ನಾಗಮಂಗಲ;ಅಮೇರಿಕಾದ ಸ್ಟ್ಯಾಂಪೋರ್ಡ್ ವಿಶ್ವ ವಿದ್ಯಾನಿಲಯ ಇತ್ತೀಚೆಗೆ ಬಿಡುಗಡೆ ಮಾಡಿರುವ ವಿಶ್ವದ ಶ್ರೇಷ್ಠ ಅಗ್ರಮಾನ್ಯ ವಿಜ್ಞಾನಿಗಳ ಪಟ್ಟಿಯಲ್ಲಿ ಡಾ.ಉದಯಭಾನು ಅವರು ಗುರುತಿಸಿಕೊಂಡಿದ್ದಾರೆ.
ಪ್ರಸ್ತುತ ಬಿ.ಜಿ.ನಗರ ಆದಿಚುಂಚನಗಿರಿ ವಿಶ್ವ ವಿದ್ಯಾನಿಲಯದಲ್ಲಿ ರಸಾಯನ ಶಾಸ್ತ್ರ ಸಹಾಯಕ ಪ್ರಾಧ್ಯಾಪಕರಾಗಿದ್ದು, ಬಿ.ಎಂ.ಎಸ್. ಐ.ಟಿ. ಮತ್ತು ಮ್ಯಾನೇಜ್ಮೆಂಟ್ ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.
ಅಂತರಾಷ್ಟ್ರೀಯ ಮಟ್ಟದಲ್ಲಿ ಪ್ರಕಟವಾದ ಸಂಶೋಧನಾ ಪ್ರಕಟಣೆಗಳ ಉಲ್ಲೇಖಗಳು,ಸಹ ಲೇಖಕ,ಸಂಶೋಧನಾ ಪ್ರಕಟಣೆಗಳು ಮತ್ತು ಹೆಚ್.ಇಂಡೆಕ್ಸ್ ಗಳನ್ನು ಪರಿಶೀಲಿಸಿದ ನಂತರ ವಿಶ್ವದ ಎರಡು ಅಗ್ರ ವಿಜ್ಞಾನಿಗಳ ಪಟ್ಟಿಯನ್ನು ಸ್ಟ್ಯಾಂಪೋರ್ಡ್ ವಿಶ್ವವಿದ್ಯಾನಿಲಯವು ಬಿಡುಗಡೆ ಮಾಡಿದೆ.
ಡಾ.ಉದಯಭಾನು ಅವರ ಸಂಶೋಧನೆಯು ಮೆಟೀರಿಯಲ್ಸ್ ಫಾರ್ ಲಿತಿಯಂ ಅಯಾನ್ ಬ್ಯಾಟರಿ ಮತ್ತು ಹೈಡ್ರೋಜನ್ ಪ್ರೋಡಕ್ಷನ್ ಮೇಲೆ ಸಾಗುತ್ತಿದೆ.
ಡಾ.ಉದಯಭಾನು ಅವರು ಈ ಸ್ಥಾನದಲ್ಲಿ ಗುರುತಿಸಿಕೊಂಡಿರುವುದರಿಂದ ಮಂಡ್ಯದ ಗತ್ತು ವಿಶ್ವಕ್ಕೆ ಗೊತ್ತು ಎನ್ನುವ ಮಾತಿಗೆ ಮತ್ತೊಮ್ಮೆ ಪುಷ್ಟಿ ದೊರೆತಂತೆ ಆಗಿದೆ.
ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪೀಠಾಧಿಪತಿ ಶ್ರೀ ಡಾ.ನಿರ್ಮಲಾನಂದನಾಥ ಮಹಾಸ್ವಾಮೀಜಿಯವರು ಹಾಗೂ ಆದಿಚುಂಚನಗಿರಿ ವಿಶ್ವವಿದ್ಯಾನಿಲಯದ ಕುಲಪತಿಗಳು ,ಉಪನ್ಯಾಸಕರು, ಸಿಬ್ಬಂದಿಗಳು ಡಾ.ಉದಯಭಾನು ಅವರನ್ನು ಅಭಿನಂದಿಸಿದ್ದಾರೆ.
———————--ಬಿ.ಹೆಚ್. ರವಿ ನಾಗಮಂಗಲ