಯ, ಕ್ಷೇತ್ರ ಶಿಕ್ಷಣಾಧಿಕಾರಿ ಪ್ರಕಾಶ್, ಪ್ರೌಢಶಾಲೆ ಮುಖ್ಯ ಶಿಕ್ಷಕ ಕುಮಾರ್, ಹಿರಿಯ ಪ್ರಾಥಮಿಕ ಶಾಲೆ ಮುಖ್ಯ ಶಿಕ್ಷಕ ರಾಮುಶೆಟ್ಟಿ, ಹಿರಿಯ ಪ್ರಾಥಮಿಕ ಶಾಲೆ ಎಸ್ ಡಿಎಂ ಸಿ ಅಧ್ಯಕ್ಷೆ ಎಂ.ಶ್ವೇತಾ, ಕ್ಲೂಬರ್ ಲೂಬ್ರಿಕೇಷನ್ ಕಾರ್ಯಾಕ್ರಮಾಧಿಕಾರಿ ಜತಿನ್ ಸಲ್ಡಾನ್, ಆರ್ ಎಲ್ ಎಚ್ ಪಿ ಕಾರ್ಯದರ್ಶಿ ಪ್ರೊ.ವಿ.ಕೆ.ಜೋಸ್ ಇನ್ನಿತರರು ಉಪಸ್ಥಿತರಿದ್ದರು.

————————–ಮಧುಕುಮಾರ್

Leave a Reply

Your email address will not be published. Required fields are marked *

× How can I help you?