ಕೆ.ಆರ್.ಪೇಟೆ: ತಾಲ್ಲೂಕಿನ ಅಘಲಯ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ನಾಗರಘಟ್ಟ ಎನ್.ಎಸ್.ಮಂಜೇಗೌಡ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಅದೇ ರೀತಿ ಸಂಘದ ನೂತನ ಉಪಾಧ್ಯಕ್ಷರಾಗಿ ದೊಡ್ಡಸೋಮನಹಳ್ಳಿ ಚಂದ್ರಿಕಾನಾಗರಾಜು ಅವಿರೋಧವಾಗಿ ಚುನಾಯಿತರಾಗಿದ್ದಾರೆ.
ಅಧ್ಯಕ್ಷ ಸ್ಥಾನ ಬಯಸಿ ಎನ್.ಎಸ್.ಮಂಜೇಗೌಡ, ಉಪಾಧ್ಯಕ್ಷ ಸ್ಥಾನ ಬಯಸಿ ಚಂದ್ರಿಕಾನಾಗರಾಜು ಹೊರತು ಪಡಿಸಿ ಬೇರೆ ಯಾರೂ ಸಹ ನಾಮಪತ್ರ ಸಲ್ಲಿಸದೇ ಇರುವ ಕಾರಣ ಅವಿರೋಧ ಆಯ್ಕೆ ನಡೆಯಿತು.
ಚುನಾವಣಾಧಿಕಾರಿಯಾಗಿ ತಾಲ್ಲೂಕು ಸಹಕಾರ ಅಭಿವೃದ್ಧಿ ಅಧಿಕಾರಿ ಹೆಚ್.ಬಿ.ಭರತ್‌ಕುಮಾರ್, ಸಹ ಚುನಾವಣಾಧಿಕಾರಿಯಾಗಿ ಸಂಘದ ಸಿಇಓ ಮುರುಳೀಧರ್ ಕಾರ್ಯನಿರ್ವಹಣೆ ಮಾಡಿದರು.

ನೂತನ ಅಧ್ಯಕ್ಷರು ಮತ್ತು ಉಪಾಧ್ಯಕ್ಷರನ್ನು ಜಿಲ್ಲಾ ಪಂಚಾಯತ್ ಮಾಜಿ ಸದಸ್ಯರಾದ ಎ.ಎಸ್.ಮಂಜುನಾಥ್, ತಾಲ್ಲೂಕು ಪಿ.ಎಲ್.ಡಿ.ಬ್ಯಾಂಕ್ ಮಾಜಿ ಅಧ್ಯಕ್ಷ ಎ.ಎಸ್.ರಮೇಶ್, ತಾಲ್ಲೂಕು ಎಪಿಎಂಸಿ ಮಾಜಿ ಸದಸ್ಯರಾದ ಮಹಡಿಮನೆ ಮಂಜಣ್ಣ, ಟಿಎಪಿಸಿಎಂಸ್ ಸಂಸ್ಥೆಯ ಮಾಜಿ ಅಧ್ಯಕ್ಷ ಎ.ಎಸ್.ಶ್ರೀಧರ್, ಮುಖಂಡರಾದ ಎ.ವೈ.ವಿಜಯ್‌ಕುಮಾರ್, ಗ್ರಾ.ಪಂ.ಮಾಜಿ ಅಧ್ಯಕ್ಷ ನಾಗರಘಟ್ಟ ಶಾಂತರಾಜು, ಮುಖಂಡರಾದ ಲವಣ್ಣ, ಅನಿಲ್‌ಕುಮಾರ್, ಕುಮಾರಣ್ಣ, ಉಮೇಶ್, ಶ್ರೀನಿವಾಸ್, ಚೇತನ್‌ಬಾಬು, ಕುಮಾರ್, ರಜಿನಿ, ಸಂದೀಪ್, ಲಕ್ಷ್ಮೀಶ್, ಹೊನ್ನೇಗೌಡ, ಈರಣ್ಣ, ಸ್ವಾಮಿ, ರವಿಕುಮಾರ್, ಮಂಜು, ಪರಮೇಶ್, ಕೊಪ್ಪಲು ಮಂಜು, ಸಂಘ ನಿದೇಶಕರಾದ ಅಘಲಯ ಶ್ರೀಧರ್, ಎ.ವೈ.ವಿಜಯ್‌ಕುಮಾರ್, ಎನ್.ಎಸ್.ಮಂಜೇಗೌಡ, ಎನ್.ಆರ್.ರಾಮೇಗೌಡ, ಮಂಜುನಾಥ್, ಕೃಷ್ಣೇಗೌಡ, ಡಿ.ಆರ್.ಕುಮಾರಸ್ವಾಮಿ, ನಾಗಮ್ಮ, ಮಂಜು, ದೇವಮ್ಮ, ರಾಜೇಶ್ ಕೃಷ್ಣೇಗೌಡ, ಎನ್.ಆರ್.ರಾಮೇಗೌಡ ಇತರರು ಅಭಿನಂದಿಸಿದ್ದಾರೆ.

ನೂತನ ಅಧ್ಯಕ್ಷ ಎನ್.ಎಸ್.ಮಂಜೇಗೌಡ ಮಾತನಾಡಿ, ನನಗೆ ಸಿಕ್ಕಿರುವ ಅಧಿಕಾರದ ಅವಧಿಯಲ್ಲಿ ಸಂಘದ ಅಭಿವೃದ್ಧಿಗೆ ಪ್ರಾಮಾಣಿಕವಾಗಿ ಕೆಲಸ ಮಾಡುತ್ತೇನೆ. ಸಂಘದ ವ್ಯಾಪ್ತಿಯ ಎಲ್ಲಾ ಗ್ರಾಮಗಳ ಮುಖಂಡರಿಗೆ ಹಾಗೂ ಶೇರುದಾರರಿಗೆ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ. ಸಂಘದ ಮೂಲಕ ಶೂನ್ಯ ಬಡ್ಡಿ ದರದಲ್ಲಿ ನೀಡಲಾಗುವ ಸಾಲ ಸೌಲಭ್ಯವನ್ನು ಎಲ್ಲಾ ಶೇರುದಾರರಿಗೆ ಒದಗಿಸಿಕೊಡಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಭರವಸೆ ನೀಡಿದರು. ನನಗೆ ಅಧ್ಯಕ್ಷ ಸ್ಥಾನ ಸಿಗಲು ಪ್ರಮುಖ ಕಾರಣಕರ್ತರಾದ ಟಿಎಪಿಸಿಎಂಎಸ್ ಮಾಜಿ ಅಧ್ಯಕ್ಷರಾದ ಎ.ಎಸ್.ಶ್ರೀಧರ್, ಜಿ.ಪಂ.ಮಾಜಿ ಸದಸ್ಯ ಎ.ಎಸ್.ಮಂಜುನಾಥ್, ಪಿ.ಎಲ್.ಡಿ.ಬ್ಯಾಂಕ್ ಮಾಜಿ ಅಧ್ಯಕ್ಷ ಎ.ಎಸ್.ರಮೇಶ್, ಎಪಿಎಂಸಿ ಮಾಜಿ ಅಧ್ಯಕ್ಷರಾದ ಮಹಡಿಮನೆ ಮಂಜಣ್ಣ ಸೇರಿದಂತೆ ಎಲ್ಲಾ ನಿರ್ದೇಶಕರುಗಳಿಗೆ ಹಾಗೂ ಸಂಘದ ವ್ಯಾಪ್ತಿಯ ಎಲ್ಲಾ ಗ್ರಾಮಗಳ ಮುಖಂಡರಿಗೆ ಶೇರುದಾರರಿಗೆ ಕೃತಜ್ಞತೆಗಳನ್ನು ಸಲ್ಲಿಸುವುದಾಗಿ ಎನ್.ಎಸ್.ಮಂಜೇಗೌಡ ತಿಳಿಸಿದ್ದಾರೆ.
- ಶ್ರೀನಿವಾಸ್.ಆರ್