ನಾಗಮಂಗಲ:ಸರಕಾರಿ ಪದವಿಪೂರ್ವ ಕಾಲೇಜಿನ ಮೇಲೆ ಹಾಕಲಾಗಿದ್ದ ಸಚಿವ ಚೆಲುವರಾಯಸ್ವಾಮಿ ಯವರ ಫ್ಲೆಕ್ಸ್ ಅನ್ನು ದುಷ್ಕರ್ಮಿಗಳು ವಿರೂಪಗೊಳಿಸಿರುವುದನ್ನು ಕಾಲೇಜು ಅಭಿವೃದ್ಧಿ ಸಮಿತಿಯ ಉಪಾಧ್ಯಕ್ಷ ವಕೀಲ ಧನಂಜಯ್ ಖಂಡಿಸಿದ್ದಾರೆ.
ಕಾಲೇಜು ಮುಂಭಾಗ ಪತ್ರಕರ್ತರೊಂದಿಗೆ ಮಾತನಾಡಿದ ಅವರು,ಸರ್ಕಾರಿ ಪದವಿಪೂರ್ವ ಕಾಲೇಜಿನ ಅಮೃತ ಮಹೋತ್ಸವ ಸಂದರ್ಭದಲ್ಲಿ ಚೆಲುವರಾಯಸ್ವಾಮಿ ರವರುಕಾಲೇಜಿನ ಉನ್ನತೀಕರಣಕ್ಕಾಗಿ ಎರಡೂವರೆ ಕೋಟಿ ರೂಪಾಯಿ ಅನುದಾನ ಬಿಡುಗಡೆ ಮಾಡಿದ್ದಾರೆ.ಅದಕ್ಕಾಗಿ ಧನ್ಯವಾದಗಳನ್ನು ತಿಳಿಸಿ ಜೊತೆಗೆ ಅಮೃತ ಮಹೋತ್ಸವಕ್ಕೆ ಸಚಿವರು ಶುಭ ಕೋರಿರುವ ಫ್ಲೆಕ್ಸ್ ಅನ್ನು ಅಳವಡಿಸಲಾಗಿತ್ತು.ಕಿಡಿಗೇಡಿಗಳು ಆ ಫ್ಲೆಕ್ಸ್ ಅನ್ನು ವಿರೂಪಗೊಳಿಸಿದ್ದು ಸಹಿಸಲಾಗದ್ದು.ಅವರ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗುತ್ತದೆ ಎಂದು ತಿಳಿಸಿದರು.
————ರವಿ ಬಿ ಹೆಚ್