ನಾಗಮಂಗಲ-ಪಿ.ಎಲ್.ಡಿ.ಬ್ಯಾಂಕ್ ನೂತನ ಅಧ್ಯಕ್ಷರಾಗಿ ಶಿಖರನಹಳ್ಳಿ ದೊರೆಸ್ವಾಮಿ ಅವಿರೋಧ ಆಯ್ಕೆ-ಉತ್ತಮ ಆಡಳಿತ ನೀಡುವ ಭರವಸೆ

ನಾಗಮಂಗಲ-ತಾಲೂಕಿನ ಪ್ರಾಥಮಿಕ ಸಹಕಾರ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ ಗೆ ನಡೆದ ಚುನಾವಣೆಯಲ್ಲಿ ಕೃಷಿ ಸಚಿವ ಎನ್ ಚೆಲುವರಾಯಸ್ವಾಮಿ ರವರ ಬಣದ ಎಸ್‌.ಟಿ ಗಿರಿಗೌಡ ಉರುಫ್ ಶಿಖರನಹಳ್ಳಿ ದೊರೆಸ್ವಾಮಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾ ಅಧಿಕಾರಿಯಾದ ರೂಪರವರು ಘೋಷಣೆ ಮಾಡಿದರು

ನೂತನ ಅಧ್ಯಕ್ಷರಾಗಿ ಆಯ್ಕೆಯಾದ ದೊರೆಸ್ವಾಮಿ ರವರಿಗೆ ಅಭಿಮಾನಿಗಳು ಮತ್ತು ಪಿ ಎಲ್ ಡಿ ಬ್ಯಾಂಕ್ ನಿರ್ದೇಶಕರುಗಳು ಶುಭಕೋರಿ ಹಾರೈಸಿದರು

ನೂತನ ಅಧ್ಯಕ್ಷರಿಗೆ ಶುಭ ಹಾರೈಸಿ ರಾಜ್ಯ ಫೆಡರೇಷನ್ ನಿರ್ದೇಶಕ ತಿಮ್ಮರಾಯಿ ಗೌಡ ರವರು ಮಾತನಾಡಿ, ನಮ್ಮ ನಾಯಕರಾದ ಕೃಷಿ ಸಚಿವ ಚೆಲುವರಾಯಸ್ವಾಮಿ ರವರ ಬೆಂಬಲಿತ ಅಭ್ಯರ್ಥಿ ಗಿರಿ ಗೌಡರವರು ಇಂದು ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿರುವುದು ಸಂತಸದ ವಿಚಾರ. ರೈತರಿಂದ ರೈತರಿಗೋಸ್ಕರ ಸ್ಥಾಪನೆಯಾದ ಈ ಸಂಘವು ಮುಂದಿನ ದಿನದಲ್ಲಿ ನೂತನ ಅಧ್ಯಕ್ಷರ ನೇತೃತ್ವದಲ್ಲಿ ಉನ್ನತ ಮಟ್ಟಕ್ಕೆ ಏರಲಿ,ರೈತರ ಅಭಿವೃದ್ಧಿಗಾಗಿ ಶ್ರಮಿಸಲಿ ಎಂದರು.

ನೂತನ ಅಧ್ಯಕ್ಷರಾದ ಗಿರಿ ಗೌಡ ರವರಿಗೆ ನಾನು ಸೇರಿದಂತೆ ನಮ್ಮೆಲ್ಲ ಪಿ.ಎಲ್‌.ಡಿ ಬ್ಯಾಂಕ್ ನಿರ್ದೇಶಕರುಗಳ ಸಹಕಾರ ಎಂದಿನಂತೆ ಇರುವುದು ಎಂದು ತಿಳಿಸಿದರು.

ನೂತನ ಅಧ್ಯಕ್ಷರಾದ ಗಿರಿ ಗೌಡ ಮಾತನಾಡಿ, ನಮ್ಮ ನಾಯಕರಾದ ಚೆಲುವರಾಯಸ್ವಾಮಿ ರವರು ಮತ್ತು ಪಿ ಎಲ್ ಡಿ ಬ್ಯಾಂಕ್ ನ ಎಲ್ಲಾ ನಿರ್ದೇಶಕರುಗಳು ನನ್ನ ಮೇಲೆ ವಿಶ್ವಾಸವಿಟ್ಟು ಈ ಜವಾಬ್ದಾರಿಯನ್ನು ನೀಡಿದ್ದಾರೆ. ಸಂಘದ ಪ್ರತಿಯೊಬ್ಬ ಸದಸ್ಯರಿಗೂ ಕೂಡ ಯಾವುದೇ ದಕ್ಕೆ ಬರದಂತೆ ನನ್ನ ಅಧಿಕಾರವನ್ನು ನಡೆಸುತ್ತೇನೆ ಎಂದು ತಿಳಿಸಿದರು.

ಇದೇ ಸಂದರ್ಭದಲ್ಲಿ ರಾಜ್ಯ ಪೆಡರೇಷನ್ ಸದಸ್ಯ ತಿಮ್ಮರಾಯಿಗೌಡ ಪಿ ಎಲ್ ಡಿ ಬ್ಯಾಂಕ್ ನಿರ್ದೇಶಕರಾದ ಸತೀಶ್ ಚಂದ್ರ. ಲಕ್ಷ್ಮೀನಾರಾಯಣ. ತಮ್ಮಣ್ಣಗೌಡ. ಚೋಳೆನಹಳ್ಳಿ ಮಂಜುನಾಥ್. ಕಾಂಗ್ರೆಸ್ ಮುಖಂಡರಾದ ಎಚ್ ಟಿ ಕೃಷ್ಣೆಗೌಡ. ತುರುಬನಹಳ್ಳಿ ರಾಜೇಗೌಡ. ಗಿರಿಗೌಡ ಹಾಗೂ ನೂರಾರು ಜನ ಅಭಿಮಾನಿಗಳು ಮತ್ತು ಪಿಎಲ್‌ಡಿ ಬ್ಯಾಂಕ್ ಆಡಳಿತ ಮಂಡಳಿಯ ನೌಕರರು ಉಪಸ್ಥಿತರಿದ್ದರು.

———-—-ರವಿ ಬಿ.ಹೆಚ್

Leave a Reply

Your email address will not be published. Required fields are marked *

× How can I help you?