ಚಿಕ್ಕಮಗಳೂರು-ನಗರದ ಎಪಿಎಂಸಿ ಆವರಣದಲ್ಲಿರುವ ಚಿಕ್ಕಮಗಳೂರು ವರ್ತಕರ ಸಂಘಕ್ಕೆ ನೂತನ ಅಧ್ಯಕ್ಷರಾಗಿ ಎಂ.ಎಸ್.ನಾಗರಾಜ್ ಶನಿವಾರ ಅವಿರೋಧವಾಗಿ ಆಯ್ಕೆಯಾದರು.
ಬಳಿಕ ಮಾತನಾಡಿದ ಎಂ.ಎಸ್.ನಾಗರಾಜ್ ರೈತರ ತರಕಾರಿ ಬೆಳೆಗಳಿಗೆ ಎಪಿಎಂಸಿ ಮಾರು ಕಟ್ಟೆಯಲ್ಲಿ ಸೂಕ್ತ ರೀತಿಯಲ್ಲಿ ವ್ಯವಸ್ಥೆ ಕಲ್ಪಿಸುವುದು ಹಾಗೂ ರೈತರ ಬೆಳೆಗೆ ಬೆಂಬಲಬೆಲೆ ದೊರಕಿಸುವುದೇ ಸಂಘದ ಮೂಲಧ್ಯೇಯವಾಗಿದೆ ಎಂದು ತಿಳಿಸಿದರ
ಎಪಿಎಂಸಿ ಆವರಣಲ್ಲಿ ಸ್ವಚ್ಚತೆ ಕಾಪಾಡುವ ನಿಟ್ಟಿನಲ್ಲಿ ಸಂಘದಿಂದ ಸ್ವಂತ ಟ್ರ್ಯಾಕ್ಟರ್ ಟ್ರಾಲಿಯನ್ನು ಖ ರೀದಿಸಿ ಸ್ವಚ್ಚತೆ ಕೈಗೊಂಡಿದೆ ಹಾಗೂ ದೂರದ ಗ್ರಾಮಗಳಿಂದ ಬರುವಂಥ ರೈತರಿಗೆ ತಂಗಲು ವಸತಿಗೃಹ ನಿರ್ಮಿಸುವ ಉದ್ದೇಶಿದ್ದು ಸದ್ಯದಲ್ಲೇ ಆ ಕಾರ್ಯಕ್ಕೆ ಚಾಲನೆ ನೀಡಲಾಗುವುದು ಎಂದರು.
ಪ್ರಸ್ತುತ ಸಂಘದಿಂದ ಆಶಾಕಿರಣ ಶಾಲೆಯಲ್ಲಿ ಸಾಧನೆಗೈದ ವಿದ್ಯಾರ್ಥಿಗಳಿಗೆ ಗೌರವ ಸಮರ್ಪಣೆ, ಬಡ ರೈತರಿಗೆ ಆರ್ಥಿಕ ಸಹಾಯಧನ, ರಾಜ್ಯೋತ್ಸವ ಸೇರಿದಂತೆ ಜನಪರ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿ ದೆ ಎಂದ ಅವರು ಸಂಘದಲ್ಲಿ ಈಗಾಗಲೇ 150ಕ್ಕೂ ಹೆಚ್ಚು ಸದಸ್ಯರ ಬಲವಿದ್ದು ಸರ್ವಸದಸ್ಯರ ಸಹಕಾರ ದಿಂದ ಸಂಘದ ಅಭಿವೃಧ್ದಿಗೆ ಶ್ರಮಿಸಲಾಗುವುದು ಎಂದು ತಿಳಿಸಿದರು.
ನಿಕಟಪೂರ್ವ ಅಧ್ಯಕ್ಷ ಎಂ.ಕೆ.ವೇದಾನಂದಮೂರ್ತಿ ಮಾತನಾಡಿ, ರೈತರಿಕೋಸ್ಕರ ಸ್ಥಾಪಿತವಾದ ಸಂ ಘವು ಅಭಿವೃಧ್ದಿಯಿಂದ ಸಾಗುತ್ತಿದೆ. ರೈತರ ಸಮಸ್ಯೆಗಳಿಗೆ ಸ್ಪಂದಿಸುವ ಜೊತೆಗೆ ಆರ್ಥಿಕ ನಷ್ಟವಾಗದಂತೆ ಸೂಕ್ತ ಕ್ರಮ ವಹಿಸುತ್ತಿದ್ದು ಮುಂದಿನ ದಿನಗಳಲ್ಲಿ ನೂತನ ಅಧ್ಯಕ್ಷರು ಇನ್ನಷ್ಟು ಹೆಚ್ಚಿನ ಜವಾಬ್ದಾರಿ ವಹಿಸಿ ರೈತರ ಏಳಿಗೆಗೆ ದುಡಿಯುವಂತಾಗಲೀ ಎಂದು ಆಶಿಸಿದರು.

ಈ ಸಂದರ್ಭದಲ್ಲಿ ಸಂಘದ ಗೌರವಾಧ್ಯಕ್ಷ ಕೆ.ರೇವಣ್ಣ, ಪ್ರಧಾನ ಕಾರ್ಯದರ್ಶಿ ಚೇತನ್, ಕಾರ್ಯ ದರ್ಶಿ ಅಜೀಜ್, ನಿರ್ದೇಶಕರುಗಳಾದ ಮನ್ಸೂರ್, ಹರೀಶ್ ಮತ್ತಿತರರು ಉಪಸ್ಥಿತರಿದ್ದರು.
– ಸುರೇಶ್ ಎನ್.