ನಾಗಮಂಗಲ-15 ಸಾವಿರ ಲಂಚಕೋರ ಆರೋಪ-ನಾಗಮಂಗಲ ಉಪನೋಂದಣಾಧಿಕಾರಿ ಕಛೇರಿಯ ದ್ವಿತೀಯ ದರ್ಜೆ ಗುಮಾಸ್ತನ ವಿರುದ್ಧ ಕಠಿಣ ಕ್ರಮಕ್ಕೆ ಕರವೇ ಆಗ್ರಹ

ನಾಗಮಂಗಲ: ಋಣಭಾರ ಪತ್ರ ಮತ್ತು ಕ್ರಯಪತ್ರದ ದೃಢೀಕೃತ ನಕಲು ಪತ್ರವನ್ನು ಪ್ರತಿಯನ್ನು ಪಡೆಯಲು 15 ಸಾವಿರ ಲಂಚವನ್ನು ಕೇಳಿದ ನಾಗಮಂಗಲ ಉಪನೋಂದಣಾಧಿಕಾರಿ ಕಛೇರಿಯಲ್ಲಿ ಕಛೇರಿಯಲ್ಲಿ ದ್ವಿತೀಯ ದರ್ಜೆ ಸಹಾಯಕನಾಗಿ ಕರ್ತವ್ಯ ನಿರ್ವಹಿಸುತ್ತಿರುವ ಕೆ.ಎಸ್. ಮಹೇಶ್ ಎಂಬ ನೌಕರನ ವಿರುದ್ಧ ಕಾನೂನು ರೀತಿಯಲ್ಲಿ ಕ್ರಮವನ್ನು ಕೈಗೊಳ್ಳಬೇಕು ಎಂದು ಕರವೇ ಸ್ವಾಭಿಮಾನಿ ಸೇನೆ ತಾಲ್ಲೂಕು ಅಧ್ಯಕ್ಷ ಹರೀಶ್ ಎನ್. ಗೌಡ ಅವರು ಮಂಡ್ಯ ಜಿಲ್ಲಾ ನೋಂದಣಾಧಿಕಾರಿಗಳಿಗೆ ದೂರನ್ನು ನೀಡಲಾಗಿದೆ ಎಂದು ಹೇಳಿದರು.

ನಾಗಮಂಗಲ ತಾಲ್ಲೂಕಿನ ಕರವೇ ಸ್ವಾಭಿಮಾನಿ ಸೇನೆ ತಾಲ್ಲೂಕು ಅಧ್ಯಕ್ಷ ಹರೀಶ್ ಎನ್. ಗೌಡ ಅವರು ಸುದ್ದಿಗಾರರೊಂದಿಗೆ ಮಾತನಾಡುತ್ತ, 2025 ಏಪ್ರಿಲ್ ತಿಂಗಳ 29 ರಂದು ಹೆಚ್. ಮಂಜುನಾಥ್ ಎಂಬುವರು 26 ಋಣಭಾರ ಪತ್ರಗಳನ್ನು ಪಡೆಯಲು ಮತ್ತು ಅದೇ ದಿನ 1979ನೇ ಇಸವಿಯ ಕ್ರಯಪತ್ರದ ದೃಢೀಕೃತ ನಕಲನ್ನು ಪಡೆಯಲು ಸೈಬರ್ ಸೆಂಟರ್ ನಲ್ಲಿ ಅರ್ಜಿ ಸಲ್ಲಿಸಿದ್ದು, ಸದರಿ ಅರ್ಜಿಗಳು ಸ್ವೀಕೃತವಾಗಿರುತ್ಚದೆ.

2025 ಮೇ ತಿಂಗಳ 2 ರಂದು ಋಣಭಾರ ಪತ್ರವನ್ನು ಪಡೆಯಲು ಪ್ರಭಾರ ಉಪನೋಂದಣಾಧಿಕಾರಿ ಕೆ.ಎಸ್. ಮಹೇಶ್ ಅವರನ್ನು ಸಂಪರ್ಕಿಸಿದಾಗ ಋಣಭಾರ ಪತ್ರ ಮತ್ತು 1979 ನೇ ಇಸವಿಯ ಕ್ರಯಪತ್ರದ ನಕಲುಗಳನ್ನು ನೀಡಲು 15 ಸಾವಿರ ಹಣವನ್ನು ಲಂಚವನ್ನು ಕೊಡಬೇಕು ಎಂದು ಕೇಳಿದ್ದಾರೆ.

ಹೆಚ್. ಮಂಜುನಾಥ್ ಅವರು ಹಣವನ್ನು ಕೊಡಲು ನಿರಾಕರಿಸಿದಾಗ ಪ್ರಭಾರ ಉಪನೋಂದಣಾಧಿಕಾರಿ ಕೆ.ಎಸ್. ಮಹೇಶ್ ಋಣಭಾರ ಪತ್ರ ಮತ್ತು ಕ್ರಯಪತ್ರದ ದೃಢೀಕರಣ ಪತ್ರದ ನಕಲನ್ನು ಹೆಚ್. ಮಂಜುನಾಥ್ ಅವರಿಗೆ ನೀಡಿರುವುದಿಲ್ಲ.

ಮಂಡ್ಯ ಜಿಲ್ಲಾ ನೋಂದಣಾಧಿಕಾರಿಗಳು ನಾಗಮಂಗಲ ಪ್ರಭಾರ ಉಪನೋಂದಣಾಧಿಕಾರಿ ಕೆ.ಎಸ್ ಮಹೇಶ್ ಗೆ ಋಣಭಾರ ಪತ್ರ ಮತ್ತು ಕ್ರಯಪತ್ರದ ದೃಢೀಕರಣ ಪತ್ರದ ನಕಲನ್ನು ನೀಡಲು ಸೂಚನೆ ನೀಡಿದ್ದರೂ 15 ಸಾವಿರ ಹಣವನ್ನು ಕೊಡದಿದ್ದರೆ ಋಣಭಾರ ಪತ್ರ ಮತ್ತು ಕ್ರಯಪತ್ರದ ದೃಢೀಕರಣ ಪತ್ರದ ನಕಲನ್ನು ನೀಡಲು ನಿರಾಕರಿಸಿ ನನ್ನ ಯಾರು ಏನು ಮಾಡಿ ಕೊಳ್ಳಲು ಆಗುವುದಿಲ್ಲ,

ನಾನು ಸಹ ಸರ್ಕಾರಿ ನೌಕರರ ಸಂಘದ ನಿರ್ದೇಶಕನಾಗಿದ್ದು, ಮಂಡ್ಯ ಜಿಲ್ಲಾ ನೋಂದಣಾಧಿಕಾರಿಗಳಿಗೆ ಮತ್ತು ಜಿಲ್ಲಾ ಕಛೇರಿಯಲ್ಲಿ ಪ್ರಥಮ ದರ್ಜೆ ಗುಮಾಸ್ತರಾಗಿ ಕರ್ತವ್ಯ ನಿರ್ವಹಿಸುತ್ತಿರು ಕೋಮಲ್ ಎಂಬುವವರಿಗೆ ಪ್ರತಿ ತಿಂಗಳು ವಂತಿಕೆ ನೀಡುತ್ತಿದ್ದೇನೆ.

ಆದ್ದರಿಂದ ನಾನು 15 ವರ್ಷಗಳಿಂದ ದ್ವಿತೀಯ ದರ್ಜೆ ಗುಮಾಸ್ತನಾಗಿದ್ದರೂ ಸಹ ಹಲವು ವರ್ಷಗಳಿಂದ ನಾಗಮಂಗಲದಲ್ಲಿ ಉಪನೋಂದಣಾಧಿಕಾರಿಯಾಗಿ ಕರ್ತವ್ಯವನ್ನು ನಿರ್ವಹಿಸುತ್ತಿದ್ದೀನಿ, ನಿಮ್ಮ ಕೆಲಸವನ್ನು ಮಾಡಲು ನಾನು ಕೇಳಿದಷ್ಟು ಹಣವನ್ನು ಕೊಟ್ಟರೆ ಮಾತ್ರ ನಿಮ್ಮ ಕೆಲಸವನ್ನು ಮಾಡಿ ಕೊಡುತ್ತೇನೆ ಎಂದು ತುಂಬಾ ಬೇಜವಾಬ್ದಾರಿಯಿಂದ ಉತ್ತರವನ್ನು ನೀಡುತ್ತಾರೆ.

ಸಾರ್ವಜನಿಕರು ಹಣವನ್ನು ಕೊಟ್ಟರೆ ಉಪನೋಂದಣಾಧಿಕಾರಿ ಕಛೇರಿಯಲ್ಲಿ ಸಾರ್ವಜನಿಕರ ಕೆಲಸಗಳನ್ನು ಮಾಡಿ ಕೊಡುತ್ತೀನಿ. ನನಗೆ ಹಣವನ್ನು ಕೊಡಲಿಲ್ಲ ಎಂದರೆ ಹೊರಗಡೆಯಿಂದ ಹುಡುಗರನ್ನು ಕರೆದು ನಿಮ್ಮನ್ನು ಕಛೇರಿಯಿಂದ ಹೊರಗೆ ಹಾಕಲಾಗುವುದರ ಜೊತೆಗೆ ಜೀವ ಬೆದರಿಕೆಯನ್ನು ಮಹೇಶ್ ಹಾಕುತ್ತಿದ್ದಾರೆ.

ಇದೇ ಕಛೇರಿಯಲ್ಲಿ ಸಾರ್ವಜನಿಕರಿಂದ ಹಣವನ್ನು ವಸೂಲಿ ಮಾಡಲು ಕೆ‌.ಎಸ್. ಮಹೇಶ್ ಅವರ ಸ್ವಂತ ಬಾಮೈದನಾದ ಪುನೀತ್ ಎಂಬ ವ್ಯಕ್ತಿಯನ್ನು ಉಪನೋಂದಣಾಧಿಕಾರಿ ಕಛೇರಿಯಲ್ಲಿ ಇಟ್ಟುಕೊಂಡು ಸಾರ್ವಜನಿಕರಿಂದ ಹಣವನ್ನು ವಸೂಲಿ ಮಾಡುತ್ತಿದ್ದಾರೆ.

ಈಗಾಗಲೇ ಇಂತಹ ಭ್ರಷ್ಟ ಅಧಿಕಾರಿ ಕೆ.ಎಸ್ ಮಹೇಶ್ ವಿರುದ್ಧ ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ, ಕಂದಾಯ ಸಚಿವ ಕೃಷ್ಣಭೈರೇಗೌಡ, ಬೆಂಗಳೂರಿನ ನೋಂದಣಿ ಮಹಾನಿರ್ದೇಶಕರ ಕಛೇರಿ, ಮಂಡ್ಯ ಜಿಲ್ಲಾಧಿಕಾರಿಗಳಿಗೆ, ಮಂಡ್ಯ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ, ಮಂಡ್ಯ ಲೋಕಾಯುಕ್ತ ಅಧಿಕಾರಿಗಳಿಗೆ ಹಾಗೂ ಮಂಡ್ಯ ಜಿಲ್ಲಾ ನೋಂದಣಾಧಿಕಾರಿ ಅವರಿಗೆ ನಾಗಮಂಗಲದಲ್ಲಿ ಪ್ರಭಾರ ಉಪನೋಂದಣಾಧಿಕಾರಿ ಕರ್ತವ್ಯವನ್ನು ನಿರ್ವಹಿಸುತ್ತಿರುವ ಕೆ.ಎಸ್. ಮಹೇಶ್ ವಿರುದ್ಧ ದೂರನ್ನು ನೀಡಲಾಗಿದೆ.

ಕೆ.ಎಸ್ ಮಹೇಶ್ ಈ ಕಛೇರಿಯಲ್ಲಿ ಸುಮಾರು 15 ವರ್ಷಗಳಿಂದ ದ್ವಿತೀಯ ದರ್ಜೆ ಗುಮಾಸ್ತ ನಾಗಿದ್ದರೂ ಸಹ ಪ್ರಭಾರ ಉಪನೋಂದಣಾಧಿಕಾರಿಯಾಗಿ ಕರ್ತವ್ಯವನ್ನು ನಿರ್ವಹಿಸುತ್ತಿದ್ದು. ನಾಗಮಂಗಲಕ್ಕೆ ಖಾಯಂ ಆಗಿ ಉಪನೋಂದಣಾಧಿಕಾರಿ ಅಧಿಕಾರಿಗಳು ಬಂದರೆ ಅವರನ್ನು ಈ ಕಛೇರಿಯಲ್ಲಿ ಹೆಚ್ಚು ತಿಂಗಳು ಕಾಲ ಈ ಕಛೇರಿಯಲ್ಲಿ ಸೇವೆ ಮಾಡಲು ಬಿಡುವುದಿಲ್ಲ. ಆದ್ದರಿಂದ ಇಂತಹ ಭ್ರಷ್ಟ ಅಧಿಕಾರಿ ಕೆ.ಎಸ್. ಮಹೇಶ್ ಎಂಬ ನೌಕರನ್ನು ಸೇವೆಯಿಂದ ಅಮಾನತು ಮಾಡಿ , ನಾಗಮಂಗಲ ತಾಲ್ಲೂಕಿಗೆ ಖಾಯಂ ಉಪನೋಂದಣಾಧಿಕಾರಿಯನ್ನು ನೇಮಕ ಮಾಡಬೇಕು ಎಂದು ಸರ್ಕಾರಕ್ಕೆ ಈ ಮೂಲಕ ಮನವಿ ಮಾಡಿಕೊಳ್ಳಲಾಗುವುದು.

ನಾಗಮಂಗಲ ತಾಲ್ಲೂಕಿನಲ್ಲಿ ಪ್ರಭಾರ ಉಪನೋಂದಣಾಧಿಕಾರಿಯಾಗಿ ಕರ್ತವ್ಯವನ್ನು ನಿರ್ವಹಿಸುತ್ತಿರುವ ಕೆ. ಎಸ್. ಮಹೇಶ್ ಮೇಲೆ ಸಂಬಂಧ ಪಟ್ಟ ಅಧಿಕಾರಿಗಳು ಕ್ರಮಗಳನ್ನು ಕೈಗೊಳ್ಳದಿದ್ದರೆ ಕರವೇ ಸ್ವಾಭಿಮಾನಿ ಸೇನೆ ವತಿಯಿಂದ ಉಗ್ರವಾದ ಪ್ರತಿಭಟನೆ ಮಾಡಲಾಗುವುದು ಎಂದು ಕರವೇ ಸ್ವಾಭಿಮಾನಿ ಸೇನೆ ತಾಲ್ಲೂಕು ಅಧ್ಯಕ್ಷ ಕೆ.ಎನ್. ಹರೀಶ್ ಎನ್. ಗೌಡ ತಿಳಿಸಿದರು.

ಕರವೇ ಸ್ವಾಭಿಮಾನಿ ಸೇನೆ ಪದಾಧಿಕಾರಿಗಳಾದ ಹೆಚ್. ಮಂಜುನಾಥ್. ವಕೀಲ ಎಂ.ಪಿ.ಪ್ರಭುಸ್ವಾಮಿ. ಕೃಷ್ಣೇಗೌಡ ಹಾಗೂ ಇತರರು ಉಪಸ್ಥಿತರಿದ್ದರು.

– ಬಿ.ಹೆಚ್. ರವಿ, ನಾಗಮಂಗಲ

Leave a Reply

Your email address will not be published. Required fields are marked *

× How can I help you?