ನಂಜನಗೂಡು – ಕ್ಷೇತ್ರದ ಜನಪ್ರಿಯ ಯುವ ಶಾಸಕ ದರ್ಶನ್ ಧ್ರುವನಾರಾಯಣ್ ಅವರು ನಂಜನಗೂಡು ತಾಲ್ಲೂಕಿನ ತರಗನಹಳ್ಳಿ ಗ್ರಾಮದಲ್ಲಿ ಇಂದು ಸಾಮಾನ್ಯ ವರ್ಗದ ಬೀದಿಯಲ್ಲಿ ಸಿ. ಸಿ ಚರಂಡಿ ಮತ್ತು ರಸ್ತೆ ನಿರ್ಮಾಣ ಕಾಮಗಾರಿಗೆ 15 ಲಕ್ಷ ರೂ ವೆಚ್ಚದಲ್ಲಿ ಗುದ್ದಲಿ ಪೂಜೆಯನ್ನು ನೆರವೇರಿಸಿದರು.
ಈ ವೇಳೆ ಮಾಜಿ ಶಾಸಕರಾದ ಕಳಲೆ ಕೇಶವಮೂರ್ತಿ ರವರು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಶ್ರೀಕಂಠ ನಾಯಕ ರವರು, ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷರಾದ ಕೆ. ಮಾರುತಿ ರವರು, ಬಸವರಾಜ್ ರವರು, ಮಂಜು ನಾಯಕ ರವರು, ಹುಲ್ಲಹಳ್ಳಿ ಮಾದಪ್ಪ ರವರು, ಅಭಿನಂದನ್ ಪಟೇಲ್ ರವರು, ನಂಜುಂಡ ಸ್ವಾಮಿ ರವರು, ಶಿವಣ್ಣ ರವರು, ಸೂರ್ಯ ಕುಮಾರ್ ರವರು, ದುಗ್ಗಹಳ್ಳಿ ಶಿವನಾಗಪ್ಪ ರವರು, ಹಲ್ಲರೆ ಮಹದೇವು ರವರು, ಕಗ್ಗಲಿಹುಂಡಿ ಮಹದೇವು ರವರು, ಮಹೇಶ್ ರವರು, ಆದರ್ಶ್ ರವರು, ದೇಬೂರು ಅಶೋಕ್ ರವರು, ಸೋಮೇಶ್ ರವರು, ಹಗಿನವಾಳು ಬಸವಣ್ಣ ರವರು, ಶಿವಕುಮಾರ್ ರವರು, ಸೇರಿದಂತೆ ಹಲವು ಮುಖಂಡರುಗಳು, ಯಜಮಾನರುಗಳು ಗ್ರಾಮಸ್ಥರುಗಳು ಉಪಸ್ಥಿತರಿದ್ದರು.