ಮೈಸೂರು-ಪದವಿ ಪರೀಕ್ಷೆಯನ್ನು ಮುಂದೂಡುವಂತೆ-ಪರೀಕ್ಷಾ ಶುಲ್ಕ ಏರಿಕೆಯನ್ನು ಹಿಂಪಡೆಯಬೇಕೆಂದು ಆಗ್ರಹಿಸಿ ವಿದ್ಯಾರ್ಥಿಗಳಿಂದ ಪ್ರತಿಭಟನೆ

ಮೈಸೂರು-ಪದವಿ ಪರೀಕ್ಷೆಯನ್ನು ಮುಂದೂಡುವಂತೆ ಹಾಗು ಪರೀಕ್ಷೆಯ ಶುಲ್ಕ ಏರಿಕೆಯನ್ನು ಹಿಂಪಡೆಯಬೇಕೆಂದು ಆಗ್ರಹಿಸಿ ಎ.ಐ.ಡಿ.ಎಸ್.ಓ ವಿದ್ಯಾರ್ಥಿ ಸಂಘಟನೆ ನೇತೃತ್ವದಲ್ಲಿ ಕ್ರಾಫರ್ಡ್ ಮುಂದೆ ನೂರಾರು ವಿದ್ಯಾರ್ಥಿಗಳು ಪ್ರತಿಭಟನೆಯನ್ನು ಮಾಡಿದರು.

ಪ್ರತಿಭಟನೆಯನ್ನು ಉದ್ದೇಶಿಸಿ ಜಿಲ್ಲಾ ಅಧ್ಯಕ್ಷರಾದ ಚಂದ್ರಕಲಾ ಮಾತನಾಡಿ, ಮೈಸೂರು ವಿಶ್ವವಿದ್ಯಾನಿಲಯದ ಯುಜಿ ವಿದ್ಯಾರ್ಥಿಗಳ ಎಕ್ಸಾಮ್ ನೋಟಿಫಿಕೇಶನ್ ಪ್ರಕಾರ ನವೆಂಬರ್ 15ರಿಂದ ಪರೀಕ್ಷೆಗಳು ಪ್ರಾರಂಭವಾಗಲಿದೆ ಎಂದು ತಿಳಿಸಿದ್ದಾರೆ.ಆದರೆ ಕಾಲೇಜುಗಳು ಆಗಸ್ಟ್ ನಲ್ಲೆ ಪ್ರಾರಂಭವಾದರೂ ಅತಿಥಿ ಉಪನ್ಯಾಸಕರ ಕೊರತೆಯಿಂದಾಗಿ ಮತ್ತು ಅತಿಥಿ ಉಪನ್ಯಾಸಕರ ನೇಮಕವಾಗಿಲ್ಲದ ಕಾರಣ ತರಗತಿಗಳು ನಡೆದಿಲ್ಲ.ಒಂದುವರೆ ತಿಂಗಳಿನ ನಂತರ ತರಗತಿಗಳು ಪ್ರಾರಂಭವಾಗಿವೆ.ಇದರಿಂದ ಪಠ್ಯಕ್ರಮಗಳ ಬೋಧನೆ ಸಂಪೂರ್ಣವಾಗಿ ಮುಗಿದಿಲ್ಲ. ಪಠ್ಯಕ್ರಮ ಪೂರ್ಣಗೊಳ್ಳದೆ ಪರೀಕ್ಷೆ ನಡೆಸುವುದು ಅವೈಜ್ಞಾನಿಕ ಅಲ್ಲದೆ ಇದು ವಿದ್ಯಾರ್ಥಿಗಳ ಮೇಲೆ ಒತ್ತಡವನ್ನು ಉಂಟುಮಾಡುತ್ತದೆ ಆದ್ದರಿಂದ ಪರೀಕ್ಷೆಗಳನ್ನು ಮುಂದೂಡಬೇಕು ಎಂದು ಆಗ್ರಹಿಸಿದರು.

ಪದವಿ ಪರೀಕ್ಷೆಯ ಶುಲ್ಕವನ್ನು ಪ್ರತಿ ವರ್ಷವೂ ಮನಸ್ಸೋ ಇಚ್ಛೆ ಏರಿಕೆ ಮಾಡಲಾಗುತ್ತಿದೆ. ಸರ್ಕಾರಿ ಪದವಿ ಕಾಲೇಜುಗಳನ್ನು ಅರಸಿ ಬರುವವರು ಬಡ ವಿದ್ಯಾರ್ಥಿಗಳು ಆದರೆ ಆ ವಿದ್ಯಾರ್ಥಿಗಳಿಂದ 2000ಪರೀಕ್ಷಾ ಶುಲ್ಕವನ್ನು ಸಂಗ್ರಹ ಮಾಡಲಾಗುತ್ತಿದೆ.ತೃತೀಯ ಸೆಮಿಸ್ಟರ್ ಓದುತ್ತಿರುವ ಮತ್ತು ಪದವಿಯನ್ನೇ ಮುಗಿಸಿರುವ ವಿದ್ಯಾರ್ಥಿಗಳಿಗೆ ಯಾವುದೇ ಸೆಮಿಸ್ಟರ್ ನ ಅಂಕಪಟ್ಟಿಯೇ ಸಿಕ್ಕಿಲ್ಲ.ಆದರೂ ಅಂಕಪಟ್ಟಿಯ ಶುಲ್ಕವನ್ನು ಪ್ರತಿ ವರ್ಷವೂ ಕಟ್ಟಿಸಿಕೊಳ್ಳುತ್ತಿದ್ದಾರೆ ಎಂದು ದೂರಿದರು.

ಹೆಚ್ಚುವರಿ ಶುಲ್ಕ ಏರಿಕೆಯನ್ನು ತಕ್ಷಣಕ್ಕೆ ಹಿಂಪಡೆಯಬೇಕು.ಪರೀಕ್ಷೆಯನ್ನು ಮುಂದೂಡಬೇಕು ಹಾಗು ವಿದ್ಯಾರ್ಥಿಗಳಿಗೆ ಸರಿಯಾದ ಸಮಯಕ್ಕೆ ಅಂಕಪಟ್ಟಿಗಳನ್ನು ವಿತರಿಸಬೇಕು ಎಂದು ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ಜಿಲ್ಲಾ ಕಾರ್ಯದರ್ಶಿ ನಿತಿನ್ ಉಪಾಧ್ಯಕ್ಷೆ ಸ್ವಾತಿ ಪದಾಧಿಕಾರಿಗಳಾದ ಹೇಮ, ಅಂಜಲಿ, ಅಭಿಷೇಕ್ ಮತ್ತು ಮಹಾರಾಜ, ಮಹಾರಾಣಿ ಕಾಲೇಜಿನ ವಿದ್ಯಾರ್ಥಿಗಳಾದ ಗುರುರಾಜ್, ಸತೀಶ್, ಸಂತೋಷ್, ಜ್ಞಾನೇಶ್, ಹರ್ಫತ್, ಭೂಮಿಕ, ಅರ್ಚನಾ ಹಾಗೂ ವಿವಿಧ ಕಾಲೇಜಿನ ವಿದ್ಯಾರ್ಥಿಗಳು ಭಾಗವಹಿಸಿದ್ದರು.

————ಶಿವು ಕೋಟೆ

Leave a Reply

Your email address will not be published. Required fields are marked *

× How can I help you?