ಮೈಸೂರು-ನಗರದ ಕಾಳಿದಾಸ ರಸ್ತೆಯಲ್ಲಿರುವ ಇತಿಹಾಸ ಪ್ರಸಿದ್ಧ ಶ್ರೀ ಯದುಗಿರಿ ಯತಿರಾಜ ಮಠ, ಮೈಸೂರು ಶಾಖೆಯ ಶ್ರೀ ಲಕ್ಷ್ಮಿ ನರಸಿಂಹ ಸ್ವಾಮಿ ದೇವಸ್ಥಾನದಲ್ಲಿ ಡಿ.26ರಂದು ಗುರುವಾರ ‘ಸ್ವಾತಿ’ ನಕ್ಷತ್ರದ ಪ್ರಯುಕ್ತ ವಿಶೇಷ ಪೂಜೆ ಆಯೋಜಿಸಲಾಗಿದೆ.
ಅಂದು ಬೆಳಿಗ್ಗೆ 8ಕ್ಕೆ ಸಂಕಲ್ಪ,9ಕ್ಕೆ ಅಭಿಷೇಕ, 10.30ಕ್ಕೆ ಅಲಂಕಾರ,11.30ಕ್ಕೆ ಮಹಾಮಂಗಳಾರತಿ, ಮಧ್ಯಾಹ್ನ 12.30ಕ್ಕೆ ಶಾತ್ತುಮೊರೈ, 1 ಗಂಟೆಗೆ ತೀರ್ಥ ಪ್ರಸಾದ ವಿನಿಯೋಗವನ್ನು ಏರ್ಪಡಿಸಲಾಗಿದೆ (ಧನುರ್ಮಾಸದ ಪ್ರಯುಕ್ತ ಸಂಜೆ ಪ್ರಾಕಾರೋತ್ಸವ ಇರುವುದಿಲ್ಲ) ಎಂದು ದೇವಸ್ಥಾನದ ಪ್ರಧಾನ ವ್ಯವಸ್ಥಾಪಕ ವಿದ್ವಾನ್ ಕೆ.ಆರ್.ಯೋಗಾನ ರಸಿಂಹನ್ (ಮುರುಳಿ ಅಯ್ಯಂಗಾರ್) ತಿಳಿಸಿದ್ದಾರೆ.
ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಸ್ವಾಮಿಯ ಕೃಪೆಗೆ ಪಾತ್ರರಾಗಬೇಕೆಂದು ಕೋರಿದ್ದಾರೆ. ಮಾಹಿತಿ ಮೊಬೈಲ್ 9342188323, 7598832271ಸಂಪರ್ಕಿಸಬಹುದು.