ಮೈಸೂರು-ಕಂಚಿನ ಕಂಠದ ನಟ ವಶಿಷ್ಠ ಸಿಂಹರವರು ಮೈಸೂರು ಜಿಲ್ಲೆಯವರು ಎಂಬುದು ನಮಗೆ ಸಂತಸದ ವಿಷಯ.ಅತ್ಯಂತ ಮಾನವೀಯತೆಯ ಕಲಾವಿದರಾದ ಇವರು,ಕೋವಿಡ್ ಲಾಕ್ ಡೌನ್ ಸಮಯದಲ್ಲಿ ಬಡವರಿಗೆ,ಆಟೋ ಚಾಲಕರಿಗೆ,ಬಡ ಕಲಾವಿದರು ಸೇರಿದಂತೆ ಕೂಲಿಕಾರ್ಮಿಕರಿಗೆ ಫುಡ್ ಕಿಟ್ ಗಳ ಜೊತೆಗೆ ಆರ್ಥಿಕವಾಗಿಯೂ ಸಹಾಯ ಮಾಡಿ ಮಾನವೀಯತೆ ಮೆರೆದಿದ್ದರು ಎಂದು ವಸಿಷ್ಠ ಸಿಂಹ ಸ್ನೇಹ ಬಳಗದ ಅಧ್ಯಕ್ಷ ಬೈರತಿ ಲಿಂಗರಾಜು ತಿಳಿಸಿದರು.
ನಗರದ ವಿಜಯನಗರದಲ್ಲಿರುವ ಸವಿ ನೆನಪು ಫೌಂಡೇಶನ್ ಸೇವಾಶ್ರಮದಲ್ಲಿ ನಾಯಕ ನಟ ವಸಿಷ್ಟ ಸಿಂಹ ರವರ ಜನ್ಮ ದಿನದ ಪ್ರಯುಕ್ತ ಮಕ್ಕಳ ಜೊತೆ ಕೇಕ್ ಕಟ್ ಮಾಡಿ ನಂತರ ಮಕ್ಕಳಿಗೆ ಉಪಹಾರ ನೀಡಿ ನೆಚ್ಚಿನ ನಟನ ಜನ್ಮದಿನವನ್ನು ಅರ್ಥಪೂರ್ಣವಾಗಿ ಆಚರಿಸಿ ಅವರು ಮಾತನಾಡಿದರು.
ಪ್ರತಿ ವರ್ಷದಂತೆ ಈ ವರ್ಷವೂ ಸಹ ಅವರ ಹುಟ್ಟುಹಬ್ಬವನ್ನು ಅರ್ಥಪೂರ್ಣವಾಗಿ ಆಚರಿಸುವ ನಿಟ್ಟಿನಲ್ಲಿ ಸೇವಾಶ್ರಮ ಮಕ್ಕಳ ಜೊತೆ ಸೇರಿ ಸಂಭ್ರಮಿಸುತ್ತಿದ್ದೇವೆ.ನಾಡದೇವತೆ ಚಾಮುಂಡೇಶ್ವರಿ ವಶಿಷ್ಠ ಸಿಂಹ ರವರಿಗೆ ವೃತ್ತಿಯಲ್ಲಿ ದೊಡ್ಡ ಮಟ್ಟದ ಗೆಲುವನ್ನು ನೀಡಲಿ ಎಂದು ಪ್ರಾರ್ಥಿಸಿರುವುದಾಗಿಯೂ ಅವರು ತಿಳಿಸಿದರು.
ಮಾನವ ಹಕ್ಕುಗಳ ರಕ್ಷಣೆ ಹಾಗೂ ಭ್ರಷ್ಟಾಚಾರ ನಿರ್ಮೂಲ ಸೇವಾ ಸಮಿತಿಯ ಜಿಲ್ಲಾಧ್ಯಕ್ಷರಾದ ಆರ್ ವಿನೋದ್ ಮಾತನಾಡಿ,ವಶಿಷ್ಟ ಸಿಂಹ ರವರ ಹುಟ್ಟು ಹಬ್ಬವನ್ನು ಯಾವುದೇ ತರಹದ ಆಡಂಬರವಿಲ್ಲದೆ ಇಂತಹ ಮಕ್ಕಳ ಜೊತೆ ಆಚರಿಸುತ್ತಿರುವುದು ನಿಜಕ್ಕೂ ಶ್ಲಾಘನೀಯ.
ಚಿತ್ರನಟರ ಅಭಿಮಾನಿಗಳು ದುಂದುವೆಚ್ಚ ಮಾಡಿ ಜನ್ಮ ದಿನಾಚರಣೆ ಆಚರಿಸುವ ಬದಲು ಸೇವಾ ಮನೋಭಾವ ಇಟ್ಟುಕೊಂಡು ಸೇವೆಯನ್ನೇ ಗುರಿ ಮಾಡಿಕೊಂಡು ಕೆಲಸ ಮಾಡಿದರೆ ನಿಜಕ್ಕೂ ಅದು ಆ ನಟರಿಗೂ ಮತ್ತು ಅವರ ಅಭಿಮಾನಿಗಳಿಗೂ ಕೀರ್ತಿ ತಂದುಕೊಡುತ್ತದೆ ಎಂದರು.
ಭ್ರಷ್ಟಾಚಾರ ನಿರ್ಮೂಲ ಸೇವಾ ಸಮಿತಿ ಮೈಸೂರು ಇದರ ಮಹಿಳಾ ಘಟಕದ ಜಿಲ್ಲಾಧ್ಯಕ್ಷರಾದ ಆರ್ ಯಶೋಧ, ಚೆಲುವರಾಜ್ ನಾಯಕ್, ಮಹಾನ್ ಶ್ರೇಯಸ್, ಮೋಹನ್ ಕುಮಾರ್, ಮೋಹನ್, ರಕ್ಷು ಆಚಾರ್, ವಿಶಾಲ್, ಸಾಯಿ ಕೃಷ್ಣ, ಕೌಶಿಕ್ ಹಾಗೂ ಅಭಿಮಾನಿಗಳು ಹಾಜರಿದ್ದರು.
——————–ಮಧುಕುಮಾರ್