ನಾಗಮಂಗಲ : ಜಾತಿ ಮನಸ್ಥಿತಿಯಿಂದ ಹೊರಬಂದು ಹಿಂದೂಗಳು ಒಟ್ಟಾದರೆ ಭಾರತ ವಿಶ್ವಗುರುವಾಗುವುದರಲ್ಲಿ ಯಾವ ಸಂಶಯವೂ ಇಲ್ಲ ಎಂದು ತಾಲ್ಲೂಕು ಒಕ್ಕಲಿಗರ ಸಂಘದ ಅಧ್ಯಕ್ಷ ಮಂಜುನಾಥ್.ಸಿ.ಎನ್ ಅಭಿಪ್ರಾಯಪಟ್ಟರು.
ಜಿಲ್ಲಾ ಮತ್ತು ತಾಲ್ಲೂಕು ವಿಶ್ವ ಹಿಂದು ಪರಿಷದ್,ಬಜರಂಗದಳ , ದುರ್ಗಾವಾಹಿನಿವತಿಯಿಂದ ಮಂಡ್ಯದಲ್ಲಿ ಶ್ರೀರಾಮಾಂಜನೇಯ ಮಹೋತ್ಸವ ಸಮಿತಿಯಿಂದ ಬೃಹತ್ ಶೋಭಾಯಾತ್ರೆ ಹಾಗೂ ಹಿಂದೂ ಸಮಾವೇಶದ ಅಂಗವಾಗಿ ಪಟ್ಟಣದ, ಸೌಮ್ಯಕೇಶವಸ್ವಾಮಿ ದೇವಾಲಯದ ಮುಂಭಾಗದಲ್ಲಿ ಭಿತ್ತಿಪತ್ರ ಬಿಡುಗಡೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಅಧರ್ಮಿಯರಿಂದ ದಿನನಿತ್ಯ ಅನೇಕ ಸಮಸ್ಯೆಗಳನ್ನು ಹೆದುರಿಸುತ್ತಿರುವ ನಾವು ಒಟ್ಟಾಗದಿದ್ದರೆ ಸಮಸ್ಯೆ ಮತ್ತಷ್ಟು ಉಲ್ಬಣಗೊಳ್ಳಲಿದೆ. ಹಿಂದೂಗಳಾದ ನಾವು ನಮ್ಮ ಸಂಸ್ಕೃತಿಯನ್ನು ಹೆಚ್ಚು ಪ್ರೀತಿಸಬೇಕು ಜಿಲ್ಲೆಯಲ್ಲಿ ನಡೆಯುತ್ತಿರುವ ಬೃಹತ್ ರಾಮಾಂಜನೇಯ ಮಹೋತ್ಸವದಲ್ಲಿ ನಮ್ಮ ತಾಲ್ಲೂಕಿನಿಂದ ಸಾವಿರಾರು ಸಂಖ್ಯೆಯಲ್ಲಿ ಹಿಂದೂಗಳು ಹೊರಡೋಣ ಎಂದು ಕರೆ ನೀಡಿದರು.
ನಂತರ ಮಾತನಾಡಿದ ಬಜರಂಗದಳದ ಮೈಸೂರು ವಿಭಾಗ ಸಂಯೋಜಕರಾದ ಬಸವರಾಜು ಜಿಲ್ಲೆಯಲ್ಲಿ ಪ್ರತೀ ದಿನ ಹಿಂದೂಗಳ ಮೇಲೆ ದಬ್ಬಾಳಿಕೆ ದೌರ್ಜನ್ಯ ನಡೆಯುತ್ತಲೇ ಇದೆ ಕೆರಗೋಡಿನ ಶ್ರೀ ಹನುಮ ಧ್ವಜ ಕೆಳಗಡೆ ಇಳಿಸಲಾಯಿತು, ನಾಗಮಂಗಲದಲ್ಲಿ ಗಣಪತಿಗೆ ಚಪ್ಪಲಿ ತೂರಿ ಹಿಂದುಗಳ ಮೇಲೆ ದಬ್ಬಾಳಿಕೆ ನಡೆಸಲಾಯಿತು.

ವಕ್ಫ್ ಹೆಸರಿನಲ್ಲಿ ಹಿಂದುಗಳ ಭೂಮಿಯನ್ನು ಕಿತ್ತುಕೊಳ್ಳಲಾಗುತ್ತಿದೆ ನಾವು ಹಿಂದುಗಳು ಬಹುಸಂಖ್ಯಾತರಾಗಿದ್ದ ಮಾತ್ರಕ್ಕೆ ಸುರಕ್ಷಿತರಲ್ಲ ನಾವು ಜಾಗೃತರಾದರೆ ನಮ್ಮ ಸುರಕ್ಷತೆ ಆಡಗಿದೆ ಹಾಗಾಗಿ ಶ್ರೀರಾಮಾಂಜನೇಯ ಮಹೋತ್ಸವಕ್ಕೆ ಸಾಗರೋಪಾದಿಯಲ್ಲಿ ಸಹಸ್ರ ಸಹಸ್ರ ಸಂಖ್ಯೆಯಲ್ಲಿ ಕುಟುಂಬ ಸಮೇತರಾಗಿ ಪಾಲ್ಗೊಳ್ಳೋಣ ಎಂದು ತಿಳಿಸಿದರು. ಅರ್ಚಕರ ಸಂಘದ ಶ್ರೀಪ್ರಸನ್ನಶೈವ ಮಾತನಾಡಿ ನಮ್ಮಲ್ಲಿರುವ ಜಾತಿ ಪದ್ದತಿಯನ್ನು ನಮ್ಮ ಮನೆಗಳಲ್ಲಿ ಆಚರಿಸೋಣ ಇಂದು ಹಿಂದೂಗಳು ಒಟ್ಟಾಗುವ ಸಮಯ ಬಂದಿದೆ ನಾವೆಲ್ಲ ಜಿಲ್ಲೆಯಲ್ಲಿ ಹಿಂದೂಗಳ
ಶಕ್ತಿ ಪ್ರದರ್ಶಿಸೋಣ ಎಂದು ತಿಳಿಸಿದರು.

ಈ ಸಮಯದಲ್ಲಿ ಪುರಸಭೆ ಸದಸ್ಯರಾದ ತಿಮ್ಮಪ್ಪ, ಅಶೋಕ್, ಆಯುರ್ವೇದ ವೈದ್ಯ ವಿಶ್ವನಾಥ್, ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾದ ಕೆ.ಸೀತಾರಾಮ್, ಮಾಜಿ ಅಧ್ಯಕ್ಷ ಬಿ.ಹೆಚ್.ರವಿ, ಪ್ರೆಸ್ ಕ್ಲಬ್ ನ ಉಪ್ಪಾರಹಳ್ಳಿ ವೆಂಕಟೇಶ್, ಅರ್ಚಕ ಸುದರ್ಶನ್, ಜಿಲ್ಲಾ ವಿಶ್ವಹಿಂದೂ ಪರಿಷತ್ ಕಾರ್ಯದರ್ಶಿ ಪುಣ್ಯಕೋಟಿ ರಘು, ಚೇತನ್ ಚಂದ್ರ, ಕಾಲಿಸ್ ಮಹೇಶ್, ಉಪ್ಪಾರಹಳ್ಳಿ ರಾಘು, ರಾಜೇಶ್, ಪ್ರವೀಣ್ ತೊಗಾಡಿಯಾ, ಸಂತೋಷ್ ಸೇರಿದಂತೆ ಹಲವಾರು ಭಾಗಿಯಾಗಿದ್ದರು.
-ಬಿ.ಹೆಚ್. ರವಿ