
ನಂಜನಗೂಡು-ತಾಲೂಕಿನ ಸಮಗ್ರ ಅಭಿವೃದ್ಧಿಗೆ ಪಣ ತೊಟ್ಟಿರುವ ಶಾಸಕ ದರ್ಶನ್ ಧ್ರುವನಾರಾಯಣ್ ಇಂದು ಹೆಗ್ಗಡಹಳ್ಳಿ ಗ್ರಾಮದಲ್ಲಿ 20 ಲಕ್ಷ ರೂ ವೆಚ್ಚದಲ್ಲಿ ನಡೆಯಲಿರುವ ಸಿ.ಸಿ.ರಸ್ತೆ ಮತ್ತು ಚರಂಡಿ ನಿರ್ಮಾಣ ಕಾಮಗಾರಿ,ಶಿರಮಳ್ಳಿ ಗ್ರಾಮದ ಪರಿಮಿತಿಯಲ್ಲಿ 50 ಲಕ್ಷ ರೂ ವೆಚ್ಚದಲ್ಲಿ ನಿರ್ಮಾಣವಾಗಲಿರುವ ಸಿ.ಸಿ.ರಸ್ತೆ ಮತ್ತು ಚರಂಡಿ ನಿರ್ಮಾಣ ಕಾಮಗಾರಿ,5 ಲಕ್ಷ ರೂ ವೆಚ್ಚದಲ್ಲಿ ಬಸವ ಭವನ ಸಮುದಾಯ ಭವನ ನಿರ್ಮಾಣ ಕಾಮಗಾರಿಗೆ,ಮಡಿವಾಳ ಸಮುದಾಯ ಭವನ ಮುಂದುವರಿದ ಕಾಮಗಾರಿಗೆ, ಕುರಿಹುಂಡಿ ಗ್ರಾಮದಲ್ಲಿ 20 ಲಕ್ಷ ರೂ ವೆಚ್ಚದ ಸಿ.ಸಿ.ರಸ್ತೆ ಮತ್ತು ಚರಂಡಿ ನಿರ್ಮಾಣ ಕಾಮಗಾರಿಗೆ ,ವಿಶ್ವಕರ್ಮ ಸಮುದಾಯ ಭವನ ನಿರ್ಮಾಣ ಕಾಮಗಾರಿಗೆ 5 ಲಕ್ಷ ರೂ ವೆಚ್ಚದಲ್ಲಿ ಗುದ್ದಲಿ ಪೂಜೆಯನ್ನು ನೆರವೇರಿಸಿದರು.

ಇದೆ ಸಂದರ್ಭದಲ್ಲಿ ಗ್ರಾಮಸ್ಥರುಗಳಿಂದ ಹಲವು ಅಹವಾಲುಗಳನ್ನು ಸ್ವೀಕರಿಸಿದ ಶಾಸಕರು ಬಹುತೇಕವನ್ನು ಸ್ಥಳದಲ್ಲೇ ಪರಿಹರಿಸಿಕೊಟ್ಟು ಉಳಿದ ಅಹವಾಲುಗಳ ಶೀಘ್ರ ಬಗೆ ಹರಿಸುವ ಭರವಸೆಯನ್ನು ನೀಡಿದರು.
ಈ ಸಂದರ್ಭದಲ್ಲಿ ಮಾಜಿ ಶಾಸಕರಾದ ಕಳಲೆ ಕೇಶವಮೂರ್ತಿ ,ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಕುರಹಟ್ಟಿ ಮಹೇಶ್ ,ಹುಲ್ಲಹಳ್ಳಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಶ್ರೀಕಂಠ ನಾಯಕ,ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷರಾದ ಕೆ. ಮಾರುತಿ ,ಗ್ರಾ. ಪಂ ಅಧ್ಯಕ್ಷರಾದ ಕಾಂತರಾಜು,ಮಾಜಿ ಗ್ರಾ. ಪಂ ಅಧ್ಯಕ್ಷರಾದ ನಾಗೇಶ್ ರಾಜ್,ರಾಜ್ಯ ಎಸ.ಟಿ ಘಟಕದ ಪ್ರಧಾನ ಕಾರ್ಯದರ್ಶಿ ದೊರೆಸ್ವಾಮಿ ನಾಯಕ,ಮುಖಂಡರಾದ ಹುಚ್ಚೇಗೌಡ, ಪ್ರಕಾಶ್ ,ನಾರಾಯಣಸ್ವಾಮಿ,ಗ್ರಾ. ಪಂ ಅಧ್ಯಕ್ಷರಾದ ಭಾಗ್ಯಮ್ಮ,ಮಹದೇವಶೆಟ್ಟಿ,ಬೆಳ್ಳಶೆಟ್ಟಿ,ಹುಚ್ಚಯ್ಯ,ಮಾದಪ್ಪ ,ಅಭಿನಂದನ್ ಪಾಟೀಲ್ ,ಸಿದ್ದಪ್ಪ,ಗುರುಸ್ವಾಮಿ,ಹಲ್ಲರೆ ಮಹದೇವು,ಕುರಿಹುಂಡಿ ರಾಜು,ಅಜಯ್ ,ಸೂರ್ಯ ಕುಮಾರ್,ಮಂಜುನಾಥ್,ಭಾಸ್ಕರ್,ಜ್ಯೋತಿ,ಗೌತಮಿ ಆನಂದ್ ,ಸ್ವಾಮಿ ಗೌಡ,ಚಂದನ್ ಗೌಡ ಸೇರಿದಂತೆ ಹಲವು ಮುಖಂಡರುಗಳು,ಕಾರ್ಯಕರ್ತರು ಉಪಸ್ಥಿತರಿದ್ದರು.
——–——–ಮಧುಕುಮಾರ್