ನಾಗಮಂಗಲ-ಆಗಸ್ಟ್ 23 ರಂದು ಕಂಬದಹಳ್ಳಿ ಗ್ರಾಮದ ರಾಮಚಂದ್ರೇಗೌಡ ಎಂಬುವವರು ಹರಿಯುವ ನೀರಿನ ರಭಸಕ್ಕೆ ಕೊಚ್ಚಿ ಹೋಗಿ ಮೃತಪಟ್ಟಿದ್ದರು.
ಇಂದು ಕೃಷಿ ಸಚಿವ ಚೆಲುವರಾಯಸ್ವಾಮಿಯವರು ಮೃತರ ಪತ್ನಿ ಭಾಗ್ಯಮ್ಮನವರಿಗೆ ಸರಕಾರದಿಂದ ಕೊಡಮಾಡುವ ಐದು ಲಕ್ಷ ರೂಪಾಯಿ ಪರಿಹಾರ ಹಣದ ಮಂಜೂರಾತಿ ಪತ್ರವನ್ನು ವಿತರಿಸಿದರು.
ತಹಶೀಲ್ದಾರ್ ಜಿ.ಆದರ್ಶ್, ಕಂದಾಯ ಇಲಾಖೆಯ ಅಧಿಕಾರಿ ಮಧುಸೂಧನ್ ಇದ್ದರು.
—————ರವಿ ಬಿ ಹೆಚ್