ನಾಗಮಂಗಲ-ಅಂಗನವಾಡಿ ವಿವಿಧ ಹುದ್ದೆಗಳು-ಅಪೂರ್ಣ ಅರ್ಜಿಗಳ ಮರು ಸಲ್ಲಿಕೆಗೆ ಅವಕಾಶ

ನಾಗಮಂಗಲ:ಸಮಗ್ರ ಶಿಶು ಅಭಿವೃದ್ಧಿ ಯೋಜನೆ ಇಲಾಖೆಯಲ್ಲಿ ಅಂಗನವಾಡಿ ಕಾರ್ಯಕರ್ತೆ ಮತ್ತು ಅಂಗನವಾಡಿ ಸಹಾಯಕಿಯರ ಹುದ್ದೆಗಳಿಗೆ ಆನ್ಲೈನ್ ಮೂಲಕ ಸಲ್ಲಿಸಿದ್ದ ಅರ್ಜಿಗಳು ಅಪೂರ್ಣಗಿದ್ದು, ಈ ಅರ್ಜಿಗಳನ್ನು ಪೂರ್ಣಗೊಳಿಸಲು 2025ರ ಜನವರಿ ತಿಂಗಳ 5ನೇ ವರೆಗೂ ಪೂರ್ಣಗೊಳಿಸಲು ಅವಕಾಶ ಕಲ್ಪಿಸಲಾಗಿದೆ ಎಂದು ಶಿಶು ಅಭಿವೃದ್ಧಿ ಯೋಜನಾಧಿಕಾರಿ ಎನ್. ಸಿ.ಕೃಷ್ಣಮೂರ್ತಿರವರು ತಿಳಿಸಿದ್ದಾರೆ.

ಸಮಗ್ರ ಶಿಶು ಅಭಿವೃದ್ಧಿ ಯೋಜನೆ ನಾಗಮಂಗಲ ತಾಲ್ಲೂಕಿನ ವ್ಯಾಪ್ತಿಯಲ್ಲಿ ಖಾಲಿಯಾಗಿದ್ದ ಹುದ್ದೆಗಳಲ್ಲಿ 1 ಅಂಗನವಾಡಿ ಕಾರ್ಯಕರ್ತೆ, 12 ಮಿನಿ ಅಂಗನವಾಡಿ ಕಾರ್ಯಕರ್ತೆ ಮತ್ತು 39 ಅಂಗನವಾಡಿ ಸಹಾಯಕಿಯರ ಹುದ್ದೆಗಳನ್ನು ಭರ್ತಿ ಮಾಡುವ ಸಲುವಾಗಿ 2024 ಆಗಸ್ಟ್ ತಿಂಗಳ 22 ರಂದು ಆನ್ಲೈನ್ ಮೂಲಕ ಅರ್ಜಿ ಆಹ್ವಾನಿಸಲು ಪ್ರಕಟಣೆ ಹೊರಡಿಸಿ, ಅರ್ಜಿಯನ್ನು ಸಲ್ಲಿಸಲು 2024ರ ಸೆಪ್ಟೆಂಬರ್ ತಿಂಗಳ 20 ರಂದು ಕೊನೆಯ ದಿನಾಂಕವನ್ನು ನಿಗಧಿಪಡಿ ಸಲಾಗಿತ್ತು.

ಅರ್ಜಿಯನ್ನು ಸಲ್ಲಿಸಲು ನಾಲ್ಕು ಹಂತಗಳಿದ್ದು, ಅದರಲ್ಲಿ ಕೆಲವು ಅಭ್ಯರ್ಥಿಗಳು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸುವ ಸಂದರ್ಭದಲ್ಲಿ ನಾಲ್ಕು ಹಂತಗಳನ್ನು ಪೂರ್ಣಗೊಳಿಸದೇ ಇರುವುದರಿಂದ ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸುವ ಪ್ರಕ್ರಿಯೆ ಪೂರ್ಣಗೊಂಡಿರುವುದಿಲ್ಲ

ಅಂತಹ ಅಭ್ಯರ್ಥಿಗಳಿಗೆ ಮಾತ್ರ ಆನ್ಲೈನ್ ಮೂಲಕ ಅರ್ಜಿಗಳನ್ನು ಸಲ್ಲಿಸುವ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ಮಂಡ್ಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಧಿಸೂಚನೆಯಂತೆ ದಿನಾಂಕ 26-12-2024 ರಿಂದ 05-01-2025 ರವರೆಗೆ ಆನ್ಲೈನ್ ವೆಬ್ಸೈಟ್ ವಿಳಾಸ https://karnemakaone.kar.nic.in/abcd/ ಈ ಮೂಲಕ ಅರ್ಜಿಗಳನ್ನು ಪೂರ್ಣ ಗೊಳಿಸಲು ಅವಕಾಶವನ್ನು ಕಲ್ಪಿಸಲಾಗಿದೆ ಎಂದು ಉಪ ನಿರ್ದೇಶಕರು ತಿಳಿಸಿರುತ್ತಾರೆ.

ಆದ್ದರಿಂದ ಈ ಪ್ರಕಟಣೆಯಲ್ಲಿ ಲಗತ್ತಿಸಿರುವ ಪಟ್ಟಿಯಲ್ಲಿನ ಅಂಗನವಾಡಿ ಕಾರ್ಯಕರ್ತೆ, ಮಿನಿ ಅಂಗನವಾಡಿ ಕಾರ್ಯಕರ್ತೆ ಹಾಗೂ ಅಂಗನವಾಡಿ ಸಹಾಯಕಿಯರ ಹುದ್ದೆಗೆ ಅರ್ಜಿ ಸಲ್ಲಿಸಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಕೆ ಪ್ರಕ್ರಿಯೆಗಳು ಅಪೂರ್ಣಗೊಂಡಿರುವ ಕಾರಣ ಸದರಿ ಅಭ್ಯರ್ಥಿಗಳು ತಮ್ಮ ಅರ್ಜಿಗಳನ್ನು ಕೂಡಲೇ ಪೂರ್ಣಗೊಳಿಸಲು ಈ ಮೂಲಕ ತಿಳಿಸಲಾಗಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ನಾಗಮಂಗಲ ಪಟ್ಟಣದ ಆಡಳಿತದ ಸೌಧದಲ್ಲಿ ಇರುವ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಛೇರಿಯಲ್ಲಿ ಕರ್ತವ್ಯದ ವೇಳೆಯಲ್ಲಿ ಸಂಪರ್ಕಿಸಬೇಕಾಗಿದೆ.

ಆದರೆ ಅರ್ಜಿಗಳನ್ನು ಸಲ್ಲಿಸದೇ ಇರುವವರು ಹೊಸದಾಗಿ ಅರ್ಜಿಗಳನ್ನು ಸಲ್ಲಿಸಲು ಅವಕಾಶ ಇರುವುದಿಲ್ಲ ಎಂದು ಶಿಶು ಅಭಿವೃದ್ಧಿ ಯೋಜನಾಧಿಕಾರಿ ಎನ್. ಸಿ. ಕೃಷ್ಮಮೂರ್ತಿರವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವರದಿ: ಬಿ.ಹೆಚ್. ರವಿ

Leave a Reply

Your email address will not be published. Required fields are marked *

× How can I help you?