ಹಬ್ಬ ಬಂತು ಅಂದ್ರೆ ಸಾಕು ಹೆಣ್ಣು ಮಕ್ಕಳಿಗೆ ಎಲ್ಲಿಲ್ಲದ ಸಂತೋಷ. ಹಬ್ಬಗಳಿಗೆ ಮೆರಗು ನೀಡುವುದು ಮನಮೋಹಕ ಬಣ್ಣ ಡಿಜೈನ್ ಗಳ ಸೀರೆ, ಬಟ್ಟೆಗಳು. ಅದಕ್ಕಾಗಿಯೇ ಸುಂದರ ಸೀರೆಗಳೆಂದರೆ ಪಂಚಪ್ರಾಣ ಅಂತಾರೆ ನಮ್ಮ ಮೈಸೂರಿನ ನೀರೆಯರು.
ಹೆಂಗಳೆಯರ ಮನತಣಿಸಲು ದೀಪಾವಳಿ ಹಬ್ಬದ ಪ್ರಯುಕ್ತ ನಿಮಿತ್ತ ‘ಸಿಲ್ಕ್ ಇಂಡಿಯಾ’ ವಿವಿಧ ಬಗೆಯ ರೇಷ್ಮೆ ಸೀರೆಗಳ ಮಾರಾಟ ಆರಂಭಿಸಿದೆ ಅದೂ ರಿಜೀನೆಬಲ್ ದರದಲ್ಲಿ.
ನೋಡಿದ ಕೊಡಲೇ ಮನಸ್ಸು ಒಪ್ಪುವಂತಹ ಬಟ್ಟೆ. ಎಷ್ಟು ತೆಗೆದುಕೊಂಡು ಮತ್ತೆ ಬೇಕು ಎನ್ನುವ ಹಂಬಲ. ಈ ಎಲ್ಲಾ ಕಲರ್,ಕ್ವಾಲಿಟಿ ಸಿಲ್ಕ್ ಸೀರೆಗಳು ಈಗ ನಮ್ಮ ಸಾಂಸ್ಕೃತಿಕ ನಗರಿ ಮೈಸೂರಿನ ನಂಜ ರಾಜ್ ಬಹದ್ಧುರ್ ಛತ್ರ ವಿನೋಬಾ ರಸ್ತೆಯಲ್ಲಿ ನಿಮಗೋಸ್ಕರ ಕಾದಿವೆ.
ಸಿಲ್ಕ್ ಇಂಡಿಯಾದವರು ಪ್ರದರ್ಶನಕ್ಕೆ ಮತ್ತು ಮಾರಾಟಕ್ಕೆ ಇಟ್ಟಿರುವ ಕಲರ್ ಕಲರ್ ಸೀರೆಗಳನ್ನು ನೋಡುತ್ತಾ ನಿಂತರೆ ನಮ್ಮನ್ನೆ ನಾವು ಮರೆಯುತ್ತೇವೆ. ಹೊಸ ಹೊಸ ರೀತಿಯ ಡಿಸೈನ್ ಗಳ ಮೋಡಿಯೇ ಹಾಗಿದೆ. ಅಬ್ಬಾ ಇಷ್ಟೊಂದು ವೆರೈಟಿ ಸೀರೆಗಳು ಒಂದೆ ಕಡೆ ಎಲ್ಲಾದ್ರು ಸಿಗಲು ಸಾಧ್ಯವೆ?
ಕಾಶ್ಮೀರದಿಂದ ಕಾಂಚಿಪುರಂವರೆಗಿನ ರೇಷ್ಮೆ ಸೀರೆ ಉತ್ಪಾದಕರು, ವಿನ್ಯಾಸಗಾರರು, ರೇಷ್ಮೆ ಸಹಕಾರ ಸಂಘಗಳ ಮಳಿಗೆಗಳಲ್ಲಿ ತಮ್ಮ ರಾಜ್ಯದ ಸಾಂಪ್ರದಾಯಿಕ ರೇಷ್ಮೆ ಸೀರೆ ಮತ್ತು ಉತ್ಪನ್ನಗಳನ್ನು ಪ್ರದರ್ಶಿಸಿ ಮಾರುತ್ತಿದ್ದಾರೆ. ಹಾಂ…ಕೇವಲ ರೇಷ್ಮೆ ಸೀರಗಳು ಮಾತ್ರವಲ್ಲ ಕೈಮಗ್ಗದ ಕಾಟನ್ ಸೀರೆಗಳು ಹಾಗೂ ಇತರೆ ಉತ್ಪನ್ನಗಳನ್ನು ಕಾಣಬಹುದಾಗಿದೆ.
ಪಶ್ಚಿಮ ಬಂಗಾಳದ ಕಾಟನ್ ಸೀರೆಗಳೊಂದಿಗೆ ಅನೇಕ ಆಭರಣಗಳು ಮಹಿಳೆಯರನ್ನು ಆಕರ್ಷಿಸುತ್ತಿವೆ. ಬೆಳ್ಳಿ, ಕುಂದನ್, ಮೀನಾಕರಿ, ಜವಳಿ, ಕೈಯಿಂದ ಮಾಡಿದ ವಸ್ತುಗಳು ಲಭ್ಯ.
ಇನ್ನೇಕೆ ತಡ ಗ್ರಾಹಕರೆ ಸುಂದರ ವಿನ್ಯಾಸಗಳ ಸೀರೆಗಳನ್ನು ನಿಮ್ಮದಾಗಿಸಿಕೊಳ್ಳಿ. ಮೈಸೂರಿನ ಜನತೆಗೆ ಇದೊಂದು ಸುವರ್ಣ ಅವಕಾಶ. ಹಬ್ಬಕ್ಕೆ ಬರುವ ನಿಮ್ಮ ಸಂಬಂಧಿಕರಿಗೆ ಸೀರೆಗಳನ್ನು ಉಡುಗೊರೆ ಕೊಡುವ ಮೂಲಕ ಭರ್ಜರಿಯಾಗಿ ಹಬ್ಬವನ್ನು ಆಚರಿಸಿ. ತಡ ಮಾಡದೇ ಈಗಲೇ ಹೋಗಿ ನಿಮ್ಮ ಅಚ್ಚುಮೆಚ್ಚಿನ ಡ್ರೆಸ್ ಅಥವಾ ಕಲರ್ ಫುಲ್ ಸೀರೆ ಖರೀದಿಸಿ.
ಹಾಂ… ಇನ್ನು ಸಿಲ್ಕ್ ಇಂಡಿಯಾ’ ರೇಷ್ಮೆ ಸೀರೆಗಳ ಮಾರಾಟ ಅಡ್ರೆಸ್ ಹೇಳ್ತಿವಿ ಸರಿಯಾಗಿ ಕೇಳಿಸಿಕೊಳ್ಳಿ, ನಂಜರಾಜ ಬಹದ್ದೂರ್ ಛತ್ರ, ವಿನೋಬಾ ರಸ್ತೆ ಇದೇ ಅಕ್ಟೋಬರ್ 18ರಿಂದ 27 ರ ರವರೆಗೆ ಮಾತ್ರ ಪ್ರದರ್ಶನದ ಸಮಯ ಬೆಳಿಗ್ಗೆ 10.30 ರಿಂದ ಸಂಜೆ 8.30 ರವರೆಗೆ ಹೆಚ್ಚಿನ ವಿವರಗಳಿಗೆ 9897709954 ಸಂಪರ್ಕಿಸಿ
————–ಮಧುಕುಮಾರ್