ನಂಜನಗೂಡು-ನಂಜನಗೂಡು ನಗರಸಭೆ ವತಿಯಿಂದ ಉದ್ದಿಮೆ ಪರವಾನಗಿ ಆಂದೋಲನ ಕಾರ್ಯಕ್ರಮಕ್ಕೆ ಬಜಾರ್ ಸ್ಟ್ರೀಟ್’ನ ಶ್ರೀಕಂಠೇಶ್ವರ ಹೋಟೆಲ್ ನಲ್ಲಿ ಉದ್ದಿಮೆ ಪರವಾನಿಗೆ ನೀಡುವ ಮೂಲಕ ಶಾಸಕ ದರ್ಶನ್ ಧ್ರುವನಾರಾಯಣ್ ಅವರು ಇಂದು ಚಾಲನೆ ನೀಡಿದರು.
ನಗರಸಭೆ ವ್ಯಾಪ್ತಿಯ ಉದ್ದಿಮೆದಾರರಿಗೆ ಉದ್ದಿಮೆ ಪರವಾನಿಗೆ ಪಡೆಯಲು ಸರಳ ವಿಧಾನದಲ್ಲಿ ಸ್ಥಳದಲ್ಲೇ ಶುಲ್ಕ ಪಾವತಿಸಿ ನವೀಕರಿಸಿಕೊಳ್ಳುವ ಅವಕಾಶ ಇದಾಗಿದ್ದು ಸರ್ವ ಉದ್ದಿಮೆದಾರರು ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಮಾಜಿ ಶಾಸಕರಾದ ಕಳಲೆ ಕೇಶವಮೂರ್ತಿ,ನಗರಸಭಾ ಅಧ್ಯಕ್ಷರಾದ ಶ್ರೀಕಂಠ ಸ್ವಾಮಿ,ಉಪಾಧ್ಯಕ್ಷರಾದ ರಿಯಾನಾ ಬಾನು ,ನಗರಸಭೆ ಪೌರಯುಕ್ತರಾದ ವಿಜಯ್ ಕುಮಾರ್,ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಸಿ. ಎಂ ಶಂಕರ್,ನಗರಸಭಾ ಸದಸ್ಯರಾದ ಗಾಯತ್ರಿ,ಮಹೇಶ್,ಗಂಗಾಧರ್,ಪ್ರದೀಪ್,ಖಾಲಿದ್,ಮಹದೇವ ಪ್ರಸಾದ್ ,ಸೌಭಾಗ್ಯ,ರಮೇಶ್,ಬಸವರಾಜ್,ರವಿ,ಸೇರಿದಂತೆ ಹಲವು ಮುಖಂಡರು, ಸ್ಥಳೀಯರು ಉಪಸ್ಥಿತರಿದ್ದರು.