ನಾಗಮಂಗಲ:ತಾಲ್ಲೂಕಿನ ಸರ್ಕಾರಿ ನೌಕರರ ಸಂಘಕ್ಕೆ ಒಂದು ಜಾಗವನ್ನು ಗುರುತಿಸಿ ತಾಲ್ಲೂಕು ಸರ್ಕಾರಿ ನೌಕರರ ಭವನವನ್ನು ನಿರ್ಮಾಣ ಮಾಡಿ ನೌಕರರ ಆಸೆಯನ್ನು ಈಡೇರಿಸ ಬೇಕು ಎಂದು ನಾಗಮಂಗಲ ತಾಲ್ಲೂಕು ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರ ಪತ್ತಿನ ಸಹಕಾರ ಸಂಘದ ಸಂಸ್ಥಾಪಕ ಅಧ್ಯಕ್ಷ ಬಿ.ಎಂ.ಪ್ರಕಾಶ್ ಅವರು ನೂತನ ಅಧ್ಯಕ್ಷ ಜೆ.ವೈ. ಮಂಜುನಾಥ್ ಅವರಿಗೆ ಕಿವಿ ಮಾತನ್ನು ಹೇಳಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ತಾಲ್ಲೂಕು ಸರ್ಕಾರಿ ನೌಕರರ ಸಂಘಕ್ಕೆ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿರುವ ಜೆ.ವೈ.ಮಂಜುನಾಥ್ ಅವರಿಗೆ ಅಭಿನಂದನೆಗಳನ್ನು ಸಲ್ಲಿಸಿ ಮಾತನಾಡಿದರು.
ತಾಲ್ಲೂಕಿನ ಎಲ್ಲಾ ಸರ್ಕಾರಿ ನೌಕರರ ಆಶೋತ್ತರಗಳಂತೆ ಮಂಡ್ಯ ಜಿಲ್ಲೆಯ ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಜೆ.ವೈ.ಮಂಜುನಾಥ್ ಅವರು ನಾಗಮಂಗಲ ತಾಲ್ಲೂಕು ಸರ್ಕಾರಿ ನೌಕರರ ಸಂಘಕ್ಕೆ ಅವಿರೋಧವಾಗಿ ಅಧ್ಯಕ್ಷರಾಗಿ ಆಯ್ಕೆಯಾಗಿರುವುದಕ್ಕೆ ತಾಲ್ಲೂಕಿನ ಎಲ್ಲಾ ಸರ್ಕಾರಿ ನೌಕರರ ಪರವಾಗಿ ಅವರಿಗೆ ಅಭಿನಂದನೆಗಳನ್ನು ಸಲ್ಲಿಸುತ್ತೇನೆ.
ಖಜಾಂಚಿ ಮತ್ತು ರಾಜ್ಯ ಪರಿಷತ್ ಸ್ಥಾನಕ್ಕೆ ಚುನಾವಣೆ ನಡೆಯಲಿದೆ.ಈ ಎರಡು ಕ್ಷೇತ್ರದಲ್ಲಿ ರಾಜ್ಯ ಪರಿಷತ್ ಸ್ಥಾನಕ್ಕೆ ಕೆ.ಎನ್. ಮಧುಸೂದನ್, ಖಜಾಂಚಿ ಸ್ಥಾನಕ್ಕೆ ಕೆ.ಶಿವಕುಮಾರ್ ಈ ಇಬ್ಬರು ಅಭ್ಯರ್ಥಿಗಳು ಸಹ ನವೆಂಬರ್ 16 ರಂದು ನಡೆಯುವ ಚುನಾವಣೆಯಲ್ಲಿ ಗೆದ್ದುಬರುತ್ತಾರೆ ಎಂಬ ವಿಶ್ವಾಸ ನನಗಿದೆ.
ಜೆ.ವೈ.ಮಂಜುನಾಥ್ ಅವರು ಅಧ್ಯಕ್ಷರಾಗಿದ್ದು, ಈಗ ಅವರ ಜವಾಬ್ದಾರಿ ಹೆಚ್ಚಾಗಿದೆ. ತಾಲ್ಲೂಕಿನ ಎಲ್ಲಾ ಸರ್ಕಾರಿ ನೌಕರರನ್ನು ಒಗ್ಗೂಡಿಸಿ ಕರೆದುಕೊಂಡು ಹೋಗಬೇಕು.ಚುನಾವಣೆಯಲ್ಲಿ ಸೋತವರನ್ನು ಗೆದ್ದವರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಎಲ್ಲರನ್ನೂ ಸಂಘಟನೆಗೆ ತೊಡಗಿಸಿಕೊಂಡು ಸರ್ಕಾರಿ ನೌಕರರ ಆಶೋತ್ತರಗಳಿಗೆ ಶ್ರಮಿಸಬೇಕು ಎಂದು ಸಲಹೆ ಕೊಟ್ಟರು.
ಈ ದಿನದಿಂದ ಎಲ್ಲಾ ಸರ್ಕಾರಿ ನೌಕರರ ಆಸೆಯಂತೆ ಪ್ರಥಮವಾಗಿ ತಾಲ್ಲೂಕು ಸರ್ಕಾರಿ ನೌಕರರ ಸಂಘಕ್ಕೆ ಒಂದು ಜಾಗವನ್ನು ಗುರುತಿಸಿ ತಾಲ್ಲೂಕು ಮಟ್ಟದಲ್ಲಿ ಸುಂದರವಾದ ತಾಲ್ಲೂಕು ಸರ್ಕಾರಿ ನೌಕರರ ಭವನವನ್ನು ನಿರ್ಮಾಣ ಮಾಡಬೇಕು ಎಂದು ಬಿ.ಎಂ.ಪ್ರಕಾಶ್ ತಿಳಿಸಿದರು.
ಇದೇ ಸಂದರ್ಭದಲ್ಲಿ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಜೆ.ವೈ.ಮಂಜುನಾಥ್ ಅವರಿಗೆ ಬಿ.ಎಂ.ಪ್ರಕಾಶ್ ಅವರು ಸಿಹಿ ತಿನ್ನಿಸಿದರು.
ಜೆ.ವೈ.ಮಂಜುನಾಥ್ ಅವರ ಅಭಿಮಾನಿಗಳು ಸಾರ್ವಜನಿಕರಿಗೆ ಸಿಹಿ ವಿತರಣೆ ಮಾಡಿದರು.
ತಾಲ್ಲೂಕು ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಜಿ.ಕೆ.ರುದ್ರೇಶ್. ಮಾಜಿ ಅಧ್ಯಕ್ಷ ಜೈಸ್ವಾಮಿ. ತಾಲ್ಲೂಕು ಸರ್ಕಾರಿ ನೌಕರರ ಸಂಘದ ನಿರ್ದೇಶಕರಾದ ಪಾಲಾಕ್ಷ. ಎನ್. ವೈ.ಸುರೇಶ್. ಕೆ.ಎನ್. ಮಧುಸೂದನ್. ಎನ್. ಶಿವಕುಮಾರ್. ಶಿಕ್ಷಕರಾದ ಕೆಂಪೇಗೌಡ. ಎನ್. ಕೆ.ಸುರೇಶ್. ವೆಂಕಟೇಶ್. ಕೆ.ಪುಟ್ಟರಾಜು, ಕಾಂಗ್ರೆಸ್ ಯುವ ಮುಖಂಡ ರವಿಕಾಂತೇಗೌಡ. ಮುಳುಕಟ್ಟೆ ಮಹೇಶ್ ಸೇರಿದಂತೆ ಜೆ.ವೈ.ಮಂಜುನಾಥ್ ಅಭಿಮಾನಿ ಬಳಗದ ಅಧ್ಯಕ್ಷರು ಎಲ್ಲ ಸದಸ್ಯರುಗಳು ಉಪಸ್ಥಿತರಿದ್ದರು.
————ರವಿ ಬಿ ಹೆಚ್