ನಾಗಮಂಗಲ:ಗೋ ಸಂತತಿ ಉಳಿಸುವ ಪಕ್ಷಕ್ಕಷ್ಟೇ ಮತನೀಡಿ-ಬಸವರಾಜ ಬೀರಾದಾರ ಕರೆ

ನಾಗಮಂಗಲ:ರಾಜ್ಯಸರ್ಕಾರ ಕಠಿಣ ನಿರ್ಧಾರಗಳನ್ನು ತೆಗೆದುಕೊಂಡರೆ ಮಾತ್ರ ದೇಶಿಯ ಗೋ ಸಂತತಿಗಳನ್ನು ಉಳಿಸಲು ಸಾಧ್ಯ ಎಂದು ವಿಜಯಪುರದ ಅಭಿ ಫೌಂಡೇಷನ್ ಸಂಸ್ಥಾಪಕರಾದ ಬಸವರಾಜ ಬೀರಾದಾರ ಅಭಿಪ್ರಾಯಪಟ್ಟರು.

ತಾಲ್ಲೂಕಿನ ಬಿಂಡಿಗನವಿಲೆ ಗ್ರಾಮದ ಮಲೆನಾಡು ಗಿಡ್ಡ ಸಂರಕ್ಷಣಾ ಮತ್ತು ಸಂವರ್ಧನಾ ಅಭಿಯಾನದ ಆಶ್ರಯದಲ್ಲಿ ಶ್ರೀ ಲಕ್ಷ್ಮೀ ಗೋಮಾತಾ ಮಂದಿರ ಪಂಚಗವ್ಯ ಉತ್ಪನ್ನ ಕೇಂದ್ರ ಬಿಂಡಿಗನವಿಲೆ ಇವರ ನೇತೃತ್ವದಲ್ಲಿ ಗೋಸೇವಾ ಗತಿ ವಿದಿ ಮೈಸೂರು ವಿಭಾಗ ಇವರ ಸಹಕಾರದೊಂದಿಗೆ ಆಯೋಜಿಸಲಾಗಿದ್ದ ನಂದಿ ರಥ ಯಾತ್ರೆ ಹಾಗೂ ಗೋದಾನ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಪೂಜ್ಯ ಸಿದ್ದೇಶ್ವರ ಸ್ವಾಮೀಜಿಯವರ ಜನ್ಮಸ್ಥಳದ ಮನೆಯಿಂದ ಪ್ರಾರಂಭವಾದ ನಂದಿ ರಥಯಾತ್ರೆ ರಾಜ್ಯಾದ್ಯಂತ ಸಂಚರಿಸುತ್ತದೆ.ನಂದಿ ಶಕ್ತಿಯ ಮುಂದೆ ಜಗತ್ತಿನ ಯಾವ ಶಕ್ತಿಯೂ ಕೂಡ ನಮ್ಮನ್ನು ನಾಶಮಾಡಲು ಸಾಧ್ಯವಿಲ್ಲ. ನಂದಿಯನ್ನು ಉಳಿಸುವ ಸಲುವಾಗಿ ರೈತರೊಂದಿಗೆ ಸಾರ್ವಜನಿಕರು ಸಹಕರಿಸಬೇಕಾಗಿದೆ. ರಾಜ್ಯದ ಯಾವುದೇ ರಾಜಕೀಯ ಪಕ್ಷಗಳು ಮತ ಕೇಳಲು ನಮ್ಮ ಬಳಿ ಬಂದರೆ ಗೋವುಗಳನ್ನು ಉಳಿಸಲು ಒಕ್ಕೂರಲಾಗಿ ಕೇಳಿ. ಈ ಸಂದರ್ಭದಲ್ಲಿ ಗೋವುಗಳನ್ನು ಉಳಿಸುವ ಪಕ್ಷಕ್ಕೆ ಮತ ನೀಡಬೇಕೆಂದು ಕರೆ ನೀಡಿದರು.

ಗೋವುಗಳು ಉಳಿದರೆ ಮಾತ್ರ ಮುಂದಿನ ಪೀಳಿಗೆ ಬದುಕಲು ಸಾಧ್ಯ. ಕೃಷಿಯ ವಿಷಯವಾಗಿ ದೇಶೀಯ ಹಸುಗಳು ರೈತರಿಗೆ ಬೆನ್ನೆಲುಬು. ರೈತರು ಹೆಚ್ಚು ಹೆಚ್ಚು ದೇಶೀಯ ಗೋವುಗಳನ್ನು ಸಾಕಿ ಸಲಹಬೇಕಾಗಿದೆ. ಮಲೆನಾಡು ಗಿಡ್ಡಗಳು ಕೇವಲ ಮಲೆನಾಡಿಗೆ ಸೀಮಿತವಾಗದೆ ಎಲ್ಲಾ ಭಾಗಗಳಲ್ಲಿಯೂ ಪಸರಿಸಿ ಉಳಿಸಿ ಬೆಳೆಸುವಂತಾಗಬೇಕು. 12 ಜ್ಯೋತಿರ್ಲಿಂಗಗಳೂ ಸಹ ನಂದಿಯನ್ನು ಮುಂದಿಟ್ಟುಕೊಂಡು ಭಾರತದಾದ್ಯಂತ ಬೆಳಗುತ್ತಿದೆ. ಇಂಥಹ ನಂದಿಯ ಬಗ್ಗೆ ಗ್ರಾಮ ಗ್ರಾಮಗಳಲ್ಲಿ ಜಾಗೃತಿ ಮೂಡಿಸಲು ಎಲ್ಲರೂ ಶ್ರಮಿಸಬೇಕಿದೆ ಎಂದರು.

ಗೋ ಉತ್ಪನ್ನಗಳನ್ನು ಉಪಯೋಗಿಸುವುದರಿಂದ ಮನುಷ್ಯನ ಆರೋಗ್ಯ ವೃದ್ದಿಸಲಿದೆ. ಇಂಥಹ ಗೋಮಾತೆಯನ್ನು ರಕ್ಷಿಸಲು ಪಣತೊಡಬೇಕೆಂದು ಬಸವರಾಜ ಬೀರಾದಾರ ತಿಳಿಸಿದರು.

ಈ ಸಂದರ್ಭದಲ್ಲಿ ಮಲೆನಾಡು ಗಿಡ್ಡ ಗವ್ಯೋತ್ಪನ್ನ ಕೋ ಆಪರೇಟಿವ್ ಸೊಸೈಟಿ ಉದ್ಘಾಟನೆಯನ್ನು ವೇದಿಕೆಯ ಮೇಲಿನ ಗಣ್ಯರು ಉದ್ಘಾ ಟಿಸಿದರು.

ಅಗ್ನಿ ಹೋತ್ರ ಕಾರ್ಯಕ್ರಮ,ವಿಷ್ಣು ಸಹಸ್ರನಾಮ ಪಟಣ ಮತ್ತು ವೈಜ್ಞಾನಿಕ ಚಿಂತನೆಯ ಜೊತೆ ಗೋ ಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟ ಏರ್ಪಡ ಸಲಾಗಿತ್ತು.ಕಾರ್ಯಕ್ರಮಕ್ಕೂ ಮುನ್ನ ಗ್ರಾಮದ ಪ್ರಮುಖ ರಾಜಬೀದಿಗಳಲ್ಲಿ ಭಾಜಾಬಜಂತ್ರಿ ಭಜನೆ,ಕುಂಭ ಕಳಸದೊದಿಗೆ ನಂದಿ ರಥಯಾತ್ರೆಯನ್ನು ನಡೆಸಲಾಯಿತು.

ಈ ಸಮಯದಲ್ಲಿ ಬಿಂಡಿಗನವಿಲೆ ನಿವೃತ್ತ ಶಿಕ್ಷಕರಾದ ಲಕ್ಕೇಗೌಡರು, ಯೂನಿವರ್ಸಿಟಿಡೆಪ್ಯುಟಿ ರಿಜಿಸ್ಟ್ರಾರ್ ದಯಾನಂದಸಾಗರ್,ಮನು ತಿಮ್ಮೇಗೌಡರು, ಗೌತಮ್ ಗೋಪಾಲಕೃಷ್ಣ, ಮೈಸೂರು ವಿಭಾಗ ಗೋ ಸೇವಾ ಗತಿ ವಿಧಿ ಸಂಯೋಜಕರಾದ ಪುನೀತ್ ಸಿ ಜಿ, ವೇದಭಾರತೀ ಸಂಯೋಜಕರಾದ ಹರಿಹರಪುರ ಶ್ರೀಧರ್, ವೈನತೇಯ ಭಕ್ತ ಮಂಡಳಿ, ಶೇಷಾದ್ರಿ ,ರಾಜ್ಯ ಗೋ ಸಂರಕ್ಷಣಾ ಸಮಿತಿ ಸಂಚಾಲಕರು ಮಳವಳ್ಳಿ ಮಂಜುನಾಥ್, ನಾರಾಯಣಲಾಲ್ ಭಟ್, ಅಕ್ಷಯ್ ಆಳ್ವ, ಮುರಳ್ಯ ಪ್ರಸನ್ನ ಕೆ, ಎಣ್ಣೂರು ಸೇರಿದಂತೆ ನೂರಾರು ಗೋ ಪ್ರೇಮಿಗಳು ಭಾಗವಹಿಸಿದ್ದರು.

———————-ರವಿ ಬಿ.ಹೆಚ್

Leave a Reply

Your email address will not be published. Required fields are marked *

× How can I help you?