ನಾಗಮಂಗಲ:ಸಾಲ ವಸೂಲಾತಿಯಲ್ಲಿ ಮಂಡ್ಯ ಜಿಲ್ಲೆಯಲ್ಲಿ ನಾಗಮಂಗಲ ತಾಲ್ಲೂಕು ಪ್ರಾಥಮಿಕ ಸಹಕಾರ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ ಪ್ರಥಮ ಸ್ಥಾನದಲ್ಲಿದೆ ಎಂದು ಎಸ್.ಎಲ್. ಡಿ.ಬಿ ನಿರ್ದೇಶಕ ಹಾಗೂ ಪಿ.ಎಲ್. ಡಿ.ಬ್ಯಾಂಕ್ ಮಾಜಿ ಅಧ್ಯಕ್ಷ ಚಾಕೇನಹಳ್ಳಿ ತಿಮ್ಮರಾಯಿಗೌಡ ಹೇಳಿದರು.
ನಾಗಮಂಗಲ ಪಟ್ಟಣದ ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.
ಪ್ರಾಥಮಿಕ ಸಹಕಾರ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ ನಲ್ಲಿ 4846 ಮಂದಿ ಸದಸ್ಯರಿದ್ದು, ಬ್ಯಾಂಕ್ ಷೇರು ಮೌಲ್ಯ 1 ಕೋಟಿ 12 ಲಕ್ಷ ರೂಗಳು ಇರುತ್ತದೆ.
ನಮ್ಮ ಬ್ಯಾಂಕ್ ನಿಂದ ಆಸ್ತಿಯ ಮೇಲೆ ರೈತರಿಗೆ ಸುಮಾರು 8 ಕೋಟಿ ರೂಪಾಯಿ ಗಿಂತಲೂ ಹೆಚ್ಚು ಸಾಲವನ್ನು ನೀಡಲಾಗಿದೆ.ಈ ವರ್ಷದಲ್ಲಿ ಬ್ಯಾಂಕಿಗೆ 93 ಲಕ್ಷದ 25 ಸಾವಿರ ಆದಾಯ ಬಂದಿದೆ.
ಇದಕ್ಕೆ ಬ್ಯಾಂಕಿನ ಆಡಳಿತ ಮಂಡಳಿಗೆ ಮತ್ತು ನಮ್ಮ ಬ್ಯಾಂಕ್ ನಿಂದ ಸಾಲವನ್ನು ಪಡೆದು ಸಾಲವನ್ನು ಮರುಪಾವತಿ ಮಾಡಿದ ನಮ್ಮ ತಾಲ್ಲೂಕಿನ ರೈತರಿಗೆ ಅಭಿನಂದನೆಗಳನ್ನು ಸಲ್ಲಿಸುತ್ತೇನೆ .
ಇನ್ನೂ ಮುಖ್ಯವಾಗಿ ಸರ್ಕಾರಿ ನೌಕರರು ನಿವೃತ್ತಿಯಾದವರು ಮತ್ತು ಸಾರ್ವಜನಿಕರು ತಮ್ಮ ಹಣವನ್ನು ನಮ್ಮ ಬ್ಯಾಂಕಿನಲ್ಲಿ ಠೇವಣಿ ಮಾಡಿದರೆ ಹೆಚ್ಚು ಬಡ್ಡಿಯನ್ನು ನೀಡಲಾಗುವುದು ಎಂದರು ಹೇಳಿದರು.
ಈ ಸುದ್ದಿಗೋಷ್ಠಿಯಲ್ಲಿ ಪಿ.ಎಲ್. ಡಿ.ಬ್ಯಾಂಕ್ ಅಧ್ಯಕ್ಷ ಟಿ.ಎನ್. ನರಸಿಂಹಮೂರ್ತಿ. ಮಾಜಿ ಅಧ್ಯಕ್ಷರಾದ ಸಿ.ಜಿ.ಮಂಜುನಾಥ್,ತಮ್ಮಣ್ಣ,ಅಲ್ಪಹಳ್ಳಿ ನ್ಯಾಯ ಬೆಲೆ ಅಂಗಡಿ ಮಾಲೀಕ ಸತೀಶ್ ಸೇರಿದಂತೆ ಪಿ.ಎಲ್. ಡಿ.ಬ್ಯಾಂಕ್ ನೌಕರ ಸೀತಾರಾಮ ಉಪಸ್ಥಿತರಿದ್ದರು
————————––ವರದಿ: ಬಿ.ಹೆಚ್. ರವಿ ನಾಗಮಂಗಲ