ನಾಗಮಂಗಲ:ತಾಲೂಕು ಕೃಷಿಕ ಸಮಾಜದ ಕಾರ್ಯಕಾರಿ ಸಮಿತಿ ಸದಸ್ಯರ ಚುನಾವಣೆಯಲ್ಲಿ ರಾಜ್ಯ ಕೃಷಿಕ ಸಮಾಜದ ಮಾಜಿ ರಾಜ್ಯಾಧ್ಯಕ್ಷರಾದ ಮಂಜುನಾಥ್ ಗೌಡ ಎಸ್.ಆರ್ ರವರ15 ಜನರ ತಂಡವು ಪ್ರಚಂಡ ಜಯ ದಾಖಲಿಸಿದೆ.
ಮಂಜುನಾಥ್ ಗೌಡರ ತಂಡವು ಗೆಲುವು ಸಾಧಿಸುತ್ತಿದ್ದಂತೆ ಅಭಿಮಾನಿಗಳು ಪಟಾಕಿ ಸಿಡಿಸಿ,ಸಿಹಿಯನ್ನು ಹಂಚಿದರು.
ಗೆಲುವನ್ನು ಸಂಭ್ರಮಿಸಿ ಮಾತನಾಡಿದ ಎಸ್.ಆರ್ ಮಂಜುನಾಥ್ ಗೌಡ, ನನ್ನ ಏಳಿಗೆಯನ್ನು ಸಹಿಸದ ಕೆಲವರು ನನ್ನ ವಿರುದ್ಧ ಷಡ್ಯಂತ್ರ ಮಾಡಿದರು.ಆದರೂ ಕೂಡ ನಾಗಮಂಗಲ ತಾಲೂಕಿನ ಕೃಷಿಕ ಸಮಾಜದ ಸದಸ್ಯರು ಅತಿ ಹೆಚ್ಚು ಮತಗಳನ್ನು ನೀಡುವ ಮೂಲಕ ನನಗೆ ಮತ್ತು ನನ್ನ ತಂಡಕ್ಕೆ ಪ್ರಚಂಡ ಅಭೂತಪೂರ್ವ ಬೆಂಬಲ ನೀಡಿ ವಿರೋಧಿಗಳಿಗೆ ಉತ್ತರ ನೀಡಿದ್ದಾರೆ.ಎಲ್ಲರಿಗೂ ಕೂಡ ನನ್ನ ಧನ್ಯವಾದಗಳನ್ನು ಅರ್ಪಿಸುತ್ತೇನೆ ಎಂದರು.
ಕೃಷಿ ಸಚಿವರಾದ ಚೆಲುವರಾಯಸ್ವಾಮಿಯವರಿಗೂ ಸಹ ಧನ್ಯವಾದಗಳನ್ನು ತಿಳಿಸಿ,ಕೃಷಿಕ ಸಮಾಜದ ಏಳಿಗೆಗಾಗಿ ನಾನು ಹಾಗು ನನ್ನ ತಂಡ ಹಗಲಿರುಳು ಶ್ರಮಿಸಲಿದೆ ಎಂಬ ಭರವಸೆಯನ್ನು ಮಂಜುನಾಥ್ ಗೌಡ ಎಸ್.ಆರ್ ನೀಡಿದರು.
———-—ರವಿ ಬಿ.ಹೆಚ್